26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಸಂಘ-ಸಂಸ್ಥೆಗಳು

ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದಾಖಲೆಯ ರೂ. 2.12 ಕೋಟಿ ನಿವ್ವಳ ಲಾಭ

ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ದಾಖಲೆಯ ಆರ್ಥಿಕ ಸಾಧನೆ ಮಾಡಿ ರೂ. 2.12 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ಲಾಭದಲ್ಲಿ ಶೇ.94.49ರಷ್ಟು ಹೆಚ್ಚಳ ದಾಖಲಿಸಿದೆ ಎಂದು ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ತಿಳಿಸಿದ್ದಾರೆ.

ಸಂಘವು ಪ್ರಸಕ್ತ ಸಾಲಿನ ಅಂತ್ಯಕ್ಕೆ ರೂ.5.82 ಕೋಟಿ ಪಾಲು ಬಂಡವಾಳ, ರೂ.39.18 ಕೋಟಿ ಠೇವಣಿ ಹೊಂದಿದ್ದು, ರೂ.66.80 ಕೋಟಿ ಹೊರಬಾಕಿ ಸಾಲ ಹಾಗೂ ರೂ.517.77 ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ.

ಕಳೆದ 27 ವರ್ಷಗಳಿಂದ ಸತತ ಲಾಭಗಳಿಸುತ್ತಿರುವ ಸಂಘವು ಲೆಕ್ಕಪರಿಶೋಧನೆಯಲ್ಲಿ ‘ಎ’ ಗ್ರೇಡ್‌ನ್ನು ಕಾಯ್ದುಕೊಂಡಿದೆ.
ರೈತರು ಹಾಗೂ ಸದಸ್ಯರಿಗೆ ಕೃಷಿ ಸಾಲ, ಠೇವಣಿ, ವಿಮೆ ಸೇರಿದಂತೆ ವಿವಿಧ ಆರ್ಥಿಕ ಸೇವೆಗಳನ್ನು ಪಾರದರ್ಶಕವಾಗಿ ಒದಗಿಸಲಾಗುತ್ತಿದ್ದು, ಸದಸ್ಯರ ವಿಶ್ವಾಸ ಹಾಗೂ ನಿರ್ದೇಶಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ರಾಕೇಶ್ ಹೆಗ್ಡೆ ಹೇಳಿದರು.

ಉತ್ತಮ ಸಾಲ ವಸೂಲಾತಿ, ಶಿಸ್ತುಬದ್ಧ ಹಣಕಾಸು ನಿರ್ವಹಣೆ ಹಾಗೂ ಸದಸ್ಯ ಕೇಂದ್ರಿತ ಸೇವೆಗಳ ಮೂಲಕ ಸಂಘವು ನಿರಂತರ ಪ್ರಗತಿ ಸಾಧಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನವೀನ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಈ ಸಾಧನೆಗೆ ಕಾರಣರಾದ ಸಂಘದ ಎಲ್ಲಾ ನಿರ್ದೇಶಕರು,ಸಿಬ್ಬಂದಿ ವರ್ಗ, ಸದಸ್ಯರು ಹಾಗೂ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಮುಂದೆಯೂ ಇದೇ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.

ಸುವರ್ಣ ಸಂಭ್ರಮ- ವರ್ಷಪೂರ್ತಿ ಕಾರ್ಯಕ್ರಮ

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಸತತ ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನೀಡುವ ವಿಶೇಷ ಪ್ರೋತ್ಸಾಹ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ವರ್ಷ ಸಂಘವು ಸುವರ್ಣ ಸಂಭ್ರಮ ಆಚರಿಸುತ್ತಿದ್ದು, ಅದರ ಅಂಗವಾಗಿ ವರ್ಷಪೂರ್ತಿ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಕೃಷಿ ಹಾಗೂ ಸದಸ್ಯರ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಶೈಕ್ಷಣಿಕ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಸಹಾಯಧನ, ಕ್ರೀಡೆ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಧನಸಹಾಯ, ತೀರ ಬಡತನದಲ್ಲಿರುವ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ನೆರವು ಹಾಗೂ ಮರಣ ಸಾಂತ್ವನ ನಿಧಿ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಸಂಘವು ನಿರಂತರವಾಗಿ ಜಾರಿಗೊಳಿಸುತ್ತಿದೆ ಎಂದು ಅಧ್ಯಕ್ಷ ರಾಕೇಶ್ ಹೆಗ್ಡೆ ತಿಳಿಸಿದ್ದಾರೆ.

Related posts

ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಎಸ್.ಡಿ.ಎಂ. ವಿದ್ಯಾರ್ಥಿಗೆ ಪ್ರಶಂಸಾ ಪ್ರಮಾಣಪತ್ರ

Suddi Udaya

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಪದ್ಮುಂಜ ಅನ್ನಪೂರ್ಣೇಶ್ವರಿ ಜನರಲ್ ಸ್ಟೋರ್ ನ ವತಿಯಿಂದ ನಿತ್ಯೋಪಯೋಗಿ ಪರಿಕರ ವಸ್ತುಗಳ ಕೊಡುಗೆ

Suddi Udaya

ಮನೆಯೊಳಗೆ ಅಕ್ರಮ ಗಾಂಜಾ ದಾಸ್ತಾನು: ಪುಂಜಾಲಕಟ್ಟೆ ಪೊಲೀಸರಿಂದ ದಾಳಿ

Suddi Udaya

ಅಂಡಿಂಜೆ: ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಕಿರು ಸೇತುವೆ, ಸಂಪರ್ಕ ಸ್ಥಗಿತ

Suddi Udaya

ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ 23ನೇ ರಾಜ್ಯ ಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

Suddi Udaya

ಜು.5: ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya
error: Content is protected !!