August 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪೆರ್ಲ ಬೈಪಾಡಿ ಸ. ಹಿ. ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಕೆ.ರವರಿಗೆ ಬೀಳ್ಕೊಡುಗೆ ಸಮಾರಂಭ

ಬಂದಾರು : ಪೆರ್ಲ ಬೈಪಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಜಯಶ್ರೀ ಕೆ. ಇವರಿಗೆ ಬೀಳ್ಕೊಡುಗೆ ಸಮಾರಂಭವು ಜು.31ರಂದು ಪೆರ್ಲ ಬೈಪಾಡಿ ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ಗೌಡ ಕಾಡಂಡ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶ್ರೀನಿವಾಸ ಗೌಡ ಬಾಲಂಪ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.


ಇವರು ಶಿಕ್ಷಣ ಕ್ಷೇತ್ರದಲ್ಲಿ 1994ರಿಂದ1998ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿ 4 ವರ್ಷಗಳ ಕಾಲ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ೧೯೯೮ರಿಂದ ೨೦೦೭ರ ವರೆಗೆ ಕುಂಟಾಲಪಲ್ಕೆ ಶಾಲೆಯಲ್ಲಿ ೯ ವರ್ಷಗಳ ಕಾಲ ಪ್ರಭಾರ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದು, ೨೦೦೭ರಿಂದ ೨೦೨೬ ಮೇ ವರೆಗೆ ಸರಕಾರಿ ಹಿರಿಯ ಪ್ರಾಥಮಿ ಶಾಲೆ ಬಜಿಲದಲ್ಲಿ ೧೯ ವರ್ಷಗಳ ಕಾಲ ಪ್ರಭಾರ ಮುಖ್ಯಶಿಕ್ಷಕಿಯಾಗಿ ಸೇವೆಸಲ್ಲಿಸಿದ್ದಾರೆ.

2026 ಮೇ 6ರಿಂದ ಜುಲೈ 31ರ ವರೆಗೆ ಸ.ಹಿ.ಪ್ರಾ.ಶಾಲೆ ಪೆರ್ಲ ಬೈಪಾಡಿಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಒಟ್ಟು ೩೨ ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ್ದಾರೆ. ಪ್ರಥಮವಾಗಿ ಇವರು ಪೆರ್ಲ ಬೈಪಾಡಿ ಅಂಗನವಾಡಿ ಕಾರ್ಯಕರ್ತೆಯಾಗಿಯೂ ೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.


ಒಟ್ಟು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಾರದ ಜಯಶ್ರೀ ಕೆ. ಅವರು ಶೈಕ್ಷಣಿಕ ಅನುಭವವನ್ನು ಹಂಚಿಕೊಂಡು ಮಕ್ಕಳಿಗೆ ಹಿತವಚನ ನೀಡಿದರು. ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಲಸ್ಟರ್ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು, ಊರಿನ ಗಣ್ಯರು, ಸಂಘಟಕರು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದು ನಿವೃತ್ತರನ್ನು ಹಾಗೂ ಪತಿ ಹೊನ್ನಪ್ಪ ಗೌಡ ಸಹಿತ ಸನ್ಮಾನಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆಯಿಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಶಾಲಾ ಸಹ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿಯರಾದ ನಳಿನಿ ಸ್ವಾಗತಿಸಿ ದೀಕ್ಷಾ ಧನ್ಯವಾದ ಸಮರ್ಪಿಸಿದರು.

ಇವರು ಮೂಲತಃ ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ದಿ. ದೇವಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ೨ನೇ ಪುತ್ರಿ. ಹಿರೆಬಂಡಾಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಉಪ್ಪಿನಂಗಡಿಯಲ್ಲಿ ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪಡೆದು, ಸರ್ವೋದಯ ವಿದ್ಯಾಲಯ ವಿರಾಜಪೇಟೆ ಕೊಡಗು ಜಿಲ್ಲೆಯಲ್ಲಿ ಟಿ.ಸಿ.ಎಚ್. ತರಬೇತಿಯನ್ನು ಉತ್ತಮ ಶ್ರೇಣಿಯಲ್ಲಿ ಪಡೆದಿದ್ದಾರೆ. ಇವರು ಬಂದಾರು ಗ್ರಾಮದ ಪೆರ್ಲ ಬೈಪಾಡಿ ಸೋಣಕುಮೇರು ಎಂಬಲ್ಲಿ ಪತಿ ಹೊನ್ನಪ್ಪ ಗೌಡ ಎಸ್. ಪುತ್ರ ಲೋಹಿತ್ ಕುಮಾರ್ ಜೆ.ಹೆಚ್, ಪುತ್ರಿ ಗೀತಪ್ರಿಯಾ ಹಾಗೂ ಸೊಸೆ ಅಳಿಯರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

Related posts

ಧರ್ಮಸ್ಥಳ ಎಸ್.ಡಿ.ಎಂ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಕೊಯ್ಯೂರು ಸ .ಹಿ ಪ್ರಾ. ಶಾಲೆ ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Suddi Udaya

ಬೆಳ್ತಂಗಡಿಯಲ್ಲಿ ಅಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆ ಶುಭಾರಂಭ

Suddi Udaya

ಕಲ್ಮಂಜ ಬ್ರಹ್ಮಶ್ರೀ ಯುವ ಬಿಲ್ಲವ ವೇದಿಕೆಯ ಮಾಸಿಕ ಸಭೆ

Suddi Udaya

22 ವರ್ಷ ಭಾರತಮಾತೆಯ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಾಯಿಲದ ಅಶೋಕ್ ಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಮಹಿಳಾ ಐಟಿಐಗೆ ಶೇಕಡಾ ನೂರು ಫಲಿತಾಂಶ

Suddi Udaya
error: Content is protected !!