25.1 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಕಚೇರಿಯ ಎಂ. ಮೃತ್ಯುಂಜಯ, ಕೊರಗಪ್ಪ ಹೆಗ್ಡೆ, ಅನಿತಾ ಶಿಂಗಾಯಿ ಉಪ ತಹಸೀಲ್ದಾರ್ ಆಗಿ ಭಡ್ತಿ

ಬೆಳ್ತಂಗಡಿ : ಮೈಸೂರು ವಿಭಾಗದಲ್ಲಿ ಖಾಲಿವಿರುವ ಉಪ ತಹಸೀಲ್ದಾರ್ ವೃಂದದ ಹುದ್ದೆಗಳಿಗೆ ಪ್ರಥಮ ದರ್ಜೆ ಸಹಾಯಕರನ್ನು ಮುಂಭಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದೆ.

ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಎಂ. ಮೃತ್ಯುಂಜಯ ಅವರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಚುನಾವಣೆ ಶಾಖೆಯ ಶಿರಸ್ತೇದಾರ್ ಆಗಿ ಮುಂಭಡ್ತಿ ಮಾಡಲಾಗಿದೆ. ಕೆಪಿಎಸ್ ಸಿ ಪರಿಕ್ಷೇಯಲ್ಲಿ ತೆರ್ಗೇಡೆ ಹೊಂದಿ ಕಳೆದ 7 ವರ್ಷಗಳಿಂದ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಮೂಲತ ದಾವಣಗೆರೆ ಜಿಲ್ಲೆಯವರು.

ತಾಲೂಕು ಚುನಾವಣಾ ಶಾಖೆಯ ಪ್ರ. ದ. ಸಹಾಯಕರಾಗಿದ್ದ ಕೊರಗಪ್ಪ ಹೆಗ್ಡೆ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಪ ತಹಶೀಲ್ದಾರ್ ಆಗಿ ಬಣಕಲ್ ನಾಡಕಛೇರಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಅವರು ಮೂಲತ ಬೆಳ್ತಂಗಡಿಯವರು.

ತಾಲೂಕು ಕಚೇರಿಯ ಪ್ರ. ದ. ಸಹಾಯಕಿ ಅನಿತಾ ಶಿಂಗಾಯಿ ಅವರನ್ನು ಸುಳ್ಯ ತಾಲೂಕಿನ ತಾಲೂಕು ಕಚೇರಿಯ ಸಾಮಾಜಿಕ ಭಧ್ರತಾ ಶಾಖೆಗೆ ಮುಂಭಡ್ತಿ ಮಾಡಲಾಗಿದೆ. ಕೆಪಿಎಸ್ ಸಿ ಪರಿಕ್ಷೇಯಲ್ಲಿ ತೆರ್ಗೇಡೆ ಹೊಂದಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಕಳೆದ 7 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿದ ಇವರು ಮೂಲತ ಬೆಳಾಗಾವಿ ಜಿಲ್ಲೆಯವರು.

Related posts

ಲಾಯಿಲ ಕುಂಟಿನಿಯಿಂದ ನಡ, ಪುತ್ರಬೈಲು ಮೂಲಕ ಬೆಳ್ತಂಗಡಿ ಮತ್ತು ಕಿಲ್ಲೂರಿಗೆ ಸಂಪರ್ಕಿಸುವ ಕಿರಿದಾದ ಮಣ್ಣಿನ ಮತ್ತು ಕಾಂಕ್ರಿಟ್ ರಸ್ತೆ : ಭಾರೀ ಮಳೆಗೆ ರಸ್ತೆಯ ಎರಡು ಬದಿಗಳಲ್ಲಿ ಮಣ್ಣು ಕುಸಿದು ಅಪಾಯವನ್ನು ಆಹ್ವಾನಿಸುವ ಮುನ್ಸೂಚನೆ

Suddi Udaya

ಉಜಿರೆ ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜು, :ಸ್ಪೆಕ್ಟ್ರಾ ಅಸೋಸಿಯೇಷನ್ ಚಟುವಟಿಕೆಗಳ ಉದ್ಘಾಟನೆ.

Suddi Udaya

ಡಾ.ಸುಬ್ರಹ್ಮಣ್ಯ ಭಟ್ಟರ ಮೊದಲ ಪತ್ತೇದಾರಿ ಕಾದಂಬರಿ ” ವಿಷ ವರ್ತುಲ” ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಬಾರ್ಯ: ಮೂರುಗೋಲಿ ಪಾಂಡುರಂಗ ಭಜನಾ ಮಂದಿರ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆ

Suddi Udaya

ಅಳದಂಗಡಿ ಬೆಟ್ಟದ ಬಸದಿ ಭಗವಾನ್ ಶ್ರೀ ಬ್ರಹ್ಮದೇವರ ಬಸದಿ, ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 50 ಲಕ್ಷ ಮತ್ತು ಸವಣಾಲು ಶ್ರೀ ಆದಿನಾಥ ಸ್ವಾಮಿ ಬಸದಿ, ಜೀರ್ಣೋದ್ಧಾರಕ್ಕೆ 9 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ

Suddi Udaya
error: Content is protected !!