26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಿ. ವಿಜಯ ಕುಮಾರ್ ಗೆ ಕರ್ನಾಟಕದ ಡಿಜಿ ಮತ್ತು ಐಜಿಪಿ ರವರ ಪ್ರಶಂಸ ಪದಕ ಪ್ರದಾನ

ಬೆಳ್ತಂಗಡಿ: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ಬೆಳ್ತಂಗಡಿ ನಗರದ ಕೆಲ್ಲಗುತ್ತು ನಿವಾಸಿ ದಿ. ಗೋಪಾಲ ಕೃಷ್ಣ ಮತ್ತು ಶಾರದ ದಂಪತಿಗಳ ಪುತ್ರ ಪ್ರಸ್ತುತ ಉಡುಪಿ ಪೊಲೀಸ್ ಇಲಾಖೆ ಯಲ್ಲಿ ಸಿವಿಲ್ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ. ವಿಜಯಕುಮಾರ್ ರವರಿಗೆ 2026 ನೇ ಸಾಲಿನ ಕರ್ನಾಟಕ ದ ಡಿಜಿ ಮತ್ತು ಐಜಿಪಿ ರವರು ನೀಡುವ ಪ್ರತಿಷ್ಠಿತ ಪ್ರಶಂಸನ ಚಿನ್ನದ ಪದಕವನ್ನು ಬೆಂಗಳೂರಿನ ಕೆ ಎಸ್ ಆರ್ ಪಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ
ಡಿ.ಜಿ & ಐಜಿಪಿ ಡಾ.ಎಂ. ಎ. ಸಲಿಂ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಡಿಜಿಪಿಗಳಾದ ಪ್ರಣವ್ ಮೊಹಂತಿ, ಅಲೋಕ್ ಕುಮಾರ್, ಅರುಣ್ ಚಕ್ರವರ್ತಿ ಮತ್ತಿತರ ಅಧಿಕಾರಗಳು ಉಪಸ್ಥಿತರಿದ್ದರು.

ಬಿ.ವಿಜಯ ಕುಮಾರ್ ಅವರು ಈ ಮೊದಲು 2022ರಲ್ಲಿ ಕರ್ನಾಟಕ ಮುಖ್ಯ ಮಂತ್ರಿ ಯವರ ಚಿನ್ನದ ಪದಕ ಹಾಗೂ 2024ರಲ್ಲಿ ಭಾರತದ ರಾಷ್ಟ್ರಪತಿಗಳ ಶ್ಲಾಘನೀಯ ಪದಕಕ್ಕೆ ಪಾತ್ರರಾಗಿದ್ದರು.
ಇವರು ಸುಮಾರು 33 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಇವರು ಈ ಮೊದಲು ಉಳ್ಳಾಲ, ಪಣಂಬೂರು, ಕದ್ರಿ, ಉರ್ವ, ಪುತ್ತೂರು ನಗರ, ಉಡುಪಿ ನಗರ, ಉಡುಪಿ ಸಂಚಾರ ಮಹಿಳಾ ಠಾಣೆ, ಡಿ ಸಿ ಅರ್ ಬಿ ಮುಂತಾದ ಕಡೆ ಸೇವೆ ಸಲ್ಲಿಸಿರುತ್ತಾರೆ. ಇವರ ಈ ಸಾಧನೆಗೆ ದ. ಕ ಮತ್ತು ಉಡುಪಿ ಜಿಲ್ಲೆಯ ಸಹೋದ್ಯೋಗಿಗಳು ಮತ್ತು ಸಾರ್ವಜನಿಕರು ಅಭಿನಂದಿಸಿರುತ್ತಾರೆ.

Related posts

ತೋಟತ್ತಾಡಿ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನಾಗಬನದಲ್ಲಿ ಪಂಚಮಿ ಪ್ರಯುಕ್ತ ವಿಶೇಷ ಪೂಜೆ

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ದ.ಕ. ಪ್ರಥಮ , ಉಡುಪಿ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಕೊಕ್ಕಡದ ಬೃಹತ್ ರಕ್ತದಾನ ಶಿಬಿರ : 331 ಯೂನಿಟ್ಸ್ ರಕ್ತ ಸಂಗ್ರಹಣೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ವಾಣಿಜ್ಯ ಕಟ್ಟಡ ‘ಉನ್ನತಿ’ ಉದ್ಘಾಟನೆ

Suddi Udaya

ದಿಡುಪೆ: ಮನೆಯ ಹೊರ ಛಾವಣಿಯಿಂದ ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

Suddi Udaya
error: Content is protected !!