27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ಇನ್ನು 24 x 7 ವಿಶೇಷ ಪರಿಣತಿ ಹೊಂದಿದ  ಮೂಳೆ ತಜ್ಞರು ಲಭ್ಯ

ಉಜಿರೆ: ಬೆನಕ ಹೆಲ್ತ್ ಸೆಂಟರ್, ಉಜಿರೆಯ ಮೂಳೆ ತಜ್ಞರಾದ ಡಾ. ರೋಹಿತ್ ಜಿ. ಭಟ್ ಅವರು ತಮ್ಮ ವೈದ್ಯಕೀಯ ಕ್ಷೇತ್ರದ ಪರಿಣತಿಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮುಂಬೈನಲ್ಲಿ ಪಡೆದ ವಿಶೇಷ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

Shoulder Arthroscopy & Arthroplasty (ಭುಜದ ಆರ್ತ್ರೋಸ್ಕೋಪಿ ಮತ್ತು ಆರ್ತ್ರೋಪ್ಲಾಸ್ಟಿ) ಕ್ಷೇತ್ರದಲ್ಲಿ ಫೆಲೋಶಿಪ್ ಪೂರ್ಣಗೊಳಿಸಿದ್ದು, ಜೊತೆಗೆ Musculoskeletal Ultrasound (ಮಸ್ಕ್ಯುಲೋಸ್ಕೆಲೆಟಲ್ ಅಲ್ಟ್ರಾಸೌಂಡ್) ವಿಷಯದಲ್ಲಿಯೂ ವಿಶೇಷ ತರಬೇತಿಯನ್ನು ಪಡೆದಿದ್ದಾರೆ.

ಈ ತರಬೇತಿಯನ್ನು ಮುಂಬೈನ ಖ್ಯಾತ ಭುಜ ತಜ್ಞರಾದ ಡಾ. ಚಿಂತನ್ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿರುವ ಡಾ. ರೋಹಿತ್ ಜಿ. ಭಟ್ ಅವರು, ಮುಂಬೈನ ಪ್ರತಿಷ್ಠಿತ ಆಸ್ಪತ್ರೆಗಳಾದ ನಿರ್ಮಲಾ ಆಸ್ಪತ್ರೆ (Nirmala Hospital), ಬ್ರೀಚ್ ಕ್ಯಾಂಡಿ ಆಸ್ಪತ್ರೆ (Breach Candy Hospital), ಎಚ್.ಎನ್. ರಿಲಯನ್ಸ್ ಆಸ್ಪತ್ರೆ (H.N. Reliance Hospital) ಸೇರಿದಂತೆ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಆಧುನಿಕ ಚಿಕಿತ್ಸಾ ವಿಧಾನಗಳು ಮತ್ತು ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳ ಕುರಿತು ಅಮೂಲ್ಯ ಅನುಭವವನ್ನು ಪಡೆದುಕೊಂಡಿದ್ದಾರೆ.

ಭುಜದ ಸಮಸ್ಯೆಗಳು, ಕೀಲು ಸಂಬಂಧಿತ ಚಿಕಿತ್ಸೆಗಳು ಮತ್ತು ಸಂಕೀರ್ಣ ಮೂಳೆ ಶಸ್ತ್ರಚಿಕಿತ್ಸೆಗಳ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಂಡಿರುವ ಡಾ. ರೋಹಿತ್ ಜಿ. ಭಟ್ ಅವರು ಇದೀಗ ಈ ಅನುಭವದೊಂದಿಗೆ ಮತ್ತೆ ಬೆನಕ ಹೆಲ್ತ್ ಸೆಂಟರ್, ಉಜಿರೆಯಲ್ಲಿ ರೋಗಿಗಳಿಗೆ ಸೇವೆ ನೀಡಲಿದ್ದಾರೆ.

ಮುಂಬೈನಲ್ಲಿ ಪಡೆದ ಈ ಉನ್ನತ ತರಬೇತಿ ಮತ್ತು ಅನುಭವವು ಡಾ. ರೋಹಿತ್ ಜಿ. ಭಟ್ ಅವರ ವೈದ್ಯಕೀಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದ್ದು, ಬೆನಕ ಹೆಲ್ತ್ ಸೆಂಟರ್‌ನ ಗುಣಮಟ್ಟದ ಆರೋಗ್ಯ ಸೇವೆಗೆ ಮತ್ತಷ್ಟು ಬಲ ನೀಡಲಿದೆ.

ಡಾ.ರೋಹಿತ್ ಜಿ ಭಟ್ ರವರು ತಮ್ಮ MBBS ಪದವಿಯನ್ನು ಮೈಸೂರಿನ ಪ್ರಖ್ಯಾತ ಮೆಡಿಕಲ್ ಕಾಲೇಜಿನಲ್ಲಿ ಮುಗಿಸಿ, MS(Ortho) ವೈದ್ಯಕೀಯ ಪದವಿಯನ್ನು ರಾಜಸ್ಥಾನದ  ಕೋಟಾದಲ್ಲಿ ಚಿನ್ನದ ಪದಕದೊಂದಿಗೆ  ಪೂರ್ಣಗೊಳಿಸಿರುತ್ತಾರೆ. ಬೆಂಗಳೂರಿನ ಖ್ಯಾತ ವೈದ್ಯಕೀಯ ಸಂಸ್ಥೆ ಅಪೋಲೋ ಮತ್ತು ಭಗವಾನ್ ಮಹಾವೀರ ಜೈನ್ ಇಲ್ಲಿ Upper Limb with Hand and Micro-Surgery ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಬೆನಕ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ಇವರು ಡಾ.ರೋಹಿತ್ ಜಿ ಭಟ್ ಇವರನ್ನು ಹೂಗುಚ್ಛ ನೀಡಿ ಸ್ವಾಗತಿಸಿ, ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ನಗರ ಪ್ರದೇಶಗಳಲ್ಲಿ ಸಿಗುವಂತಹ ವಿಶೇಷ ವೈದ್ಯಕೀಯ ಸೇವೆ ಲಭಿಸುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ಡಾ.ಭಾರತಿ ಜಿ.ಕೆ , ಡಾ.ಆದಿತ್ಯ ರಾವ್ , ಡಾ. ಅಂಕಿತ  ಜಿ ಭಟ್ , ಡಾ.ನವ್ಯ ರವರು  ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಉಮಾ ಡಿ. ಗೌಡ ಹಟ್ಟತ್ತೋಡಿ ಸೇವಾ ನಿವೃತ್ತಿ

Suddi Udaya

ಉಜಿರೆ ಎಸ್‌.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆ

Suddi Udaya

ಮಲವಂತಿಗೆ: ಉಮೇಶ್ ರವರಿಗೆ ಹಲ್ಲೆ, ಬೆದರಿಕೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶ್ರೀರಾಮ ಶಿಶು ಮಂದಿರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

Suddi Udaya

ಲಾಯಿಲ: ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜೆ, ನೂರಾರು ವೃತಧಾರಿಗಳು ಪೂಜೆಯಲ್ಲಿ ಭಾಗಿ

Suddi Udaya

ನಡ:ಯುವವಾಹಿನಿ ಡೆನ್ನಾನ ಡೆನ್ನನ 2024 ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!