28.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಖಾಸಗಿ ಬಸ್ ನಿಲ್ದಾಣದ ಸಮೀಪ ಮರಣಬಾವಿಯನ್ನು ನಾಚಿಸುವಂತೆ ಗುಂಡಿಗಳ ನಿರ್ಮಾಣ

ಬೆಳ್ತಂಗಡಿ: ನಮ್ಮ ಬೆಳ್ತಂಗಡಿ, ನಮ್ಮ ಹೆಮ್ಮೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅಸಾಧ್ಯ ಎಂಬಂತೆ ಬೆಳ್ತಂಗಡಿ ಖಾಸಗಿ ಬಸ್ ನಿಲ್ದಾಣದ ಸಮೀಪ ಮರಣಬಾವಿಯನ್ನು ನಾಚಿಸುವಂತೆ ಗುಂಡಿಗಳು ನಿರ್ಮಾಣಗೊಂಡಿದೆ.

ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರ ಕನಸಿನ ಕೂಸು ಬೆಳ್ತಂಗಡಿ ಖಾಸಗಿ ಬಸ್ ನಿಲ್ದಾಣ 1998ರಲ್ಲಿ ರೂಪುಗೊಂಡಿದೆ. ಈ ಹಿಂದೆ ಖಾಸಗಿ ಬಸ್ಸುಗಳು ಗುರುವಾಯನಕೆರೆಯಿಂದ ಕಾರ್ಕಳ , ಮೂಡಬಿದಿರೆ , ಉಪ್ಪಿನಂಗಡಿಗೆ ಸೀಮಿತಗೊಂಡಿತ್ತು. ಆದರೆ ಇದೀಗ ಬೆಳ್ತಂಗಡಿ ಖಾಸಗಿ ಬಸ್ ನಿಲ್ದಾಣದ ಸಮೀಪ ಮರಣಗುಂಡಿಗಳು ನಿರ್ಮಾಣಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಬಸ್ ಹೊರತುಪಡಿಸಿ ಅಪ್ಪಿತಪ್ಪಿ ದ್ವಿಚಕ್ರ , ತ್ರಿಚಕ್ರ ವಾಹನಗಳು ಈ ಗುಂಡಿಗೆ ಬಿದ್ದರೆ ಅಲ್ಲೇ ಪಲ್ಟಿ ಹೊಡೆದು ಬೀಳುತ್ತದೆ. ಈಗಾಗಲೇ ಸಾಕಷ್ಟು ಬೈಕ್ ಸವಾರರು ಈ ಮರಣಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮರಣಗುಂಡಿಯಲ್ಲಿ ಮರಣ ಸಂಭವಿಸುವ ಮೊದಲು ಈ ಗುಂಡಿಗಳನ್ನು ಮುಚ್ಚಿ ಬೆಳ್ತಂಗಡಿಯ ಘನತೆಯನ್ನು ಕಾಪಾಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Related posts

ಜೂ.21: ಮೈಸೂರಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಶಿರ್ಲಾಲು: ಭೀಕರ ಮಳೆಗೆ ರಸ್ತೆ ಸಂಪರ್ಕ ಕಡಿದು ಹೋಗುವ ಭೀತಿ

Suddi Udaya

ಲಾಯಿಲ: ಪಡ್ಲಾಡಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ: ಅಧ್ಯಕ್ಷರಾಗಿ ವಿನಯ್ ಎಂ.ಎಸ್. : ಕಾರ್ಯದರ್ಶಿಯಾಗಿ ದಿನಕರ್ ದೇವೊಟ್ಟು

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಾರಾವಿ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಮಾಜಿ ಸಚಿವ ಗಂಗಾಧರ ಗೌಡ ಮನೆಗೆ ಹಾಗೂ ಕಾಲೇಜಿಗೆ ಐಟಿ ಅಧಿಕಾರಿಗಳ ದಾಳಿ

Suddi Udaya

ಕುಂಭಶ್ರೀ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಗಿರೀಶ್ ಕೆ.ಎಚ್.ರವರಿಗೆ ಸನ್ಮಾನ

Suddi Udaya
error: Content is protected !!