31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೆಸರಲ್ಲಿ ಜೊತೆಯಾಗಿ ಸಂಭ್ರಮ: ನಾವೂರಿನಲ್ಲಿ ಎಸ್‌ಡಿಪಿಐ ವತಿಯಿಂದ ಸಾರ್ವಜನಿಕ ಕ್ರೀಡಾಕೂಟ

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನಾವೂರು ಗ್ರಾಮ ಸಮಿತಿ ವತಿಯಿಂದ “ಕೆಸರಲ್ಲಿ ಜೊತೆಯಾಗಿ ಸಂಭ್ರಮ” ಎಂಬ ಘೋಷವಾಕ್ಯದಡಿ ಸಾರ್ವಜನಿಕ ಕ್ರೀಡಾಕೂಟ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ನಾವೂರು ದುಗಳಚ್ಚಿಲ್ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು.

SDPI ನಾವೂರು ಬ್ರಾಂಚ್ ಅಧ್ಯಕ್ಷ ಸಾದಿಕ್ ಕಿರ್ಣಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಂಗ್ ಡೆಮಾಕ್ರಟ್ಸ್ ಕರ್ನಾಟಕ ರಾಜ್ಯ ಜಾಯಿಂಟ್ ಕನ್ವೀನರ್ ಮೂನಿಶ್ ಅಲಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಖಾದರ್ ನಾವೂರು ಸ್ವಾಗತಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಯಂಗ್ ಡೆಮಾಕ್ರಟ್ಸ್ ಕರ್ನಾಟಕ ರಾಜ್ಯ ಜಾಯಿಂಟ್ ಕನ್ವೀನರ್ ಮೂನಿಶ್ ಅಲಿ, ಮಂಗಳೂರು ಗ್ರಾಮಾಂತರ ಜಿಲ್ಲಾ ಜಾಯಿಂಟ್ ಕನ್ವೀನರ್ ತೌಸಿಫ್ ಕಕ್ಕಿಂಜೆ, ಜಿಲ್ಲಾ ಕನ್ವೀನರ್ ನ್ಯಾಯವಾದಿ ಅಸ್ಮಾ ಬೆಳ್ತಂಗಡಿ ಹಾಗೂ ಪ್ರಗತಿಪರ ಕೃಷಿಕ ಕೃಷ್ಣಪ್ಪ ಬೀಮಂಡೆ ಉಪಸ್ಥಿತರಿದ್ದರು.

ಕ್ರೀಡಾಕೂಟದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ SDPI ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು, SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಾಸ್, ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಹಾಗೂ ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೇಬಷ್ಟಿಯನ್ ಅತಿಥಿ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಅಶ್ರಫ್ ಕಟ್ಟೆ, ಉಜಿರೆ ಬ್ಲಾಕ್ ಉಪಾಧ್ಯಕ್ಷ ಅಶ್ರಫ್ ಚಾರ್ಮಾಡಿ, ನಾವೂರು ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಸಿ.ಎಂ. ಹಾಗೂ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

ಕ್ರೀಡಾಕೂಟದ ಅಂಗವಾಗಿ ಆಗಮಿಸಿದ ಅತಿಥಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಎಸ್.ಐಅರ್ ಕುರಿತು ಜನಜಾಗೃತಿ ಅಭಿಯಾನದ ಅಂಗವಾಗಿ ತೆರೆಯಲಾಗಿದ್ದ ಹೆಲ್ಪ್ ಡೆಸ್ಕ್‌ನಲ್ಲಿ ನಿರಂತರ ಒಂದು ತಿಂಗಳ ಕಾಲ ಸಾರ್ವಜನಿಕರಿಗೆ ಉಚಿತ ಸೇವೆ ಸಲ್ಲಿಸಿದ ಶ್ರೀಮತಿ ಆಯಿಶತುಲ್ ಅಮೀರ ಹಾಗೂ ಶ್ರೀಮತಿ ಫಾತಿಮತ್ ಶಿಫಾ ಅವರನ್ನು, SIR ಕಾರ್ಯಚಟುವಟಿಕೆಯಲ್ಲಿ ಸಹಕಾರ ನೀಡಿದ ಸಲೀಂ ಮುರ ಅವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಫ್ ಆಯೋಜಿಸಿದ್ದ 2026ನೇ ಸಾಲಿನ ಸಾಹಿತ್ಯೋತ್ಸವದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಾವೂರಿನ ಯುವಕರಾದ ಝನುಲ್ ಆಬಿದೀನ್ ಹಾಗೂ ಫೈರೋಝ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, 2026ನೇ ಸಾಲಿನ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮುರ ರೇಂಜ್ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಹಾಗೂ 2026ನೇ ಸಾಲಿನ SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕ ಗಳಿಸಿದ 14 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕ್ರೀಡಾಕೂಟದಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ಊರಿನವರು ಉತ್ಸಾಹದಿಂದ ಭಾಗವಹಿಸಿದರು. ವಿವಿಧ ಕ್ರೀಡಾ ಚಟುವಟಿಕೆಗಳು ಸಾರ್ವಜನಿಕರ ಗಮನ ಸೆಳೆದಿದ್ದು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಸ.ಪ್ರ.ದ. ಕಾಲೇಜಿನಲ್ಲಿ ರೋವರ್ ರೇಂಜರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

Suddi Udaya

ಗುರುವಾಯನಕೆರೆ: ಸರ್ಕಾರದ ನಡೆ ಕಾರ್ಯಕರ್ತರ ನಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

Suddi Udaya

“ಗಡಾಯಿಕಲ್ಲು ರಹಸ್ಯ” ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

Suddi Udaya

ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾದ ಬುರುಡೆ ಚಿನ್ನಯ್ಯ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ “ಆಟಿದ ಪೊಲಬು”

Suddi Udaya

ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರಿಂದ ದಾಳಿ: ದನದ ತಲೆ ಸಹಿತ ಪರಿಕರಗಳು ವಶ; ಆರೋಪಿಗಳು ಪರಾರಿ

Suddi Udaya
error: Content is protected !!