September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್ ವೈ ಎಸ್ ಗುರುವಾಯನಕೆರೆ ಸರ್ಕಲ್ ವತಿಯಿಂದ ಸ್ವಚ್ಛತಾ ಅಭಿಯಾನ

ಬೆಳ್ತಂಗಡಿ: ಎಸ್ ವೈ ಎಸ್ ರಾಜ್ಯ ಸಮಿತಿಯ ನಿರ್ದೇಶನದಂತೆ ಪ್ರತಿ ಸರ್ಕಲ್ ಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜು.17 ರಂದು ಗುರುವಾಯನಕೆರೆ ಎಸ್ ವೈ ಎಸ್ ಸರ್ಕಲ್ ವ್ಯಾಪ್ತಿಯಲ್ಲಿ ನಡೆಯಿತು.

ಗುರುವಾಯನಕೆರೆ ಪೇಟೆಯ ಸುತ್ತಮುತ್ತ ನಡೆದ ಈ ಕಾರ್ಯಕ್ರಮವು ಜನೋಪಯೋಗಿಯಾಗಿ ಸಂಪನ್ನಗೊಂಡಿತು. ಗುರುವಾಯನಕೆರೆ ಸರ್ಕಲ್ ಅಧ್ಯಕ್ಷ ಹಸೈನಾರ್ ಹಾಜಿ, ಕಾರ್ಯದರ್ಶಿ ರಝಾಕ್ ಸ‌ಅದಿ, ದ‌ಅವಾ ಕಾರ್ಯದರ್ಶಿ ಉಮರ್ ಹಾಜಿ, ಸಂಘಟನಾ ಕಾರ್ಯದರ್ಶಿ ಅಶ್ರಫ್, ಇಸಾಬ ಸಾಂತ್ವಾನ ಕಾರ್ಯದರ್ಶಿ ನಝೀರ್ ಕಾಂತಿಜಾಲ್, ಪರಪ್ಪು ಜಮಾಅತ್ ಕಾರ್ಯದರ್ಶಿ ಸೈಫುಲ್ಲಾ, ಎಸ್ ಎಸ್ ಎಫ್ ಡಿವಿಶನ್ ಅಧ್ಯಕ್ಷ ಇಸಾಕ್ ಮೊದಲಾದವರು ನೇತೃತ್ವ ವಹಿಸಿದ್ದರು.
ಸರ್ಕಲ್ ಸಮಿತಿ ನಾಯಕರು, ಯೂನಿಟ್ ನಾಯಕರು ಹಾಗೂ ಕಾರ್ಯಕರ್ತರು ಸಹಕರಿಸಿದರು. ಗುರುವಾಯನಕೆರೆ ಮುಖ್ಯ ಪೇಟೆಯ ಪ್ರಮುಖ ಕಡೆಗಳಲ್ಲಿ ಗಿಡಗಂಟಿ ತೆರವು, ಪ್ಲಾಸ್ಟಿಕ್‌ ತೆರವು ಹಾಗೂ ಇತರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು.

Related posts

ಬೆಳ್ತಂಗಡಿ ಮಹಿಳಾ ಮಂಡಲದ ವತಿಯಿಂದ ಸಿಯೋನ್ ಆಶ್ರಮದ ಆಡಳಿತ ಟ್ರಸ್ಟಿ ಶ್ರೀಮತಿ ಮೇರಿ ಯು.ಪಿ. ರವರಿಗೆ ಸನ್ಮಾನ

Suddi Udaya

ಕಳೆಂಜ : ಶಿಬರಾಜೆ ಬೈಲು ನೆಕ್ಕರಾಜೆ ಅಣ್ಣು ಗೌಡ ನಿಧನ

Suddi Udaya

ಶಿಬರಾಜೆ-ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ: ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

9/11 ಪ್ರಮಾಣ ಪತ್ರವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಆದೇಶವನ್ನು ರದ್ದುಪಡಿಸಿ ಗ್ರಾ.ಪಂ. ನಲ್ಲಿಯೇ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನವಿ

Suddi Udaya

ಕಲ್ಮಂಜ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾರಂಭ

Suddi Udaya

ಉಜಿರೆ ಗ್ರಾ.ಪ. ವತಿಯಿಂದ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya
error: Content is protected !!