28.4 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರೂ.1.00 ಕೋಟಿ ವೆಚ್ಚದಲ್ಲಿ ಬಳಂಜ- ಸುದೆಗುಂಡಿ ಸಂಪರ್ಕ ರಸ್ತೆ ಕಾಂಕ್ರೀಟಿಕರಣ: ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ:ಬೇಡಿಕೆಗೆ ಸ್ಪಂದಿಸಿದ ಶಾಸಕರಿಗೆ ಅಭಿನಂದಿಸಿದ ಗ್ರಾಮಸ್ಥರು

ಬಳಂಜ: ಕಳೆದ ಹಲವು ವರ್ಷಗಳಿಂದ ಬಳಂಜ- ಸುದೆಗುಂಡಿ- ತೆಂಕಕಾರಂದೂರು ಗ್ರಾಮದ ಜನರ ಬೇಡಿಕೆಯಾದ ಬಳಂಜ ಸುದೆಗುಂಡಿ ರಸ್ತೆಗೆ ಶಾಸಕ ಹರೀಶ್ ಪೂಂಜರವರು ಜುವ 12ರಂದು ಶಿಲಾನ್ಯಾಸ ನೇರವೇರಿಸಿದರು.

ರೂ.1.00 ಕೋಟಿ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣಗೊಳ್ಳುತ್ತಿದ್ದು ಈ ಬಳಂಜ- ನಾಲ್ಕೂರು- ತೆಂಕಕಾರಂದೂರು ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸುವುದಾಗಿ ಶಾಸಕ ಹರೀಶ್ ಪೂಂಜರವರು ತಿಳಿಸಿದರು. ಬಳಂಜ-ನಾಲ್ಕೂರು- ತೆಂಕಕಾರಂದೂರುವಿನ ಆಟೋ ಚಾಲಕ ಮಾಲಕ ಸಂಘದಿಂದ ಸುಸಜ್ಜಿತ ಆಟೋ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಪ್ರಗತಿಪರ ಕೃಷಿಕರಾದ ಸಂತೋಷ್ ಕುಮಾರ್ ಕಾಪಿನಡ್ಕ, ಸತೀಶ್ ರೈ ಬಾರ್ದಡ್ಕ,ಹಿರಿಯರಾದ ಯುವರಾಜ್ ಜೈನ್,ಇಂಜೀನಿಯರ್ ದಶರಥ,ಗಣೇಶ್ ಸಂಭ್ರಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಗ್ನೀವೀರ್ ಯೋಜನೆಯಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿರುವ ಬಳಂಜದ ರಂಜಿತ ಸಹೋದರರ ಹೆತ್ತವರನ್ನು ಗೌರವಿಸಲಾಯಿತು. ಅನುದಾನ ನೀಡಿದ ಶಾಸಕರನ್ನು ಅಭಿನಂದಿಸಲಾಯಿತು.

Related posts

ಕುಂಭಶ್ರೀ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆ

Suddi Udaya

ಯಕ್ಷ ಭಾರತಿ ಕನ್ಯಾಡಿ ವತಿಯಿಂದ ಮುಖವರ್ಣಿಕೆಯ ಶಿಬಿರ

Suddi Udaya

ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ನೇಮಕ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಭೇಟಿ

Suddi Udaya

ಜಮಲಾಬಾದ್ (ಗಡಾಯಿ ಕಲ್ಲು) ಕೋಟೆಗೆ ರೋಪ್‌ವೇ ನಿರ್ಮಾಣಕ್ಕೆ ಯು.ಟಿ. ಖಾದರ್ ಅವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳ ಸಮುದಾಯದ ಅಭಿವೃದ್ಧಿ ವಿಭಾಗ ಆಶ್ರಯದಲ್ಲಿ 418 ಶಾಲೆಗಳಿಗೆ ರೂ.2.50 ಕೋಟಿ ಮೊತ್ತದ 3472 ಜೊತೆ ಪೀಠೋಪಕರಣ ವಿತರಣೆಗೆ ಡಾ.ಹೆಗ್ಗಡೆ ಚಾಲನೆ

Suddi Udaya
error: Content is protected !!