26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ಭೇಟಿ

ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಎಂಬಲ್ಲಿರುವ ಅಪಾಯಕಾರಿ ಕಾಲುಸಂಕವನ್ನು ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು , ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮನು ಬಿ.ಕೆ , ಪ್ರಧಾನ ಸಿವಿಲ್ ನ್ಯಾಯಾಧೀಶರು , ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ರಾಮಲಿಂಗಪ್ಪ ರವರು ಅದಿತ್ಯವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು.

ಕಳೆದ ಬುಧವಾರ ಲಾಯಿಲ ಪರಿಶಿಷ್ಟ ಜಾತಿ/ ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ವ್ಯಾಪಕ ಚರ್ಚೆ , ಮಾಧ್ಯಮಗಳ ವರದಿಯ ನಂತರ ಶುಕ್ರವಾರ ಅಧಿಕಾರಿಗಳ ದಂಡು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದೀಗ ಬೆಳ್ತಂಗಡಿ ನ್ಯಾಯಾದೀಶರುಗಳಾದ ಮನು ಬಿ.ಕೆ , ರಾಮಲಿಂಗಪ್ಪ ರವರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿ , ಸಾರ್ವಜನಿಕರೊಂದಿಗೆ ಮಾತನಾಡಿದರು. ಈ ಕಾಲುಸಂಕವನ್ನು ಅವಲಂಬಿಸಿರುವ ಕುಟುಂಬಗಳ ಮಾಹಿತಿಯೊಂದಿಗೆ ಹಿರಿಯ ನಾಗರಿಕರು , ವಿದ್ಯಾರ್ಥಿಗಳು , ವಿಶೇಷ ಚೇತನರು , ವಿಧವೆಯರ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ಸಂಗ್ರಹಿಸಿ , ಸೋಮವಾರ ಮಧ್ಯಾಹ್ನದೊಳಗೆ ವರದಿ ನೀಡುವಂತೆ ಲಾಯಿಲ ಗ್ರಾಮ ಪಂಚಾಯತ್ ನ ಪಿಡಿಓ ಹಾಗೂ ಲಾಯಿಲ ಗ್ರಾಮಾಡಳಿತಾಧಿಕಾರಿ ಯವರಿಗೆ ಸೂಚಿಸಿದರು.

ನ್ಯಾಯಾದೀಶರುಗಳು ಅಭಿವೃದ್ಧಿ ವಂಚಿತ ಬರಮೇಲು ನಡುಗುಡ್ಡೆ ಭೇಟಿ ಮೂಲಕ ಈ ಭಾಗದ ಬಹುಕಾಲದ ಸೇತುವೆಯ ಬೇಡಿಕೆಯೊಂದು ಈಡೇರುವ ಆಶಾ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ.

ಈ ಸಂದರ್ಭದಲ್ಲಿ ನ್ಯಾಯಾದೀಶರ ಜೊತೆಗೆ ಬೆಳ್ತಂಗಡಿ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ , ಬೆಳ್ತಂಗಡಿ ಉಪ ತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ , ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ , ತಾಲೂಕು ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಯಲ್ಲಪ್ಪ ಹಂಗರಗಿ , ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ್ , ಲಾಯಿಲ ಗ್ರಾಮಾಡಳಿತಾಧಿಕಾರಿ ರನಿತಾ , ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ,ದಲಿತ ಮುಖಂಡ ಶೇಖರ್ ಲಾಯಿಲ, ಗ್ರಾಮ ಸಹಾಯಕ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು.

Related posts

ತಾಲೂಕು ಮಟ್ಟದ ಟೇಬಲ್ ಟೆನಿಸ್ ನಲ್ಲಿ ವಾಣಿ ಪ.ಪೂ ಕಾಲೇಜಿನ ಬಾಲಕಿಯರ ತಂಡಕ್ಕೆ ದ್ವಿತೀಯ ಸ್ಥಾನ

Suddi Udaya

ಕಡಿರುದ್ಯಾವರ ಬೊಳ್ಳೂರು ನೇತ್ರಾವತಿ ನದಿಯಿಂದ ಅಕ್ರಮ ಮರಳು ಸಾಗಾಟ: ಪಿಕಪ್ ಸಹಿತ ಮರಳು ವಶ

Suddi Udaya

ಕೊಲ್ಲಿ ದೇವಸ್ಥಾನದಲ್ಲಿ ರಕ್ತೇಶ್ವರಿ ದೈವದ ಕಟ್ಟೆಯ ಶಿಲಾನ್ಯಾಸ: ಕೊಲ್ಲಿ ದುರ್ಗಾಪರಮೇಶ್ವರಿಯ ಸೊಬಗಿಗೆ ಪಶ್ಚಿಮ ಘಟ್ಟವೇ ಪ್ರಭಾವಳಿ:ಸಂಪತ್ ಬಿ. ಸುವರ್ಣ

Suddi Udaya

ಜು.22: ಕಳೆಂಜ ಮತ್ತು ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮ

Suddi Udaya

ಕಲ್ಮಂಜ ಶಾಲಾ ಶತ ಸಂಭ್ರಮಕ್ಕೆ ಮುಖ್ಯಮಂತ್ರಿಗಳಿಂದ ಶುಭಹಾರೈಕೆ

Suddi Udaya

ಮುಂಡ್ರುಪ್ಪಾಡಿ ಸ. ಕಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!