September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಾಶಿಪಟ್ಣ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಹರೀಶ್ ಕೆ. ಸಾಲ್ಯಾನ್ ಆಯ್ಕೆ

ಕಾಶಿಪಟ್ಣ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಕಾಶಿಪಟ್ಣ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಕಾಶಿಪಟ್ಣದ ಬ್ರಹ್ಮತ್ತಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.

ಸಮಿತಿಯ ನಿರ್ಗಮಿತ ಅಧ್ಯಕ್ಷ ಶೈಲೇಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2026-27ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ಸರ್ವ ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೆ. ಸಾಲ್ಯಾನ್ (ಕಾಶಿಪಟ್ಣ) ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಶೈಲೇಶ್ ಕೋಟ್ಯಾನ್ (ಮೇಗಿನ ಬರೆಂಜ) ಹಾಗೂ ಸ್ಥಾಪಕಾಧ್ಯಕ್ಷರಾಗಿ ನಾಗೇಶ್ ಕೆ. ಸಾಲ್ಯಾನ್ (ಮೂಲ್ಲೊಟ್ಟು) ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಪ್ರಸಾದ್ ಡಿ. ಖಂಡಿಗ ಹೊಸಮನೆ, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ನಾಯ್ಕ ಪರಪ್ಪಾದೆ, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಮೆರ್ಕಾಲು ಹಾಗೂ ಪ್ರದೀಪ್ ಕಂಬದಡ್ಡ, ಕೋಶಾಧಿಕಾರಿಯಾಗಿ ಪ್ರಸಾದ್ ಕೋಟ್ಯಾನ್ ಕುಜಂಬೆ ಆಯ್ಕೆಯಾದರು.

ಇದೇ ವೇಳೆ ವಿವಿಧ ಉಪಸಮಿತಿಗಳ ಸಂಚಾಲಕರನ್ನೂ ಆಯ್ಕೆ ಮಾಡಲಾಯಿತು. ಪೂಜಾ ಸಮಿತಿ – ಮೋಹನ್ ಶೆಟ್ಟಿ ಪರಪ್ಪು, ಸ್ವಾಗತ ಸಮಿತಿ – ಯುವರಾಜ್ ಶೆಟ್ಟಿಗಾರ್ ಪಣಿಲಾಜೆ, ಕ್ರೀಡಾ ಸಮಿತಿ ನಿತೇಶ್ ಕೋಟ್ಯಾನ್ ಮೇಗಿನ ಬರೆಂಜ, ಅನ್ನಸಂತರ್ಪಣಾ ಸಮಿತಿ ರಾಜೇಂದ್ರ ಮರುದೊಟ್ಟು, ಶೋಭಾಯಾತ್ರೆ ಸಮಿತಿ ಪ್ರವೀಣ್ ಶೆಟ್ಟಿ ಮಜಲು, ಪ್ರಚಾರ ಸಮಿತಿ – ಹರೀಶ್ ಪಿ. ಕೋಟ್ಯಾನ್ ಪಣಿಲಾಜೆ ಹಾಗೂ ಸ್ವಚ್ಛತಾ ಸಮಿತಿ ಮುಖೇಶ್ ಜಾರಿಗೆದಡಿ ಅವರನ್ನು ಸಂಚಾಲಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ಮುಂಬರುವ ಶ್ರೀ ಶಾರದಾ ಮಹೋತ್ಸವವನ್ನು ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಸಹಕಾರ ನೀಡುವಂತೆ ಕರೆ ನೀಡಲಾಯಿತು.

Related posts

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಡಿರುದ್ಯಾವರ ಶಾಖೆಯ ನೂತನ ಗೋದಾಮು, ಬ್ಯಾಂಕಿಂಗ್ ಕಛೇರಿ ಹಾಗೂ ಸಭಾಭವನ ಉದ್ಘಾಟನೆ

Suddi Udaya

ನೈತಿಕ ಮೌಲ್ಯಾಧಾರಿತ ಸ್ಪರ್ಧೆ: ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ: ಗಾಂಧಿನಗರದಲ್ಲಿ ರಸ್ತೆಕಾಮಗಾರಿ ಲೋಕಾರ್ಪಣೆ

Suddi Udaya

ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರ ತರಬೇತಿ ಸಂಸ್ಥೆಯಲ್ಲಿ ಕಂಪ್ಯೂಟರ್‌ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ಶಾಸಕ ಹರೀಶ್ ಪೂಂಜಾ ರವರ ಇಂದಬೆಟ್ಟು ಜನಸ್ಪಂದನ ಕಾರ್ಯಕ್ರಮದ ಫಲಶೃತಿ: ಇಂದಬೆಟ್ಟು-ಗುರಿಪಳ್ಳ ರಸ್ತೆಯ ಬದಿಯ ಗಿಡಗಂಟಿಗಳ ತೆರವು ಕಾರ್ಯ

Suddi Udaya

ಜೂ.21: ಬಳಂಜ ಬಿಲ್ಲವ ಸಂಘದಲ್ಲಿ ದತ್ತಿನಿಧಿಯಿಂದ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ತರಬೇತಿ ಕಾರ್ಯಾಗಾರ

Suddi Udaya
error: Content is protected !!