28.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಕ್ಸೆಲ್ ಪುಟಾಣಿಗಳ ” ನಡೆ ಪ್ರಕೃತಿಯ ಕಡೆ” ಕಾರ್ಯಕ್ರಮ

ಗುರುವಾಯನಕೆರೆ: ಅಳಿವಿನಂಚಿನಲ್ಲಿರುವ ಪ್ರಕೃತಿಯನ್ನು ಸಂರಕ್ಷಿಸುವ ಕುರಿತು ಎಳೆಹರೆಯದಲ್ಲೇ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಗುರುವಾಯನಕೆರೆಯ ಎಕ್ಸೆಲ್ ಟೆಕ್ನೋ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ‘ನೇಚರ್ ನರ್ಚರ್ ಡೇ’ (Nature Nurture Day)ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂಯೋಜಕಿ ಶ್ರೀಮತಿ ಲೀನಾ ಫ್ಲೋರಿನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಹಸಿರು ಬಣ್ಣದ ಉಡುಗೆ ತೊಟ್ಟು, ಹಸಿರು ಬಣ್ಣದ ವಿವಿಧ ವಸ್ತುಗಳು ಹಾಗೂ ಆಟಿಕೆಗಳನ್ನು ಪ್ರದರ್ಶಿಸಿದರು. ಕಾಡುಮನುಷ್ಯರ ವೇಷಧಾರಿಗಳು ಗುಹೆಯ ಮಾದರಿಯಿಂದ ಹೊರಬಂದು ಎಲ್ಲರ ಗಮನ ಸೆಳೆದರು. ವಿವಿಧ ವಿಭಾಗಗಳ ಆಯ್ದ ವಿದ್ಯಾರ್ಥಿಗಳು ಪ್ರಕೃತಿ ಸಂರಕ್ಷಣೆಯ ಮಹತ್ವ ಸಾರುವ ಪಾತ್ರಾಭಿನಯ ಹಾಗೂ ಭಾಷಣಗಳನ್ನು ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ ಅವರು ಪ್ರಕೃತಿಯ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸಿ, ಮುಂದಿನ ದಿನಗಳಿಂದ ಪ್ರತಿದಿನದ ಪ್ರಾರ್ಥನಾ ಸಭೆಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಕಿಯರಾದ ಗೀತಾ, ಜೋಸ್ಲಿಟಾ ಲೋಬೊ, ಪೂರ್ಣಿಮಾ ಆಚಾರ್ಯ, ಲವೀನಾ, ಪ್ರೇಮ, ವಿಲ್ಮಾ, ಚೇತನಾ ಹಾಗೂ ಬೋಧಕೇತರ ಸಿಬ್ಬಂದಿ ಸಹಕರಿಸಿದರು. ಹಸಿರುಮಯ ಕಾರ್ಯಕ್ರಮದ ಯಶಸ್ಸಿನಲ್ಲಿ ಪೋಷಕರ ಆಸಕ್ತಿ, ಸಹಕಾರ ಮತ್ತು ಪರಿಶ್ರಮ ಶ್ಲಾಘನೀಯವಾಗಿತ್ತು.

Related posts

ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಕಾಶಿಪಟ್ಣ ಗ್ರಾಮ ಪಂಚಾಯತ್ ಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

Suddi Udaya

ಪಣಕಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಮೊಸರು ಕುಡಿಕೆ ಉತ್ಸವದ‌ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜು-‘ಆಟಿಡೊಂಜಿ ದಿನ’ ಕಾರ್ಯಕ್ರಮ.

Suddi Udaya

ಸೆ.26-27: ಬೆಳ್ತಂಗಡಿಯಲ್ಲಿ ಊದು ಪೂಜೆ ಮತ್ತು ಬೋಳ್ತೆರ್ದ ಪಿಲಿಕುಲೆನ ಅಬ್ಬರದ ನಲಿಕೆ

Suddi Udaya

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ನಾರ್ಯ ಪೊದುಂಬಿಲ ಕೆಸರ್ ದ ಕಂಡಡ್ ಪರ್ಬದ ಗೊಬ್ಬು ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!