September 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೈನಾಡು ಶ್ರೀ ರಾಮ ಯುವಕ ಸಂಘ ದವರು ನೀಡಿದ ಸ್ಥಳದಲ್ಲಿ ನೂತನ ಅಂಗನವಾಡಿ ಕಟ್ಟಡ ಶುಭಾರಂಭ

ಪಿಲಾತಬೆಟ್ಟು : ಶ್ರೀ ರಾಮ ಯುವಕ ಸಂಘ ದ ವತಿಯಿಂದ ನೀಡಲ್ಪಟ್ಟ ಹೊಸ ಜಾಗದಲ್ಲಿ ಬಂಟ್ವಾಳ ಶಾಸಕರ ಹಾಗೂ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅನುದಾನ ದಿಂದ ನಿರ್ಮಾಣ ಮಾಡಿದ ನೂತನ ಅಂಗನವಾಡಿ ಕಟ್ಟಡವು ಗಣಹೋಮ ದೊಂದಿಗೆ ಶುಭಾರಂಭಗೊಂಡಿತು.

ಕಳೆದ ಮಳೆಗಾಲದ ಸಮಯದಲ್ಲಿ ಹಳೆಯ ಅಂಗನವಾಡಿ ಕಟ್ಟಡ ವು ಶಿಥಿಲಗೊಂಡಿದ್ದು, ನಂತರದ ದಿನಗಳಲ್ಲಿ ಅಂಗನವಾಡಿಯನ್ನು ತಾತ್ಕಾಲಿಕವಾಗಿ ಹತ್ತಿರದ ಶ್ರೀ ರಾಮ ಭಜನಾ ಮಂದಿರ ದ ಸಭಾ ಭವನದಲ್ಲಿ ನಡೆಸಲಾಗುತ್ತಿತ್ತು.
ಇವತ್ತು ಬೆಳಿಗ್ಗೆ ಅಂಗನವಾಡಿ ಸಹಾಯಕಿಯರು, ನೇತ್ರಾವತಿ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಶ್ರೀ ದುರ್ಗಾ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಶ್ರೀ ರಾಮ ಭಜನಾ ಮಂದಿರ, ಶ್ರೀ ರಾಮ ಯುವಕ ಸಂಘ, ನಿವೇದಿತಾ ಮಾತೃ ಮಂಡಳಿ , ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು ಗಳ ಸಹಯೋಗದಲ್ಲಿ ಗಣಹೋಮ ದೊಂದಿಗೆ ಶುಭಾರಂಭಗೊಂಡಿತು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯಂ ತುಂಗಪ್ಪ ಬಂಗೇರ, ಪಂಚಾಯತ್ ಸದಸ್ಯರಾದ ಲಕ್ಷ್ಮೀ ನಾರಾಯಣ ಹೆಗ್ಡೆ, ಶ್ರೀಮತಿ ಶಾರದಾ, ಶ್ರೀಮತಿ ಹರ್ಷಿಣಿ ಪುಷ್ಪಾನಂದ, ಶ್ರೀಮತಿ ಲೀಲಾವತಿ ಕೆರೆ ಕೋಡಿ, ನೆಲ್ವಿಸ್ಟರ್ ಪಿಂಟೋ ಹಾಗೂ ಪಿ. ಪ್ರಾ. ಕೃ.ಪ. ಸ. ಸಂಘದ ನಿರ್ದೇಶಕರಾದ ಸರೋಜಾ ಧರ್ಣಪ್ಪ ಶೆಟ್ಟಿ, ಬಂಟ್ವಾಳ ತಾಲೂಕು ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಶೋಭಾ, ಅಂಗನವಾಡಿ ಶಿಕ್ಷಕಿ ಅನಿತಾ ಕ್ರಾಸ್ತಾ ನೈನಾಡು, ಪ್ರಭಾರ ಶಿಕ್ಷಕಿ ಶ್ರೀಮತಿ ಶಾಂತಲಾ ಮೂರ್ಜೆ , ಸಹಾಯಕಿ ಶ್ರೀಮತಿ ಪದ್ಮಾವತಿ ಅಂಜಾರು, ಪಿಲಾತಬೆಟ್ಟು ಗ್ರಾಮ ಪಂಚಾಯತ್ ನ ಶ್ರೀಮತಿ ಜಯಂತಿ, ಶೀನ , ಅಂಗನವಾಡಿ ಪೋಷಕ ತಂಡದ ಅಧ್ಯಕ್ಷೆ ಶ್ರೀಮತಿ ಅನೂಷ ರಮೇಶ್ ನೈನಾಡು, ಮಾತೃ ಮಂಡಳಿ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್ ಅಚ್ಚಿನಡ್ಕ , ಆಶಾ ಕಾರ್ಯಕರ್ತೆ ಪ್ರಮೀಳಾ , ಕಂಟ್ರಾಕ್ಟರ್ ಪುಷ್ಪಾನಂದ ಮೂರ್ಜೆ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ರಾಮ ಭಜನಾ ಮಂದಿರ ನೈನಾಡು ವತಿಯಿಂದ ಗಣಹೋಮದ ವ್ಯವಸ್ಥೆ ಮಾಡಲಾಗಿದ್ದು, ಶ್ರೀ ದುರ್ಗಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರುಗಳು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರದ ವ್ಯವಸ್ಥೆ ಮಾಡಿದ್ದರು. ನೇತ್ರಾವತಿ ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಹಾರ ದ ವ್ಯವಸ್ಥೆ ಮಾಡಿದ್ದರು.

Related posts

ಡಾ. ಎನ್. ವಿನಯ ಹೆಗ್ಡೆ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ತಣ್ಣೀರುಪಂತ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ರಕ್ತೇಶ್ವರಿಪದವು ಸ.ಕಿ.ಪ್ರಾ. ಶಾಲೆಯಲ್ಲಿ ಶಾರದಾ ಪೂಜೆ

Suddi Udaya

ಪದ್ಮಂಜ ಸೇವಾ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಂಗಳೂರು ರುಕ್ಸ್ ವೈಯರ್ಲೆಸ್ ಪ್ರೈ.ಲಿ. ನ ಸಿ.ಎಸ್.ಆರ್ ಅನುದಾನದಿಂದ ಸೇವಾಧಾಮದಲ್ಲಿ ಸೋಲಾರ್ ಅಳವಡಿಕೆ

Suddi Udaya

ಉದ್ಯಮಿ ಸತ್ಯನಾರಾಯಣ ಹೊಳ್ಳ ರವರಿಂದ ಮುಂಡಾಜೆ ಸ .ಉ . ಪ್ರಾ . ಶಾಲಾ ಮಕ್ಕಳಿಗೆ ಕೊಡೆ ವಿತರಣೆ

Suddi Udaya
error: Content is protected !!