26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ವತಿಯಿಂದ ಪುಸ್ತಕ ಮತ್ತು ಪೆನ್ನು ವಿತರಣೆ:

ಬಳಂಜ : ಜಿಲ್ಲೆಯ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ನೇತೃತ್ವದಲ್ಲಿ ಮಂಡಳಿಯ ಸದಸ್ಯರಿಗೆ ಉಚಿತ ಪುಸ್ತಕ ಹಾಗೂ ಪೆನ್ನು ವಿತರಣಾ ಕಾರ್ಯಕ್ರಮವು ಜು.12 ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿದರು. ಕಾರ್ಯಕ್ರಮವನ್ನು ಉದ್ಯಮಿಗಳಾದ ಯೋಗೀಶ್ ಪೂಜಾರಿ ಕಾಪಿನಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್ ಎಸ್,
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಲಯಾದ್ಯಕ್ಷ ಸದಾನಂದ ಸಾಲಿಯಾನ್, ಮಂಡಳಿಯ ಮಾಜಿ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.

ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವರ್ಷದ ಪುಸ್ತಕ ವಿತರಣೆಗೆ ಯುವ ಉದ್ಯಮಿಗಳಾದ ಅಶ್ರಫ್ ಬಳಂಜ ಪೂರ್ಣ ಸಹಕಾರವನ್ನು ನೀಡಿದ್ದು ಅಶ್ರಫ್ ರವರ ಸಲಹೆಯಂತೆ ಅವರ ಆತ್ಮೀಯ ಸ್ನೇಹಿತರು ಹಾಗೂ ಮಂಡಳಿಯ ಸಹ ಸಂಚಾಲಕರಾದ ಪ್ರಣಾಮ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಮನ್ವಿತ ಸ್ವಾಗತಿಸಿದರು. ಪ್ರತಿಕ್ಷಾ ಪ್ರಾರ್ಥನೆ ಹಾಡಿದರು. ಮಂಡಳಿಯ ತರಬೇತುದಾರೆ ಕು.ಮಾನ್ಯ ಕಾರ್ಯಕ್ರಮ ನಿರೂಪಿಸಿ, ಮಂಡಳಿಯ ಅಧ್ಯಕ್ಷೆ ಕುಮಾರಿ ಪ್ರಸಿದ್ದಿ ಶೆಟ್ಟಿ ಧನ್ಯವಾದ ಸಲ್ಲಿಸಿದರು. ಸಂಜೆ ಮಂಡಳಿಯ ವತಿಯಿಂದ ಬೊಲ್ಲಜ್ಜ ದೈವಕ್ಕೆ ಅಗೆಲು ಸೇವೆ ನಡೆಯಿತು.

Related posts

ಉಜಿರೆ  : ಎಸ್.ಡಿ.ಎಂ ಪ.ಪೂ. ವಸತಿ ಕಾಲೇಜಿನಲ್ಲಿ ‘ಕಾರ್ಗಿಲ್ ವಿಜಯ ದಿವಸ ಆಚರಣೆ’

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಭೇಟಿ

Suddi Udaya

ಉಜಿರೆ ಮೈಸೂರು ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ರೂ 1 ಸಾವಿರ ಖರೀದಿಯೊಂದಿಗೆ ಆಕರ್ಷಕ ಗಿಪ್ಟ್

Suddi Udaya

ನಾಳ ಶರನ್ನವರಾತ್ರಿ ಪೂಜೆ ಮತ್ತು ಭಜನೋತ್ಸವ

Suddi Udaya

ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ದೀಪೋತ್ಸವ
ಸಾಮೂಹಿಕ ಗೋಪೂಜೆ – ಗೋ ನಂದಾರತಿ ಕಾರ್ಯಕ್ರಮ

Suddi Udaya

ಮಾಲಾಡಿ ಮತ್ತು ಸೋಣಂದೂರು ಶಕ್ತಿ ಕೇಂದ್ರದ ವತಿಯಿಂದ ಬೆಸ್ಟ್ ಎಂ.ಎಲ್ ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ ಪೂಂಜರಿಗೆ ಗೌರಾವಾಭಿನಂದನೆ

Suddi Udaya
error: Content is protected !!