27.5 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಶ್ರೀ ಧ. ಮಂ.ಪದವಿ ಪೂರ್ವ ಕಾಲೇಜಿನಲ್ಲಿ “ಭಿತ್ತಿಪತ್ರಿಕೆ ಅನಾವರಣ”

ಉಜಿರೆ : “ಪ್ರತಿಭೆಗಳನ್ನು ಬಳಸಲು ಅವಕಾಶ ಸಿಕ್ಕಿದಾಗ ಅದನ್ನು ಸರಿಯಾಗಿ ಬಳಸಿಕೊಂಡು ಬೆಳೆಸಿಕೊಂಡರೆ ಅದ್ಭುತ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ. ಭಿತ್ತಿ ಪತ್ರಿಕೆಗಳ ಜೊತೆ ನೀವು ಇಷ್ಟ ಪಟ್ಟು ತೊಡಗಿಸಿಕೊಂಡರೆ ಮುಂದೆ ಕಲೆ ಮತ್ತು ಬರವಣಿಗೆಯ ಮಾಧ್ಯಮದಲ್ಲಿ ಅದೇ ನಿಮ್ಮನ್ನು ಬೆಳೆಸುತ್ತದೆ. ಭಿತ್ತಿ ಪತ್ರಿಕೆಗಳು ಆಕರ್ಷಕವಾಗಿ ಮಾತ್ರವಲ್ಲದೆ ಸ್ವಂತಿಕೆ ಮತ್ತು ಸೃಜನಾತ್ಮಕ ತೆಯಿಂದ ಕೂಡಿರಲಿ” ಎಂದು ಶ್ರೀ ಧ. ಮಂ. ಕಾಲೇಜು ( ಸ್ವಾಯತ್ತ ) ಉಜಿರೆ ಇಲ್ಲಿನ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಮುಖ್ಯಸ್ಥ ಪ್ರಸ್ತುತ “ಮಂಜುವಾಣಿ” ಪತ್ರಿಕೆಯ ಸಂಪಾದಕರ ಡಾ. ಭಾಸ್ಕರ ಹೆಗಡೆ ಅವರು ತಿಳಿಸಿದರು.

ಅವರು ಇತ್ತೀಚೆಗೆ ಶ್ರೀ ಧ. ಮಂ. ಪದವಿ ಪೂರ್ವ ಕಾಲೇಜು, ಉಜಿರೆಯಲ್ಲಿ ” ಭಿತ್ತಿಪತ್ರಿಕೆ ಅನಾವರಣ ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ, ಮಾಹಿತಿಪೂರ್ಣವಾದ ಸಂಗತಿಗಳನ್ನು ಮತ್ತು ತಮ್ಮ ಅನುಭವಕ್ಕೆ ಬಂದ ವಿದ್ಯಾರ್ಥಿ ಸಾಧಕರ ಬಗ್ಗೆ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರ ಪ್ರಮೋದ್ ಕುಮಾರ್ ಬಿ. ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಒಳ್ಳೆಯ ಭಾವನೆಗಳನ್ನು, ವಿಚಾರಗಳನ್ನು, ಅನಿಸಿಕೆಗಳನ್ನು ಪ್ರಕಟಿಸಲು ಭಿತ್ತಿ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಳ್ಳಿ. ಆ ಮೂಲಕ ನಿಮ್ಮ ಪ್ರತಿಭೆ ಹೊರಬರಲಿ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ ಹಾಗೂ ಕಾರ್ಯಕಾರಿ ಸಮಿತಿ ಮುಖ್ಯಸ್ಥೆ ವೈದೇಹಿ ಎಸ್, ಸದಸ್ಯರಾದ ಸುಭಾಷ್ ರಾವ್ ಬೋಳೂರು, ಮನೋಹರ್ ಶೆಟ್ಟಿ, ಅಶ್ವಿನಿ ಎಚ್ ಆರ್, ಅಂಬಿಕಾ ಕೆ ಹಾಗೂ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಚಾರಿತ್ರ ಜೈನ್ ಕಾರ್ಯಕ್ರಮ ನಿರೂಪಿಸಿ, ರಚನ ಬಿ.ಜೆ.ಅತಿಥಿ ಪರಿಚಯ ನೀಡಿ, ಭಾಗ್ಯಲಕ್ಷ್ಮಿ ಸ್ವಾಗತಿಸಿ, ಸ್ಮೃತಿ ಧನ್ಯವಾದ ಸಲ್ಲಿಸಿದರು.

Related posts

ಭಾರತೀಯ ನೌಕಾಪಡೆಗೆ ಬಾರ್ಯದ ಅಜಯ್ ಜೋಹಾನ್ ಬ್ರಾಗ್ಸ್, ಆಯ್ಕೆ: ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ನೀರಚಿಲುಮೆ ನರ್ಸರಿಯ ಮಣ್ಣಿನ ಅಡಿಯಲ್ಲಿ ಬಿಳಿ ಬಣ್ಣದ ಉದ್ದನೆಯ 28 ಮೊಟ್ಟೆಗಳು ಪತ್ತೆ

Suddi Udaya

ಉಜಿರೆಯ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ‘ಎಸ್.ಡಿ.ಎಂ. ಕುರಿತು ಒಳನೋಟ’ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮ್ಯಾಂಗೋ ಡೇ

Suddi Udaya

ಸೆ.12: ಕೊಕ್ಕಡದಲ್ಲಿ ಪ್ರಜಾಸೇವೆ ಆಂದೋಲನ ಸಭೆ

Suddi Udaya

ಬುರುಡೆ ಪ್ರಕರಣ ವರದಿಯ ಆದೇಶ ಮತ್ತೆ ಜ.3ಕ್ಕೆ ಮುಂದೂಡಿದ ಕೋರ್ಟ್

Suddi Udaya
error: Content is protected !!