26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ, ಮಹಿಳಾ ಘಟಕ, ಯುವ ವೇದಿಕೆ ಆಶ್ರಯದಲ್ಲಿ ‘ಆಟಿಡೊಂಜಿ ದಿನ’ ಮತ್ತು ಪ್ರತಿಭಾ ಪುರಸ್ಕಾರ

ನಡ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ,/ ಮಹಿಳಾ ಘಟಕ, ಯುವ ವೇದಿಕೆ, ನಡ ಇವರ ಆಶ್ರಯದಲ್ಲಿ ಜು.26 ರಂದು ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪಗೌಡ ನೆರವೇರಿಸಿದರು . ವಾಣಿ ವಿದ್ಯಾ ಸಂಸ್ಥೆಗಳು ಬೆಳೆದು ಬಂದ ಹಾದಿಯನ್ನು ವಿವರಿಸಿದರು ಹಾಗೂ ಸಮುದಾಯದವರು ಹೆಚ್ಚಿನ ಸಾಧನೆಯನ್ನು ಮಾಡಬೇಕು ಎಂಬ ಶುಭ ಹಾರೈಕೆ ಮಾಡಿದರು.

ಮುಖ್ಯ ಅತಿಥಿಯಾಗಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿ ಯುವ ಉದ್ಯಮಿ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯದ ಜನರ ಅಭಿವೃದ್ಧಿಯ ವಿಚಾರವನ್ನು ತಿಳಿಸಿದರು. ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದರು. ಸಮಾರಂಭದಲ್ಲಿ ಸುರೇಶ್ ಕೌಡಂಗೆ, ತಾಲೂಕು ಮಹಿಳಾ ವೇದಿಕೆ ಕಾರ್ಯದರ್ಶಿ ಶ್ರೀಮತಿ ಲೀಲಾವತಿ ಪ್ರಸ್ತುತ ಮಹಿಳೆಯರ ಆಚಾರ ವಿಚಾರಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಹಾಬಲ ಗೌಡ ಉಪನ್ಯಾಸಕರು ವಾಣಿ ಪದವಿ ಪೂರ್ವ ಕಾಲೇಜು ಇವರು ಆಟಿ ತಿಂಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಾಪ್ತಿ ಯಂ ಗೌಡ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗೂ ಕೋಕೋ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಗ್ರಾಮದ ಪ್ರತಿಭೆಗಳಾದ ಸುಚಿತ್ರ ಗೌಡ , ಭಾಗ್ಯಶ್ರೀ ಕೆ ಗೌಡ ಸನ್ಮಾನಿಸಲಾಯಿತು.

ಗ್ರಾಮದ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಎಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡುವುದರ ಮೂಲಕ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿಶೇಷ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯ ದಂಪತಿಗಳನ್ನು ಗುರುತಿಸಿ ಗೌರವಿಸಲಾಯಿತು. ಇದೇ ರೀತಿ ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ಪುರುಷರು ಕಿವಿಯೋಲೆ ಧರಿಸಿದವರನ್ನು ವಿಶೇಷವಾಗಿ ಗಮನಿಸಿ ವಿಶೇಷ ಬಹುಮಾನವನ್ನು ನೀಡಲಾಯಿತು. ಸಭಾಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಸೌಮ್ಯ ಯತೀಶ್ ಗೌಡ ವಹಿಸಿದ್ದರು.

ಗೌರವಾಧ್ಯಕ್ಷೆ ಮಮತಾ ಶ್ರೀನಾಥ್ ಸ್ವಾಗತಿಸಿ, , ಉಮಾವತಿ ಧನ್ಯವಾದ ಹೇಳಿದರು. ಹಲವಾರು ಜವಾಬ್ದಾರಿಗಳನ್ನು ಲಲಿತಾ ಸುಭಾಷ್ ಚಂದ್ರ ಗೌಡ, ಚಿತ್ರ ಕರುಣಾಕರ ಗೌಡ, ಹರ್ಣಿ, ತುಳಸಿ ಹರಿಶ್ಚಂದ್ರ ಗೌಡ, ಪವಿತ್ರ ದಿನೇಶ್ ಗೌಡ, ಲಲಿತಾ ಒಬ್ಬಯ್ಯ ಗೌಡ ನಿರ್ವಹಿಸಿದರು. ಗ್ರಾಮ ಸಮಿತಿಯ ಅಧ್ಯಕ್ಷ ಶ್ಯಾಮ ಸುಂದರ ಗೌಡ, ಯುವ ವೇದಿಕೆ ಅಧ್ಯಕ್ಷ ಶ್ರೀಧರ ಗೌಡ ಹಾಗೂ ಕಾರ್ಯದರ್ಶಿ ಉಮೇಶ್ ಗೌಡ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ರತ್ನಾವತಿ ಲೋಕೇಶ್ ಗೌಡ ನೆರವೇರಿಸಿದರು . ನಳಿನಿ ಮತ್ತು ಬಳಗ ಪ್ರಾರ್ಥನೆ ನೆರವೇರಿಸಿದರು. ಆಟಿಯ ವಿಶೇಷ ಬಗೆ ಬಗೆಯ ಖಾದ್ಯಗಳನ್ನು ಸವಿಯೋದರ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.

Related posts

ಕನ್ಯಾಡಿ ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ರವರಿಗೆ IOA ಸುವರ್ಣ ಸಾಧಕ ಪ್ರಶಸ್ತಿ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ನೂತನ ರಾಜ್ಯ ಪ್ರತಿನಿಧಿಯಾಗಿ ಭಾರತಿ ಪರ್ಕಳ ಆಯ್ಕೆ

Suddi Udaya

ಗುರುವಾಯನಕೆರೆ ಪ್ರಾ.ಕೃ.ಪ.ಸ. ಸಂಘದಿಂದ ಭಗೀರಥ ಜಿ. ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ವಕೀಲರ ಸಂಘದ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ವತಿಯಿಂದ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ

Suddi Udaya
error: Content is protected !!