September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಸಂಜೀವ ಮಲೆಕುಡಿಯ ಅವರಿಗೆ ಬೆಸ್ಟ್ ಫೌಂಡೇಶನ್‌ನಿಂದ ವೀಲ್‌ಚೇರ್ ಹಸ್ತಾಂತರ

ಬೆಳ್ತಂಗಡಿ: ಬೆಸ್ಟ್ ಫೌಂಡೇಶನ್ ವತಿಯಿಂದ ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಲೆಕುಡಿಯರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಮಲೆಕುಡಿಯ ಅವರಿಗೆ ವೀಲ್‌ಚೇರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ವೀಲ್‌ಚೇರ್ ಅನ್ನು ಹಸ್ತಾಂತರಿಸಿ, ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವಾಗುವ ಸೇವಾ ಕಾರ್ಯಗಳನ್ನು ಬೆಸ್ಟ್ ಫೌಂಡೇಶನ್ ಮುಂದುವರಿಸಿಕೊಂಡು ಹೋಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನವೀನ್ ಗೌಡ, ಸಮಾಜಸೇವಕ ಮಹಮ್ಮದ್ ಸಿದ್ದಿಕ್ ಮಲೆಬೆಟ್ಟು ಸೇರಿದಂತೆ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

Related posts

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ವತಿಯಿಂದ ಅಗ್ನಿವೀರ್ ಪುಷ್ಪರಾಜ್ ರವರಿಗೆ ಗೌರವಾರ್ಪಣೆ

Suddi Udaya

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲರ್ಸ್ ಡೇ 2026–27

Suddi Udaya

ಬೆಳ್ತಂಗಡಿಯ ವಿನು ಬಳಂಜ ನಿರ್ದೆಶನದ ‘ಬೇರ’ ಚಲನಚಿತ್ರದ ಟೀಸರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರಿಂದ ಬಿಡುಗಡೆ

Suddi Udaya

ಲಾಯಿಲ: ಎಸ್. ಡಿ. ಪಿ. ಐ ವತಿಯಿಂದ ಹಳೆಪೇಟೆ ವ್ಯಾಪ್ತಿಯಲ್ಲಿ ನ್ಯಾಯ ಬೆಲೆ ಅಂಗಡಿಗಾಗಿ ಆಹಾರ ನಿರೀಕ್ಷಕರಿಗೆ ಮನವಿ

Suddi Udaya

ನಿಡ್ಲೆ : ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ಕಾರ್ಯಕ್ರಮ: ಪುತ್ತೂರಿನ ಅರುಣ್ ಪುತ್ತಿಲ , ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಉಜಿರೆ ಶ್ರೀ. ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ

Suddi Udaya
error: Content is protected !!