26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಪಾಣಕ್ಕಾಡ್ ಅಬ್ದುನ್ನಾಸರ್ ಹಯ್ಯ್ ತಂಙಳ್ ಬಾಅಲವಿ ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿಯ ಖಾಲಿಯಾರ್ ಆಗಿ ಆಯ್ಕೆ

ಬೆಳ್ತಂಗಡಿ: ಖಿಳರ್ ಜುಮ್ಮಾ ಮಸೀದಿ (ಕೇಂದ್ರ ಮಸೀದಿ), ಬೆಳ್ತಂಗಡಿ ಇದರ ಜಮಾತ್ ಸಮಿತಿಯ ಸಭೆಯು ಜು.24 ರಂದು ಜುಮ್ಮಾ ನಮಾಝ್ ಬಳಿಕ ಜಮಾತ್ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಸೀದಿಯ ಧಾರ್ಮಿಕ ಹಾಗೂ ಜಮಾತ್ ಸಂಬಂಧಿತ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ನಡೆದ ಸುದೀರ್ಘ ಚರ್ಚೆಯ ಬಳಿಕ, ಖಿಳರ್ ಜುಮ್ಮಾ ಮಸೀದಿಯ ಹಿಂದಿನ ಖಾಲಿಯಾರ್ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮರಣದ ನಂತರ ಖಾಲಿಯಾಗಿದ್ದ ಸ್ಥಾನಕ್ಕೆ ಖಾಲಿಯಾರ್ ಆಗಿ ಪಾಣಕ್ಕಾಡ್ ಅಬ್ದುನ್ನಾಸರ್ ಹಯ್ಯ್ ತಂಙಳ್ ಬಾಅಲವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.

ಧಾರ್ಮಿಕ ಸೇವೆ ಹಾಗೂ ಜಮಾತಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಂಙಳ್ ಅವರ ನೇಮಕವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿದ್ದು, ಅವರ ನೇತೃತ್ವದಲ್ಲಿ ಜಮಾತಿನ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಗೌರವ ಅಧ್ಯಕ್ಷರಾದ ಬಿ.ಎಚ್. ಮಹಮ್ಮದ್, ಜಮಾತ್ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ರಝಕ್ ಬಿ. ಎಚ್, ಕೋಶಾಧಿಕಾರಿ ಫೈಝಲ್ ಐ.ಜೆ., ಉಪಾಧ್ಯಕ್ಷರಾದ ಶೇಖುಂಞ, ಕಾರ್ಯದರ್ಶಿಗಳಾದ ಹನೀಫ್ ವರ್ಷಾ ಹಾಗೂ ಮಹಮ್ಮದ್ ಕುದ್ರಡ್ಕ, ಬಿ.ಎ ನಝಿರ್, ಉಮರ್ ಶಾಫಿ, ಹಾರಿಸ್ ಐ.ಜೆ, ಹೈದರ್ ಬಿ.ಕೆ, ಕಾದರ್ ಟೈಲರ್, ಇಬ್ರಾಹಿಂ ಕೋಡಿ ಸಭೆ,ರಿಝ್ವಾನ್ ಬಿ.ಕೆ. ಅಬ್ದುಲ್ ರಹಮಾನ್, ಇಕ್ಬಾಲ್, ಇಸ್ಮಾಯಿಲ್ ಸಂಜಯನಗರ, ಜಮಾತ್ ಕಮಿಟಿ ಸದಸ್ಯರು ಹಾಗೂ ಜಮಾತಿಗರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಉಪ ಕಾರ್ಯನಿರ್ವಹಣಾಧಿಕಾರಿಯಾಗಿ ಸುಂದರ ಗೌಡ ನೇಮಕ

Suddi Udaya

ಗುರುವಾಯನಕೆರೆ: ನಿವೃತ್ತ ಕೆ.ಎಸ್.ಆರ್.ಟಿ.ಸಿ ಟ್ರಾಫಿಕ್ ಕಂಟ್ರೋಲರ್ ಕೃಷ್ಣ ಕಾಮತ್ ನಿಧನ

Suddi Udaya

ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಕಿಲ್ಲೂರಿನಲ್ಲಿ ಪ್ರತಿಷ್ಠಾಪನೆ: ಜ.11-12: ಮಿತ್ತಬಾಗಿಲು-ಮಲವಂತಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗುರು ಭವನ ಉದ್ಘಾಟನೆ

Suddi Udaya

ಮಹಾಕುಂಭಮೇಳದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿಗಳಿಂದ ಪುಣ್ಯ ಸ್ನಾನ

Suddi Udaya

ರೂ. 1.10 ಕೋಟಿ ವೆಚ್ಚದ ಕೂಕ್ರಬೆಟ್ಟು ಪ್ರಾಥಮಿಕ ಶಾಲಾ ನೂತನ ಕಟ್ಟಡದ ಲೋಕಾರ್ಪಣೆ: ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ನಿರ್ಮಿಸುವ ವಿವೇಕ ಯೋಜನೆಯನ್ನು ಜಾರಿಗೆ ತನ್ನಿ ರಾಜ್ಯ ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ಶಿಬಾಜೆ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಭಜನೋತ್ಸವ: ಶೌರ್ಯ ವಿಪತ್ತು ತಂಡದಿಂದ ಶ್ರಮದಾನ

Suddi Udaya
error: Content is protected !!