32.5 C
ಪುತ್ತೂರು, ಬೆಳ್ತಂಗಡಿ
October 15, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿಬೆಳ್ತಂಗಡಿವರದಿ

ನಾಪತ್ತೆಯಾಗಿದ್ದ ಯುವಕನ ಶವ ಪಲ್ಗುಣಿ ನದಿಯಲ್ಲಿ ಪತ್ತೆ

ಬೆಳ್ತಂಗಡಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಶವ ಇಂದು ಹೊಸಂಗಡಿಯ ಪೇರಿ ಸಮೀಪ ಪಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ. ಹೊಸಂಗಡಿಯ ಪೇರಿ ನಿವಾಸಿ ಕಿಶೋರ್ (31) ಎಂಬಾತನೇ ಮೃತ ಯುವಕನಾಗಿದ್ದಾನೆ.

ಜು.10 ರಂದು ಮನೆಯಿಂದ ಹೊರಗೆ ಹೋದ ಕಿಶೋರ್ ಮನೆಗೆ ಹಿಂತಿರುಗದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಜು. 11 ರಂದು ವೇಣೂರು ಪೊಲೀಸರಿಗೆ ದೂರು ನೀಡಲಾಗಿತ್ತು. ಮನೆಮಂದಿ ಹಾಗೂ ಊರಿನವರು ಮೂರು ದಿನಗಳಿಂದ ನಿರಂತರ ಹುಡುಕಾಟ ನಡೆಸಿದ್ದರು ಯಾವಯದೇ ಮಾಹಿತಿ ಲಭ್ಯವಾಗುರಲಿಲ್ಲ.

ಸೋಮವಾರ ಮತ್ತೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಊರಿನವರು ಪಲ್ಗುಣಿ ನದಿಯಲ್ಲಿ ಬೋಟ್ ಸಹಾಯದಲ್ಲಿ ಹುಡುಕಾಡಿದ್ದು, ಮೃತದೇಹ ನದಿನೀರಿನ ಪೊದೆಯ ಅಡಿಯಲ್ಲಿ‌ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಕಿಶೋ‌ರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಆಕಸ್ಮಿಕವಾಗಿ ಕಾಲುಜಾರಿ ನದಿ ನೀರಿಗೆ ಬಿದ್ದಿದ್ದಾರೋ ಎಂಬುದು ಖಚಿತ ಮಾಹಿತಿ ಲಭ್ಯವಾಗಿಲ್ಲ. ಪಲೀಸರು ಪ್ರಕರಣ ದಾಂಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಉಜಿರೆ ಜನಾದ೯ನ ದೇವಸ್ಥಾನ ಅನುವಂಶಿಯ ಆಡಳಿತ ಮೊಕೇಸರ ಯು. ವಿಜಯ ರಾಘವ ಪಡುವೆಟ್ನಾಯ ವಿಧಿವಶ

Suddi Udaya

ನಾಲ್ಕೂರು: ಪಾಲೆದಡಿ ಸಂಕಪ್ಪ ಪೂಜಾರಿ ನಿಧನ

Suddi Udaya

ವಾಣಿ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ನೇಜಿ ನಾಟಿ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಕು. ಸಂಜ್ಞಾ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಪೆರೋಡಿತ್ತಾಯಕಟ್ಟೆ: ಭಾರಿ ಗಾಳಿ ಮಳೆಗೆ ಮನೆಗೆ ಹಾನಿ

Suddi Udaya

ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ಪೋಷಕರಿಂದ ಶ್ರಮದಾನ 

Suddi Udaya
error: Content is protected !!