32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿಯಾಗಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ನೇಮಕ

ಬೆಳ್ತಂಗಡಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ಎಚ್.ಎಸ್. ಅವರ ಆದೇಶದಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಬೆಳ್ತಂಗಡಿಯ ಅಭಿನಂದನ್ ಹರೀಶ್ ಕುಮಾರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಈ ನೇಮಕದ ಮೂಲಕ ಉತ್ತರ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯನ್ನು ಬಲಿಷ್ಠಗೊಳಿಸುವುದು, ಯುವಕರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವುದು ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.

ಅಭಿನಂದನ್ ಹರೀಶ್ ಕುಮಾರ್ ಈ ಹಿಂದೆ ಮಂಡ್ಯ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ವಹಿಸಿಕೊಂಡು ಯುವ ಕಾಂಗ್ರೆಸ್ ನ ಪಕ್ಷ ಸಂಘಟನೆಯನ್ನು ಪ್ರಬಲಗೊಳಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರ ಗಮನ ಸೆಳೆದಿದ್ದರು‌.

ಯುವ ಸಂಘಟಕರಾಗಿ,ಯುವ ಉದ್ಯಮಿಯಾಗಿ,ದಾನಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಅಭಿನಂದನ್ ಹರೀಶ್ ಕುಮಾರ್ ಅವರ ಉತ್ತರ ಕನ್ನಡದ ಜವಾಬ್ದಾರಿ ವಹಿಸಿಕೊಂಡಿದ್ದು ಯುವ ಕಾಂಗ್ರೆಸ್ ಗೆ ಇನ್ನಷ್ಟು ಬಲ ಬಂದತಾಗಿದೆ.

Related posts

ಕುಕ್ಕೇಡಿ: ಫಂಡಿಜೆ ಸ.ಹಿ. ಪ್ರಾಥಮಿಕ ಶಾಲೆಯಲ್ಲಿ ಅಜ್ಜ-ಅಜ್ಜಿಯಂದಿರ ದಿನ ಆಚರಣೆ

Suddi Udaya

ಕೊಯ್ಯೂರು ಶ್ರೀಕೃಷ್ಣ ಭಜನಾ ಮಂಡಳಿ ಭಜನೋತ್ಸವ

Suddi Udaya

ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರ ಡ್ರಾಗನ್ ಕೃಷಿ ತೋಟಕ್ಕೆ ವಿಜ್ಞಾನಿ ತಂಡ ಭೇಟಿ

Suddi Udaya

ಯೋಗಾಸನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ಮೋಹಿತ್ ತೃತೀಯ ಸ್ಥಾನ

Suddi Udaya

ಬಜಿಲ ಕಿ.ಪ್ರಾ. ಶಾಲೆಯಲ್ಲಿ ಶ್ರಮದಾನ, ಪೋಷಕರಿಂದ ಮಾದರಿ ಶಾಲಾ ಕೈತೋಟ ನಿರ್ಮಾಣ

Suddi Udaya

ಕೋಳಿ ತ್ಯಾಜ್ಯದಿಂದ ಅಶುದ್ಧಿಯಾಗುತ್ತಿರುವ ಶಿಶಿಲದ‌ ” ಕಪಿಲೆ”

Suddi Udaya
error: Content is protected !!