28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳಿಗೆ “ಹೆಜ್ಜೆಗೊಂದು ಸ್ಫೂರ್ತಿ” ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ : ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿಗಳ ಕುರಿತು ತಿಳಿವಳಿಕೆ ಮೂಡಿಸಲು ಮತ್ತು ಘಟಕವನ್ನು ಸಂಘಟನಾತ್ಮಕವಾಗಿ ಮುನ್ನಡೆಸುವ ನಿಟ್ಟಿನಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ “ಹೆಜ್ಜೆಗೊಂದು ಸ್ಫೂರ್ತಿ” ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮವು ಜರುಗಿತು.

ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಮೂಡಿಕೊಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ಉದ್ಘಾಟನಾ ಭಾಷಣ ಮಾಡಿದರು. ವ್ಯಕ್ತಿತ್ವ ವಿಕಸನ ನಿರ್ದೇಶಕ ಜ್ಞಾನೇಶ್ ಶಿರ್ಲಾಲ್ ಅವರು ವೇದಿಕೆಗೆ ಹಾಗೂ ಸಭೆಗೆ ಆಗಮಿಸಿದ ಎಲ್ಲಾ ಗಣ್ಯರು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜೇಶ್ ಎಸ್ ಬಲ್ಯ ಅವರು ನೂತನ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿಗಳು, ಕರ್ತವ್ಯಗಳು ಮತ್ತು ಸಂಘಟನೆಯಲ್ಲಿ ನಾಯಕತ್ವವನ್ನು ಬೆಳೆಸಿಕೊಳ್ಳುವ ಬಗ್ಗೆ ಮೌಲ್ಯಯುತವಾದ ತರಬೇತಿಯನ್ನು ನೀಡಿದರು.

ಘಟಕದ ಅಧ್ಯಕ್ಷೆ ಲೀಲಾವತಿ ಪಣಕಜೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಯುವವಾಹಿನಿ ಸಂಘಟನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶುಭ ಹಾರೈಸಿದರು.
ಕಾರ್ಯಕ್ರಮದ ಜೊತೆ ಕಾರ್ಯದರ್ಶಿ ಆಕಾಶ್ ಹಾಗೂ ಸಂಘಟನ ಕಾರ್ಯದರ್ಶಿ ಜಿತಿಕ್ಷ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಶೈಲೇಶ್ ಧನ್ಯವಾದವಿತ್ತರು.

Related posts

ಮದ್ದಡ್ಕ ಬಸ್ ನಿಲ್ದಾಣದ ಬದಿಯ ಚರಂಡಿಯಲ್ಲಿ ಕೊಳಚೆ ನೀರು ಶೇಖರಣೆ: ಸಂಬಂಧಪಟ್ಟವರು ಕೂಡಲೇ ಗಮನಹರಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya

ಧರ್ಮಸ್ಥಳ ಆಕಾಂಕ್ಷ ನಿಗೂಢ ಸಾವು ಪ್ರಕರಣ; ಸರಕಾರ ಕುಟುಂಬದೊಂದಿಗೆ ನಿಂತು ನ್ಯಾಯ ದೊರಕಿಸಿಕೊಡಬೇಕು :ಅಕ್ಬರ್ ಬೆಳ್ತಂಗಡಿ

Suddi Udaya

ಪ್ರತಿ ಮಂಗಳವಾರ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ‘ಗಣಹವನ’ ಸೇವೆ ಆರಂಭ

Suddi Udaya

ಬೆಳ್ತಂಗಡಿ ವಿ.ಹಿಂ.ಪ ಬಜರಂಗದಳ ಪ್ರಖಂಡದ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭ ಗೋ ಹತ್ಯೆಯನ್ನು ಖಂಡಿಸಿ ಪೋಲಿಸ್ ಠಾಣೆ ಮತ್ತು ಗೋ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ

Suddi Udaya

ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

Suddi Udaya

ಕುತ್ಲೂರು: ದರ್ಖಾಸು ಮನೆಯ ಶ್ರೀಮತಿ ಅಪ್ಪಿ ನಿಧನ

Suddi Udaya
error: Content is protected !!