32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ನಿಡ್ಲೆ–ಕಾಟ್ಲಾದಲ್ಲಿ ಏರ್‌ಟೆಲ್ ಟವರ್ ಸಮಸ್ಯೆ: 2–3 ವರ್ಷಗಳಿಂದ ಸಂಕಷ್ಟದಲ್ಲಿರುವ ಗ್ರಾಮಸ್ಥರು

ಬೆಳ್ತಂಗಡಿ : ನಿಡ್ಲೆ–ಕಾಟ್ಲಾ ಪ್ರದೇಶದಲ್ಲಿರುವ ಏರ್‌ಟೆಲ್ ಮೊಬೈಲ್ ಟವರ್ ಕಳೆದ 2–3 ವರ್ಷಗಳಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮವಾಗಿ ಕರೆ (Call) ಸೇವೆ ಪದೇಪದೇ ಕಡಿತಗೊಳ್ಳುತ್ತಿದ್ದು, ಇಂಟರ್ನೆಟ್ ಡೇಟಾ ಸೇವೆ ಹೆಸರಿಗೆ ಮಾತ್ರ ಉಳಿದಿದೆ.

ವಿಶೇಷವಾಗಿ ಪುದುವೆಟ್ಟು ಗ್ರಾಮದ ಮೇಲಿನಡ್ಕ, ಸುರಳ್ಳಿ ಹಾಗೂ ಮಡ್ಯಾ ಭಾಗಗಳಲ್ಲಿ ಏರ್‌ಟೆಲ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸೇವೆ ಬಹುತೇಕ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣ, ರೈತರ ಮಾಹಿತಿ ವಿನಿಮಯ, ಡಿಜಿಟಲ್ ಬ್ಯಾಂಕಿಂಗ್, ಯುಪಿಐ ಪಾವತಿಗಳು, ವ್ಯಾಪಾರ–ವಹಿವಾಟು ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧಿಸುವುದಕ್ಕೂ ತೀವ್ರ ತೊಂದರೆ ಉಂಟಾಗಿದೆ.

ಈ ಕುರಿತು ಏರ್‌ಟೆಲ್ ಗ್ರಾಹಕ ಸೇವೆಗೆ ಸಾರ್ವಜನಿಕರು ಹಲವು ಬಾರಿ ದೂರು ಸಲ್ಲಿಸಿದ್ದರೂ, ಕಳೆದ 2–3 ವರ್ಷಗಳಿಂದ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಟವರ್‌ನ ತಾಂತ್ರಿಕ ದೋಷವನ್ನು ಪರಿಶೀಲಿಸಿ, ಶಾಶ್ವತವಾಗಿ ಸಮಸ್ಯೆ ಪರಿಹರಿಸಿ, ಗುಣಮಟ್ಟದ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸೇವೆಯನ್ನು ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಮಸ್ಯೆ ಮುಂದುವರಿದರೆ ಉನ್ನತ ಅಧಿಕಾರಿಗಳಿಗೆ ಹಾಗೂ ಸಂಬಂಧಿತ ಇಲಾಖೆಗಳಿಗೆ ಸಾಮೂಹಿಕ ಮನವಿ ಸಲ್ಲಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

Related posts

ಬಳಂಜ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಸುರತ್ಕಲ್: ಶ್ರೀನಿವಾಸ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ

Suddi Udaya

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಫೌಂಡೇಶನ್‌ ತರಗತಿ ಆರಂಭ

Suddi Udaya

ವೇಣೂರು ಗೋಳಿದಡ್ಕ ನಿವಾಸಿ ಮಂಜಪ್ಪ ದೇವಾಡಿಗ ನಿಧನ

Suddi Udaya

ಟೀಮ್ ದೇವರಗುಡ್ಡೆ ವತಿಯಿಂದ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕೈತೋಟ ರಚನೆ

Suddi Udaya

ಅಬ್ಬಕ್ಕ ರಾಣಿ ಕುರಿತು ವಿಶೇಷ ಸರಣಿ ಉಪನ್ಯಾಸ ಕಾರ್ಯಾಕ್ರಮ ಸಮಾರೋಪ ಹಾಗೂ ಸಂಶೋಧನಾ ಗ್ರಂಥ ಬಿಡುಗಡೆ

Suddi Udaya
error: Content is protected !!