30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ರೋಟರಿ ಕ್ಲಬ್ ಹಾಗೂ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ರೋಟರಿ ಕ್ಲಬ್ ಹಾಗೂ ಇಂಟರಾಕ್ಟ್ ಕ್ಲಬ್‌ನ 2026–27ನೇ ಸಾಲಿನ ಪದಗ್ರಹಣ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳಾಗಿ ವಿದ್ಯಾರ್ಥಿ ಕ್ಷಿತಿಜ್ ಶೆಟ್ಟಿ ಅಧ್ಯಕ್ಷರಾಗಿ, ವಿದ್ಯಾರ್ಥಿನಿ ಪೃಥ್ವಿ ಪಿ.ಎಂ. ಕಾರ್ಯದರ್ಶಿಯಾಗಿ ಹಾಗೂ ವಿದ್ಯಾರ್ಥಿನಿ ಧನ್ವಿ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಇಂಟರಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರು ಹಾಗೂ ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿಯನ್ ಡಾ. ಜಯಕುಮಾರ್ ಶೆಟ್ಟಿ ಅವರು ನಾಯಕತ್ವದ ಗುಣಗಳು, ಸೇವಾ ಮನೋಭಾವ ಹಾಗೂ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ರೋಟರಿಯನ್ ಪ್ರವೀಣ್ ಗೋರೆ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರೋಟರಿಯನ್ ರಶ್ಮಿ ಕಾರಂತ್ ಅವರು ಜೀವನ ಕೌಶಲ್ಯ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ 2025–26ನೇ ಸಾಲಿನ ಇಂಟರಾಕ್ಟ್ ಕ್ಲಬ್‌ನ ಅಧ್ಯಕ್ಷೆಯಾಗಿದ್ದ ವಿದ್ಯಾರ್ಥಿನಿ ಸಹಿತ ಕಳೆದ ಸಾಲಿನ ವಿವಿಧ ಸೇವಾ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಬಳಿಕ ನೂತನ ಅಧ್ಯಕ್ಷರು 2026–27ನೇ ಸಾಲಿನ ಕಾರ್ಯಯೋಜನೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ 7, 8 ಹಾಗೂ 9ನೇ ತರಗತಿಗಳಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ರೋಟರಿಯನ್‌ಗಳು ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ.ಜಿ., ಶಿಕ್ಷಕ ವೃಂದ, ರೋಟರಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಎಸ್‌ಡಿಎಂ ಡಿ.ಎಡ್. ಹಾಗೂ ಬಿ.ಎಡ್. ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಪಾಸ್ಕ ಹಬ್ಬದ ಅಂಗವಾಗಿ ಹನ್ನೆರಡು ಜನ ಶಿಷ್ಯರ ಕಾಲುಗಳನ್ನು ತೊಳೆದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್

Suddi Udaya

ಎ.19&20: ಬೆಳ್ತಂಗಡಿ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಕೊಡುಗೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಮಾಹಿತಿ ಕಾರ್ಯಾಗಾರ

Suddi Udaya

ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲದ ಚುನಾವಣೆ

Suddi Udaya

ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಆರೋಪ: ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನ

Suddi Udaya
error: Content is protected !!