26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ಸಂಪರ್ಕ ರಸ್ತೆಯಲ್ಲಿ ಮತ್ತೆ ಉರುಳಿ ಬಿದ್ದ ಮರ: ಪರದಾಡಿದ ಶಾಲಾ ಮಕ್ಕಳು

ವೇಣೂರು: ವೇಣೂರು-ಅಳದಂಗಡಿ ಸಂಪರ್ಕ ರಸ್ತೆಯ ಸೂಳಬೆಟ್ಟು ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಬೃಹದಾಕಾರದ ಮರಬಿದ್ದು ಸಂಪರ್ಕ ಕಡಿತಗೊಂಡಿತು.

ಇಂದು ಬೆಳಿಗ್ಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಖಾಸಗಿ ಶಾಲಾ ಬಸ್‌ ಸಂಚಾರಕ್ಕೆ ಅಡಚಣೆ ಉಂಟಾಗಿ ಶಾಲಾಮಕ್ಕಳಿಗೆ ತೊಂದರೆ ಆಗಿದೆ. ಕೆಲ ದಿನಗಳ ಹಿಂದೇ ಇದೇ ರಸ್ತೆಯಲ್ಲಿ ಮರಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದ್ದಲ್ಲದೆ ವಿದ್ಯುತ್ ಕಂಬಗಳೂ ಉರುಳಿಬಿದ್ದಿದ್ದವು. ಮರ ಉರುಳಿ ಬೀಳುವ ವೇಳೆ ವಾಹನ ಸಂಚಾರ ಇಲ್ಲದೇ ಇದ್ದುದರಿಂದ ಅನಾಹುತ ನಡೆಯುವುದು ತಪ್ಪಿದೆ. ರಸ್ತೆಯುದ್ದಕ್ಕೂ ರಸ್ತೆಯ ಬದಿಗಳಲ್ಲಿ ಮರಗಳಿದ್ದು, ಇದು ಅರಣ್ಯ ಪ್ರದೇಶಗಳಿಂದ ಕೂಡಿದೆ. ಆದರೆ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

Related posts

ಸೋಣoದೂರು ಅಂಗನವಾಡಿ ಕೇಂದ್ರದಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮ

Suddi Udaya

ಮುಂಡಾಜೆ : ಕುರುಡ್ಯ ಎಂಬಲ್ಲಿ ಗುಡ್ಡಕ್ಕೆ ಬೆಂಕಿ

Suddi Udaya

ರುಡ್‌ಸೆಟ್ ಸಂಸ್ಥೆಯಲ್ಲಿ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿಯಲ್ಲಿ ಮಹಾ ಸೀರೆ ಮೇಳ: ವಿಶೇಷ ರಿಯಾಯಿತಿಯೊಂದಿಗೆ ವಿವಿಧ ವಿನ್ಯಾಸವುಳ್ಳ ಸೀರೆಗಳು ; ಕೆಲವೇ ದಿನಗಳು ಮಾತ್ರ

Suddi Udaya

ಹೊಕ್ಕಾಡಿಗೋಳಿ ಕುಲಾಲ ಯಾನೆ ಕುಂಬಾರರ ಸಮಾಜ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಬಡ ಕುಟುಂಬದ ಮನೆಯ ಮೇಲ್ಚಾವಣಿ ದುರಸ್ತಿ

Suddi Udaya

ಕಡಬದ ನವ ಜೀವನ ಸದಸ್ಯರಿಂದ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya
error: Content is protected !!