25.2 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಬೆಳ್ತಂಗಡಿ ಹಾಗೂ 9 ವಲಯಗಳ ಆಶ್ರಯದಲ್ಲಿ ಆಟಿದ ಕಮ್ಮೆನ ಮತ್ತು ಆಟೋಟ ಸ್ಪರ್ಧೆ

ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಬೆಳ್ತಂಗಡಿ ಹಾಗೂ 9 ವಲಯಗಳ ಆಟಿದ ಕಮ್ಮೆನ ಮತ್ತು ಆಟೋಟ ಸ್ಪರ್ಧೆ ಆ. 02ರಂದು ಬೆಳ್ತಂಗಡಿ ಮಂಜುನಾಥ ಕಲಾ ಭವನದ ಬಯಲು ಮಂಟಪದಲ್ಲಿ ನಡೆಯಿತು.

ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದರು . ಆಟೊಟ ಸ್ಪರ್ಧೆಯ ಉದ್ಘಾಟನೆಯನ್ನು ಬೆಳ್ತಂಗಡಿ ಸುದ್ದಿ ಉದಯ ಪತ್ರಿಕೆಯ ಸ್ಥಾಪಕ ನಿರ್ದೇಶಕರು ಬೆಳ್ತಂಗಡಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಂ ಬಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಗಮಿಸಿದ ಎಲ್ಲಾ ವೃತ್ತಿಬಾಂಧವರು ಸ್ಪರ್ಧೆಗಳಲ್ಲಿ ಭಾಗವಹಿಸಿದರು .

ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೆನ್ಸಿ ಡಿಸೋಜಾ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ
ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಟೈಲರ್ ಅಶೋಶಿಯೇಷನ್ ಬೆಳ್ತಂಗಡಿ ಹಾಗೂ ಸಂದೀಪ್ ಕ್ರಿಯೆಷನ್ ಅರ್ಪಿಸುವ ‘ಭರವಸೆಯ ಸೂಜಿದಾರ’ ಟೈಲರ್ ಗಳ ಜೀವನಾಧಾರಿತ ಕಿರು ಚಿತ್ರಣವನ್ನು ಬಿಡುಗಡೆ ಮಾಡಲಾಯಿತು.

ನಿವೃತ್ತ ರಾ, ಹೆ, ಮುಖ್ಯ ಅಭಿಯಂತರರು ಮಂಗಳೂರು ಶಿವಪ್ರಸಾದ್ ಅಜಿಲ ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು., ಟೈಲರ್ ಸಹಕಾರ ಸಂಘದ ಅಧ್ಯಕ್ಷರು ಮಾಜಿ ಕ್ಷೇತ್ರ ಸಮಿತಿಯ ಅಧ್ಯಕ್ಷ ವಲೇರಿಯನ್ ರೊಡ್ರೀಗಸ್, ಮುರಳಿಧರ ಭಟ್ ನೋಟರಿ ವಕೀಲರು, ಮೋಹನ್ ಸ್ವರ್ಣ ಆಡಳಿತ ಪಾಲುದಾರರು ಮಾತೃಶ್ರೀ ಸಿಲ್ಕ್ ಬೆಳ್ತಂಗಡಿ , ಸಭೆಯಲ್ಲಿ 9 ವಲಯದ ಹಿರಿಯ ಟೈಲರ್ ರವರನ್ನು ಗೌರವಿಸಲಾಯಿತು, ಆಟೋಟ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿಯಾದ ಪ್ರಜ್ವಲ್ ಕುಮಾರ್, ಜಿಲ್ಲಾ ಸಮಿತಿಯ ಅಧ್ಯಕ್ಷ ಜಯಂತ್ ಉರ್ಲಾಂಡಿ, ಜಿಲ್ಲಾ ಉಪಾಧ್ಯಕ್ಷೆ ವೇದಾವತಿ ಜನಾರ್ಧನ್, ಕ್ಷೇತ್ರದ ಕೋಶಾಧಿಕಾರಿ ಶಶಿಕಲಾ ಗೋಪಾಲ್ ಹಾಗೂ 9 ವಲಯದ ಅಧ್ಯಕ್ಷರುಗಳು ಆಸೀನರಾಗಿದ್ದರು. ಮುಖ್ಯ ಆಮಂತ್ರಿತರಾದ ಜಿಲ್ಲಾ ಸಮಿತಿಯ ಸದಸ್ಯರು ಕುಶಾಲಪ್ಪ ಗೌಡ, ಶಾಂಭವಿ ಪಿ ಬಂಗೇರ, ರವೀಂದ್ರ ಗೇರುಗಟ್ಟೆ, ನಾಗೇಶ್ ಕುಮಾರ್, ಕ್ಷೇತ್ರದ ಉಪಾಧ್ಯಕ್ಷರು ವಸಂತ ಸ್ವಾತಿ ಟೈಲರ್, ಕ್ಷೇತ್ರದ ಪದಾಧಿಕಾರಿಗಳು, ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹರಿಣಿ ಕೆಂಬರ್ಜೆ ಪ್ರಾರ್ಥನೆ ನೆರವೇರಿಸಿದರು. ಸದಾನಂದ ಸಾಲ್ಯಾನ್ ಸ್ವಾಗತಿಸಿದರು. ಆಕಾಶ್ ಗೇರುಗಟ್ಟೆ ಕಾರ್ಯಕ್ರಮ ನಿರೂಪಿಸಿದರು. ಶಾಂಭವಿ ಪಿ ಬಂಗೇರ ಧನ್ಯವಾದವಿತ್ತರು. ಆಟಿಯ ತಿಂಡಿ ತಿನಿಸುಗಳ ಊಟ ಸವಿಯಲಾಯಿತು.

Related posts

ಬೆಳ್ತಂಗಡಿ ತಾಲೂಕು 18ನೇಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

Suddi Udaya

ಸುರತ್ಕಲ್ ಮುಕ್ಕದಲ್ಲಿ ಕಾರು ಡಿಕ್ಕಿ: ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿ ಜೀವನ್ ಕುಮಾರ್ ಸಾವು

Suddi Udaya

ಪಂಚಾಯತ್ ಕಾಮಗಾರಿಗಳನ್ನು ನಡೆಸಲು ಇಂಜಿನಿಯರ್ ಗಳ ಕೊರತೆ: ಕೂಡಲೇ ಸರಕಾರ ಕ್ರಮ ಜರುಗಿಸುವಂತೆ ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಗೌಡ ಒತ್ತಾಯ

Suddi Udaya

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

Suddi Udaya

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಜಿನ ಮoದಿರಕ್ಕೆ ಲಾವಣ್ಯ ಬಲ್ಲಾಳ್ ಭೇಟಿ

Suddi Udaya
error: Content is protected !!