September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ಪಾರ್ಕಿಂಗ್ ಮಾಡಿದ್ದ ಬೈಕ್ ಕಳ್ಳತನ

ಬೆಳ್ತಂಗಡಿ : ತನ್ನ ಮನೆಯಿಂದ ಕೆಲಸದ ನಿಮ್ಮಿತ್ತ ಬಂದಿದ್ದ ಯುವಕನ ಬೈಕ್ ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ನಗರದಲ್ಲಿ ನಡೆದಿದೆ‌.

ಬೆಳ್ತಂಗಡಿ ತಾಲೂಕಿನ ಕುಕ್ಕಲ ಗ್ರಾಮದ ಬೇರ್ಕಲ ನಿವಾಸಿ ಸ್ವರೂಪ್ ಎಂಬಾತ ಜು.16 ರಂದು ಬೆಳಗ್ಗೆ 11 ಗಂಟೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಅಕ್ಷಯ ಜೆರಾಕ್ಷ್ ಅಂಗಡಿ ಪಕ್ಕದಲ್ಲಿ KA-21-V-8978 ನಂಬರಿನ ಬಜಾಜ್ ಸಿಟಿ 100 ಬೈಕ್ ಪಾರ್ಕಿಂಗ್ ಮಾಡಿ ಬೇರೆ ಕೆಲಸಕ್ಕೆಂದು ಹೋಗಿ ವಾಪಸ್ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗಲು 11:30 ಕ್ಕೆ ಬೈಕ್ ಬಳಿ ಬಂದಾಗ ಕಾಣೆಯಾಗಿತ್ತು. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಬೈಕ್ ಪತ್ತೆಯಾಗಿಲ್ಲ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ಜು.17 ರಂದು ಸ್ವರೂಪ್ ದೂರು ನೀಡಿದ್ದಾರೆ.

ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಶಿಶಿಲ: ಪೇರಿಕೆ ನಿವಾಸಿ ಸುಪ್ರೀತಾ ಅನಾರೋಗ್ಯದಿಂದ ನಿಧನ

Suddi Udaya

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ತಲೆಮಲೆರಿಸಿಕೊಂಡಿದ್ದ ವಾರೆಂಟ್ ಆರೋಪಿ ಸತೀಶ್ ದ್ರಾವಿಡ ಪೊಲೀಸ್ ವಶಕ್ಕೆ

Suddi Udaya

ಅರಸಿನಮಕ್ಕಿ: 20ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

Suddi Udaya

ಸೆ.8: ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಶೈಕ್ಷಣಿಕ ಸಾಧನೆಗೆ ಸರಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ

Suddi Udaya

ಪಟ್ರಮೆ ಅನಾರು ಬೂತ್‌ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಭೇಟಿ

Suddi Udaya
error: Content is protected !!