25.1 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೃಹ ಜ್ಯೋತಿ ಯೋಜನೆ: ಮನೆ ಮನೆಗೆ ತೆರಳಿ ಅರ್ಜಿ ಸ್ವೀಕಾರ – ಗೊಂದಲ ಬೇಡ, ಅರ್ಹರನ್ನು ಕೈಬಿಡುವುದಿಲ್ಲ: ಪದ್ಮನಾಭ ಸಾಲಿಯನ್

ಬೆಳ್ತಂಗಡಿ: ಗೃಹ ಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳ ಅನುಕೂಲಕ್ಕಾಗಿ ಮೆಸ್ಕಾಂ ಇಲಾಖೆಯ ವತಿಯಿಂದ ಮನೆ ಮನೆಗೆ ತೆರಳಿ ಅರ್ಜಿಗಳನ್ನು ಸ್ವೀಕರಿಸುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯನ್ ತಿಳಿಸಿದ್ದಾರೆ.

ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನ ನಡೆಯಲಿದ್ದು, ಫಲಾನುಭವಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ ಅರ್ಜಿ ಸ್ವೀಕಾರಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
ಜುಲೈ 2, 2026ರಿಂದ ಅಗಸ್ಟ್ 30, 2026ರವರೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಈ ಅವಧಿಯಲ್ಲಿ ಅರ್ಹ ಫಲಾನುಭವಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.


“ಯಾವುದೇ ಫಲಾನುಭವಿಗಳು ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. ಅರ್ಹ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆಯ ಸೌಲಭ್ಯ ತಲುಪಿಸುವುದು ನಮ್ಮ ಆದ್ಯತೆಯಾಗಿದೆ” ಎಂದು ಪದ್ಮನಾಭ ಸಾಲಿಯನ್ ತಿಳಿಸಿದ್ದಾರೆ.

Related posts

ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ, ಶಾಲೆಗಳಿಗೆ ಸಾವಯವ ಗೊಬ್ಬರ ವಿತರಣೆ

Suddi Udaya

ವಾಣಿ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಅಗಲಿದ ದಿ| ನಾರಾಯಣ ಆಚಾರ್ಯ ರವರ ಮನೆಗೆ ಶಾಸಕ ಹರೀಶ್ ಪೂಂಜ ಹಾಗೂ ಎಂಎಲ್ಸಿ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ, ಸಾಂತ್ವಾನ

Suddi Udaya

ಬೆಳ್ತಂಗಡಿ: ಸಂಜೀವಿನಿ ಸಂಘಗಳಿಗೆ ರೂ.1.03 ಕೋಟಿ ಬ್ಯಾಂಕ್ ಸಾಲ ವಿತರಣೆ

Suddi Udaya

ವೇಣೂರು ಐಟಿಐ ಕಾಲೇಜಿನಲ್ಲಿ ಯುವ ಮತ್ತು ಭವಿಷ್ಯದ ಮತದಾರರೊಂದಿಗೆ ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ ಸಂವಾದ

Suddi Udaya

ಕಾಪಿನಡ್ಕ ಜಿನ್ನಪ್ಪ ಪೂಜಾರಿ ಮರಳಿ ಕಾಂಗ್ರೇಸ್ ಗೆ ಸೇರ್ಪಡೆ

Suddi Udaya
error: Content is protected !!