26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಗು.ನಾ.ಸ್ವಾ. ಸೇವಾ ಸಂಘ, ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ ಕುವೆಟ್ಟು- ಓಡಿಲ್ನಾಳ ಗ್ರಾಮ ಸಮಿತಿ ವತಿಯಿಂದ ಆಟಿಡೊಂಜಿ ಕೂಟ

ಕುವೆಟ್ಟು: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆ ಯುವ ಬಿಲ್ಲವ ವೇದಿಕೆ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಇದರ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಜು. 26 ರoದು ಕುವೆಟ್ಟು ವಿಮಲಾ ಜಗನ್ನಾಥ ಬoಗೇರ ಇವರ ಮನೆಯಲ್ಲಿ ಜರಗಿತು.

ಬೆಳಿಗ್ಗೆ ಕಾರ್ಯಕ್ರಮವನ್ನು ಹಿರಿಯರಾದ ಅಮ್ಮಿ ಕೋಟ್ಯಾನ್ ಕರಿಯಬೆ ಸೊಣoದೂರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಆಟೋಟ ಸ್ಪರ್ಧೆಗಳನ್ನು ಗಿರಿಜಾ ಕೋಟ್ಯಾನ್ ಮದ್ದಡ್ಕ ಇವರು ಚೆನ್ನೆದ ಮನೆ ಆಟ ಆಡುವ ಮೂಲಕ ಚಾಲನೆ ನೀಡಿದರು. ನoತರ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸoಘದ ಉಪಾಧ್ಯಕ್ಷೆ ಶಾoತ ಜೆ ಬಂಗೇರ ಇವರ ನೇತೃತ್ವದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಭಾ ಕಾರ್ಯಕ್ರಮ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಗ್ರಾಮ ಸಮಿತಿಯ ಅಧ್ಯಕ್ಷ ನಾಗೇಶ್ ಆದೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾoಬರ ಹೇರಾಜೆ ಮಾತನಾಡಿ ಈ ಆಚರಣೆ ಧಾರ್ಮಿಕ ನಂಬಿಕೆ. ಆಹಾರ ಪದ್ಧತಿ ಹೀಗೆ ಒಟ್ಟು ಜನ ಜೀವನದ ಚಿತ್ರನಗಳನ್ನು ಆಟಿ ತಿಂಗಳ ಆಚರಣೆಗಳು ನೆನಪಿಸುತ್ತದೆ. ಮಾತೆಯರ ಮೂಲಕ ಆಚರಣೆಗಳು ಉಳಿದಾಗ ಮಾತ್ರ ಮುಂದಿನ ಜನಾoಗಕ್ಕೆ ಕೊಡುಗೆಯಾಗಬಹುದು ಎoದು ಹೇಳಿದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ, ತಾಲೂಕು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಜಯರಾಂ ಬoಗೇರ ಹೇರಾಜೆ, ಚಿದಾನಂದ ಎಳ್ದಡ್ಕ, . ಕುವೆಟ್ಟು ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಲಲಿತಾ ಕೃಷ್ಣಪ್ಪ ಪೂಜಾರಿ ಕೇದಳಿಕೆ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಅನೂಪ್ ಬoಗೇರ , ವಿಮಲಾ ಜಗನ್ನಾಥ ಬoಗೇರ ಹೇರಾಜೆ, ವಿನೋದಿನಿ ರಾಮಪ್ಪ, ಮದ್ದಡ್ಕ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷ ತರುಷ್ ಜೆ ಹೇರಾಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷ ಸoಪತ್ ಸುವರ್ಣ, ತಾಲೂಕು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಹಿಳಾ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಶಾoಭವಿ ಪಿ ಬoಗೇರ, . ಕೋಶಾಧಿಕಾರಿ ತುಳಸಿ ವಸoತ್, ಮತ್ತಿತರರು ಆಗಮಿಸಿದ್ದರು. ಆನoದ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ದಿಶಾಲಿ ಪ್ರಾರ್ಥನೆ ಗೈದರು. ಶಾoತ ಜೆ ಬಂಗೇರ ಸ್ವಾಗತಿಸಿ, ಉಮೇಶ್ ಕುಮಾರ್ ಧನ್ಯವಾದ ನೀಡಿದರು. ಆಟಿ ಕೂಟದ ವಿಶೇಷ ಆಕರ್ಷಣೆಯಾಗಿ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿದ ಸುಮಾರು 40 ಬಗೆಯ ಸಾoಪ್ರದಾಯಕ ಖಾದ್ಯಗಳ ಪ್ರದರ್ಶನ ಸವಿಯುವ ಕಾರ್ಯಕ್ರಮ ನಡೆಯಿತು. ಗ್ರಾಮ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.

✍️ ಮನು ಮದ್ದಡ್ಕ

Related posts

ಮುಂಡಾಜೆ ಕೀರ್ತನಾ ಕಲಾತಂಡದ ಸದಸ್ಯರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಮೋಡ್ ವೀಲ್‌ಚೇರ್ ವಿತರಣೆ

Suddi Udaya

ಸುದ್ದಿ ಉದಯ ದೀಪಾವಳಿ ವಿಶೇಷ ಸಂಚಿಕೆ ಬಿಡುಗಡೆ

Suddi Udaya

ಅಳದಂಗಡಿ: ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ನಿಂದ ಅರ್ಹರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

Suddi Udaya

ಡಿ.14: ಮುಂಡೂರು ನಾಗಾಂಬಿಕಾ ಕ್ಷೇತ್ರದಲ್ಲಿ 40ಕ್ಕೂ ಮಿಕ್ಕಿ ಭಜನಾ ಮಂಡಳಿಗಳಿಂದ ಏಕಕಾಲದಲ್ಲಿ ಕಣಿತ ಭಜನೋತ್ಸವ

Suddi Udaya

ಬೆಳ್ತಂಗಡಿ: ಚಿನ್ನಯ್ಯನಿಗೆ ಜಿಲ್ಲಾ ಕೋರ್ಟ್ ನಲ್ಲಿ ಜಾಮೀನು ಮಂಜೂರು

Suddi Udaya
error: Content is protected !!