September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಬಡಗನ್ನೂರು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ವರ್ಷಾವಧಿ ಜಾತ್ರೋತ್ಸವವು ಫೆ.25 ರಿಂದ 28 ತನಕ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.15 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪ್ರಾರಂಭದಲ್ಲಿ ಶ್ರೀ ಕ್ಷೇತ್ರದ ಸರ್ವಶಕ್ತಿಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆರವರು ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ವಿಶ್ವದಾದ್ಯಂತ ಇರುವ ಕ್ಷೇತ್ರ ಭಕ್ತಾಧಿಗಳು ತುಳುನಾಡಿನ ಕಾರಣಿಕ ಶಕ್ತಿಗಳ ಮೂಲಕ್ಷೇತ್ರದ ನೇಮೋತ್ಸವ ಮತ್ತು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗುವಂತೆ ಹೇಳಿ ಶುಭ ಹಾರೈಸಿದರು.


ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶೈಲೇಂದ್ರ ವೈ ಸುವರ್ಣ, ಮಂಗಳೂರು ಮಾತನಾಡಿ ಸಮಾಜದ ಎಲ್ಲಾ ಸಂಘಸಂಸ್ಥೆಗಳು ಜಾತ್ರಾ ಮಹೋತ್ಸವ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶೈಲೇಂದ್ರ ವೈ ಸುವರ್ಣ, ಮಂಗಳೂರು ಹಾಗೂ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಕೆ ಪೂಜಾರಿ ಇವರುಗಳನ್ನು ಕ್ಷೇತ್ರದ ಪರವಾಗಿ ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ಕಂಕನಾಡಿ ಕ್ಷೇತ್ರದ ಅಧ್ಯಕ್ಷ ಕೆ ಚಿತ್ತರಂಜನ್ ಗೌರವಾಧ್ಯಕ್ಷ ಜಯಂತ್ ನಡುಬೈಲು, ಉಪಾಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ನಿತ್ಯಾನಂದ ಡಿ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಚಂದ್ರಶೇಖರ್ ಉಚ್ಚಿಲ್, ಸಂಜೀವ ಪೂಜಾರಿ,ಬಿರ್ವ, ಸುರೇಂದ್ರ ಪೂಜಾರಿ ಮುಂಬಯಿ, ಡಾ ರಾಜಾರಾಂ ಉಪ್ಪಿನಂಡಿ ಸುರೇಶ್ ಪೂಜಾರಿ ಅಳದಂಗಡಿ, ಡಿ ಆರ್ ರಾಜು ಪೂಜಾರಿ ಕಾರ್ಕಳ, ಯುವವಾಹಿನಿ ಕೆಂದ್ರಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ, ಗೆಜ್ಜೆಗಿರಿ ವಕ್ತಾರ ರಾಜೇಂದ್ರ ಚಿಲಿಂಬಿ,ಸಮಿತಿ ಸದಸ್ಯರಾದ ವಿದ್ಯಾರಾಖೇಶ್ ಮಂಗಳೂರು, ಡಾ, ರಾಕೇಶ್ ಕುಮಾರ್, ನಾರಾಯಣ ಪೂಜಾರಿ ಮಚ್ಚಿನ, ಪ್ರವೀಣ್ ಅಂಚನ್ ಅರ್ಕುಲ, ಡಾ ಸಂತೋಷ್ ಕುಮಾರ್ ಪೆರಂಪಳ್ಳಿ, ದೀಪಕ್ ಪಿಲಾರ್, ಶೇಖರ ಬಂಗೇರ ಬೆಳ್ತಂಗಡಿ, ಜಯರಾಮ ಬಂಗೇರ ಬೆಳ್ತಂಗಡಿ, ತ್ರಿವೇಣಿ ಕರುಣಾಕರ ಪೆರೋಡಿ, ಶೇಖರ ಪೆರೋಡಿ, ಉಮಾನಾಥ ಮಂಗಳೂರು, ಕೇಶವ ಎಂ ಎಸ್, ರಕ್ಷೀತ್ ಕುಂಪಾಳ, ಪ್ರಶಾಂತ್ ಬೆಳ್ತಂಗಡಿ ನೀಲಯ್ಯ ಮಳಲಿ, ಮತ್ತಿತರರು ಗಣ್ಯರು, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪುತ್ತೂರು ಸ್ವಾಗತಿಸಿ ವಂದಿಸಿದರು.

Related posts

ಉಜಿರೆ ಅನುಗ್ರಹ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ಸ್

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರಿಂದ ಕೊಯ್ಯೂರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆ ವಿತರಣೆ

Suddi Udaya

ಹೊಸಂಗಡಿ ಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ ಕೊಡಂಗೇರಿ ನಾಮಪತ್ರ ಸಲ್ಲಿಕೆ

Suddi Udaya

ಬೆಳ್ತಂಗಡಿಯ ನೂತನ ತಾಲೂಕು ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ಹೆಸರಿಡಲು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಆಗ್ರಹ

Suddi Udaya

ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಮಂತ್ರಿಮಂಡಲ ರಚನೆ

Suddi Udaya
error: Content is protected !!