28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ‘ಶ್ರಮದಾನದ ಮೂಲಕ ಕೆದ್ದು ನರ್ಸರಿ ರಸ್ತೆ ಅಭಿವೃದ್ಧಿ ,ಗ್ರಾಮಸ್ಥರ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ

ಅಳದಂಗಡಿ:ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಾರಂದೂರು ಗ್ರಾಮದ ಕೆದ್ದು ನರ್ಸರಿ ರಸ್ತೆಯನ್ನು ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಜು 26ರಂದು ಶ್ರಮದಾನದ ಮೂಲಕ ಅಭಿವೃದ್ಧಿಪಡಿಸಿ ಮಾದರಿಯಾಗಿದ್ದಾರೆ.

ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಗ್ರಾಮಸ್ಥರು ಒಗ್ಗಟ್ಟಿನಿಂದ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು, ಸ್ಥಳೀಯರ ಶ್ರಮ ಮತ್ತು ಸಹಕಾರದಿಂದ ರಸ್ತೆ ಬದಿಯಯಲ್ಲಿದ ಕಳೆಗಿಡಗಂಟಿಗಳನ್ನು ತೆಗೆದು ಸರಿಪಡಿಸಲಾಗಿದೆ. ಜೆಸಿಬಿ ಮೂಲಕ ರಸ್ತೆಯನ್ನು ದುರುಸ್ತಿಗೊಳಿಸಲಾಗುತ್ತಿದೆ.

ಗ್ರಾಮಸ್ಥರ ಈ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಶ್ರಮದಾನದಲ್ಲಿ ಸಂಜೀವ ಪೂಜಾರಿ ಗುರುದೇವ ಕೊಡಂಗೆ, ಪ್ರಶಾಂತ ಕೊಡಂಗೆ, ಹರೀಶ್ ಕುಲಾಲ್, ಗಣೇಶ್, ಸುನಿಲ್, ರಮೇಶ್ ಆಚಾರಿಬೆಟ್ಟು, ಪ್ರಭಾಕರ, ಪ್ರವೀಣ್, ಅರವಿಂದ, ಸುಧಾಕರ್, ಪೀಟರ್, ಶಕೀಬ್, ರಾಜೇಶ್, ನವೀನ್, ಸತೀಶ್, ಪ್ರಜ್ವಲ್, ಯಶೋಧರ, ರಮೇಶ್, ರಂಜಿತ್, ಭಾಸ್ಕರ, ರಮಾನಂದ ಸೇರಿದಂತೆ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Related posts

ಮಹಾತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಂಚಮಿಯಂದು ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಣೆ

Suddi Udaya

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ನಿವೃತ್ತ ಸಿಇಒ, ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ಧರಣಿ

Suddi Udaya

ಅರಸಿನಮಕ್ಕಿ: ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಪೆರೋಡಿತ್ತಾಯಕಟ್ಟೆ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಕಳಿಯ : ಸಂಬೋಳ್ಯ ನಿವಾಸಿ ಸುಂದರ ನಾಯ್ಕ ನಿಧನ

Suddi Udaya
error: Content is protected !!