September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಡಿರುದ್ಯಾವರ ಬೊಳ್ಳೂರು ನೇತ್ರಾವತಿ ನದಿಯಿಂದ ಅಕ್ರಮ ಮರಳು ಸಾಗಾಟ: ಪಿಕಪ್ ಸಹಿತ ಮರಳು ವಶ

ಕಡಿರುದ್ಯಾವರ: ಇಲ್ಲಿಯ ಬೊಳ್ಳೂರು ಎಂಬಲ್ಲಿಯ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಪಿಕಪ್‌ನಲ್ಲಿ ಸಾಗಾಟ ಮಾಡುತ್ರಿರುವ ಪ್ರಕರಣವನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಪಿಕಪ್ ಹಾಗೂ ಮರಳು ಸಹಿತ ಸಾಮಾಗ್ರಿಗಳನ್ನು ವಶಪಡಿಸಿಕೊಂಡ ಪ್ರಕರಣ ಜು.11 ರಂದು ವರದಿಯಾಗಿದೆ.


ಜು. 11 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ಉಪ ನೀರಿಕ್ಷಕರಾದ ಯಲ್ಲಪ್ಪ ಹೆಚ್ ಮಾದರರವರು ಸಿಬ್ಬಂದಿಗಳ ಜೊತೆಯಲ್ಲಿ ಕಡಿರುದ್ಯಾವರ ರಸ್ತೆಯಲ್ಲಿ ಬರುತ್ತಿರುವ ಸಮಯ ಕಡಿರುದ್ಯಾವರ ಗ್ರಾಮದ ಬೊಳ್ಳೂರು ಎಂಬಲ್ಲಿ ಪ್ರತೀಕ್ಷ್ ಎಂಬಾತನು ಪಿಕಪ್ ವಾಹನದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಕಡಿರುದ್ಯಾವರ ಗ್ರಾಮದ ಬೊಳ್ಳೂರು ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ಕಳವು ಮಾಡಿಕೊಂಡು ಬರುತ್ತಿದ್ದುದನ್ನು ಪತ್ತೆಮಾಡಿದ್ದಾರೆ.


ಅಪಾದಿತ ಪ್ರತೀಕ್ಷ್ ಮತ್ತು ಸಾಗಾಟದ ಪಿಕಪ್ ವಾಹನ ಹಾಗೂ ಪಿಕಪ್ ವಾಹನದಲ್ಲಿದ್ದ ರೂ. 2ಸಾವಿರ ಮೌಲ್ಯದ ಮರಳು,3 ಕಬ್ಬಿಣದ ಬಕೆಟ್, ಮರಳು ತೆಗೆಯಲು ಉಪಯೋಗಿಸಿದ 1 ಕಬ್ಬಿಣದ ಸ್ಟ್ಯಾಂಡ್, 2 ಪ್ಲಾಸ್ಟಿಕ್ ಬುಟ್ಟಿ ಹಾಗೂ 2 ಕಬ್ಬಿಣದ ಹಾರೆಯನ್ನು ಸ್ವಾದೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಬೆಳ್ತಂಗಡಿ ವಿ.ಹಿಂ.ಪ ಬಜರಂಗದಳ ಪ್ರಖಂಡದ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭ ಗೋ ಹತ್ಯೆಯನ್ನು ಖಂಡಿಸಿ ಪೋಲಿಸ್ ಠಾಣೆ ಮತ್ತು ಗೋ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ನಾಲ್ಕೂರು ಕುದ್ರೋಟ್ಟು ಪರಿಸರದಲ್ಲಿ ಗುಡ್ಡ ಕುಸಿತ, ರಸ್ತೆ ಬಂದ್

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾರಂಭಿಕ ತರಬೇತಿ ಶಿಬಿರ ಹಾಗೂ ಪುನಶ್ಚೇತನ ತರಬೇತಿ ಶಿಬಿರ

Suddi Udaya

ಮಚ್ಚಿನ ಶ್ರೀ ವಿದ್ಯಾಸಾಗರ ಶಾಲೆಯಲ್ಲಿ ಮಕ್ಕಳ ಆಹಾರ ಮೇಳ

Suddi Udaya

ಪುಣ್ಯ ಕೋಟಿಗೆ ಒಂದು ಕೋಟಿ ನಂದಗೋಕುಲ ಗೋಶಾಲೆಯ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ

Suddi Udaya
error: Content is protected !!