21.7 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ನಗರದಲ್ಲಿ ಸರಣಿ ಕಳ್ಳತನ ಪ್ರಕರಣ: ಅಂತರ್ ರಾಜ್ಯ ಕುಖ್ಯಾತ ಕಳ್ಳನ ಸ್ಥಳ ಮಹಜರು

ಬೆಳ್ತಂಗಡಿ: ನಗರದ ಮೂರುರ್ಮಾಗದ ಬಳಿಯಿಂದ ಮಾತೃ ಶ್ರೀ ಹೊಟೇಲ್ ಹಾಗೂ ಕೋರ್ಟ್ ರಸ್ತೆಯವರೆಗೆ ಮೇ.19 ರಂದು ತಡರಾತ್ರಿ 11 ಕಡೆಗಳಲ್ಲಿ ಕಳ್ಳತನ ನಡೆಸಿ ನಗದು ಸಹಿತ ಇನ್ನಿತರ ವಸ್ತುಗಳನ್ನ ದೋಚಿದ್ದ ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಹೆಚ್ಚಿನ ವಿಚಾರಣೆಗಾಗಿ ಜು.27ರಂದು ಬೆಳ್ತಂಗಡಿ ಪೊಲೀಸರು ಮತ್ತೆ ಜೈಲಿನಿಂದ ಕರೆ ತಂದು ಕಳ್ಳತನ ನಡೆಸಿದ ಮಾತೃಶ್ರೀ ಹೋಟೆಲ್ ಸೇರಿದಂತೆ ಸುತ್ತಮುತ್ತಲಿನ ಅಂಗಡಿಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

ಆರೋಪಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ತಂಡಕ್ಕೆ ಗುರುವಾಯನಕೆರೆ ಜಂಕ್ಷನ್ ನಲ್ಲಿ ಜು.8 ರಂದು ಸಂಜೆ 6 ಗಂಟೆಗೆ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ತಿರುಗಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಿಳುನಾಡು ಜಿಲ್ಲೆಯ ಕೊಯಮುತ್ತೂರಿನ ವಿಜಯಾನ್ ಮಗ ಜಯಕುಮಾರ್(55) ಎಂಬುವುದಾಗಿ ತಿಳಿಸಿದ್ದಾನೆ. ಬಳಿಕ ಬೆಳ್ತಂಗಡಿಯಲ್ಲಿ 3 ಕಡೆ ,ಉಪ್ಪಿನಂಗಡಿಯಲ್ಲಿ 2 ಕಡೆ, ಸುರತ್ಕಲ್ ನಲ್ಲಿ 1 ಕಡೆ ಕಳ್ಳತನ ಸೇರಿ ಒಟ್ಟು ಆರು ಕಡೆಗಳಲ್ಲಿ ಸರಣಿ ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದ ಬಳಿಕ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಜು.9 ರಂದು ಹಾಜರುಪಡಿಸಿ ಜೈಲಿಗಟ್ಟಿದ್ದರು.

ಬೆಳ್ತಂಗಡಿ ಪೊಲೀಸರು ಆರೋಪಿ ಜಯಕುಮಾರ್ ನನ್ನು ಮಂಗಳೂರು ಜೈಲಿನಿಂದ ಜು.27 ರಂದು ಬೆಳಗ್ಗೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಜು.27 ರಂದು ಸಂಜೆ ಬೆಳ್ತಂಗಡಿಯ ಮಾತೃಶ್ರೀ ಹೊಟೇಲ್ ಮತ್ತು ಕಳ್ಳತನ ನಡೆಸಿದ ಸುತ್ತಮುತ್ತಲಿನ 5 ಘಟನಾ ಸ್ಥಳಗಳನ್ನು ಗುರುತಿಸಿ ಮಹಜರು ನಡೆಸಲಾಯಿತು. ನಾಳೆ ಉಜಿರೆಯ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದಲ್ಲಿ ನಡೆಸಿದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆದುಕೊಂಡು ಹೋಗಿ ಮಹಜರು ನಡೆಸಲಿದ್ದಾರೆ.

Related posts

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದೃಢ ಕಲಶ

Suddi Udaya

ಹತ್ಯಡ್ಕ: ನಿವೃತ್ತ ಶಿಕ್ಷಕ ಮಹಾದೇವ ಹೆಬ್ಬಾರ್ ನಿಧನ

Suddi Udaya

ಮೇ 20,21: ಸಿಇಟಿ ಪರೀಕ್ಷೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮ ದೇವರು ರಾಮ ತಾರಕ ಹೋಮ ಪೂರ್ಣಹುತಿ ಕಾಲದಲ್ಲಿ ಅಗ್ನಿ ಮುಖದಲ್ಲಿ ಕಂಡು ಬಂದ ದೃಶ್ಯ

Suddi Udaya

ಪದ್ಮುಂಜ ಹಾ.ಉ.ಸ‌. ಸಂಘದ ಮಾಜಿ ನಿರ್ದೇಶಕ ಪೂವನಿ ಗೌಡ ರವರಿಗೆ ಸಹಕಾರಿ ಸಪ್ತಾಹದಲ್ಲಿ ಕ್ಷೀರ ರತ್ನ ಪ್ರಶಸ್ತಿ

Suddi Udaya
error: Content is protected !!