32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆ. 5: ಉಜಿರೆ ಎಸ್‌.ಡಿ.ಎಂ ಸ್ವಾಯತ್ತ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕಾ ಸಂಘಗಳ ಉದ್ಘಾಟನಾ ಸಮಾರಂಭ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ಟೂಡೆಂಟ್ಸ್ ಕೌನ್ಸಿಲ್ ವತಿಯಿಂದ 2026 -27 ನೇ ಸಾಲಿನ ಶೈಕ್ಷಣಿಕ ವರ್ಷದ ‘ಸ್ಟೂಡೆಂಟ್ ಆಕ್ಟಿವಿಟೀ ಫೋರ’ ಶೈಕ್ಷಣಿಕ ಚಟುವಟಿಕೆಗಳ 12 ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಆ. 05 ರಂದು ಬೆಳಿಗ್ಗೆ 10: 30 ಕ್ಕೆ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಜಪಾನ್ ದೇಶದ ಕ್ಯೋಟೋ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫೋರ್ಮೆಟಿಕ್ಸ್ ಪ್ರೋಗ್ರಾಮ್ ಸ್ಪೆಸಿಫಿಕ್ ರಿಸರ್ಚ್ರ್ ಡಾ. ಶಶಾಂಕ ಕುಲಮರ್ವ ( Dr. Shashanka Kulamarva, Program – Specific Researcher School of Informatics Kyoto University Japan ) ವಿದ್ಯಾರ್ಥಿ ಸಂಘ ಹಾಗು ಕಾಲೇಜಿನ ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೋ. ವಿಶ್ವನಾಥ್ ಪಿ ವಹಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಯೋಜಕರುಗಳಾದ ವಿಜ್ಞಾನ ಅಸೋಸಿಯೇಷನ್ ವಿಭಾಗದ ಅಧ್ಯಕ್ಷರಾಗಿ ರಂಜನ್, ಆರ್ಟ್ಸ್ ಅಸೋಸಿಯೇಷನ್ ವಿಭಾಗದ ಅಧ್ಯಕ್ಷರಾಗಿ ನೆವಿಲ್ ನವೀನ್ ಮೋರಸ್, ಕಾಮರ್ಸ್ ಅಸೋಸಿಯೇಷನ್ ವಿಭಾಗದ ಅಧ್ಯಕ್ಷರಾಗಿ ಭವಿಷಿತ್ ಹಾಗು ಸ್ನಾತಕೋತ್ತರ ಪದವಿ ವಿಭಾಗದ ಅಧ್ಯಕ್ಷರಾಗಿ ಪವನ್ ಕುಮಾರ್ ಅತಿಥಿಗಳ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ. ಸ್ಟೂಡೆಂಟ್ ಫೋರಗಳ ಸ್ಟಾಫ್ ಸಂಯೋಜಕರಾಗಿ ಉಪನ್ಯಾಸಕ ಶ್ರೇಯಸ್ ಬಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

12 ವಿವಿಧ ವಿದ್ಯಾರ್ಥಿ ಸಂಘಗಳಿಗೆ ಚಾಲನೆ :

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಕ್ರಾಫ್ಟ್ ಫೋರಮ್, ಕ್ವಿಜ್ ಫೋರಮ್ , ಫೋಟೋಗ್ರಫಿ ಮತ್ತು ಮೀಡಿಯಾ ಫೋರಮ್ , ಕಮ್ಯುನಿಕೇಟಿವ್ ಇಂಗ್ಲೀಷ್ ಫೋರಮ್, ಲೀಗಲ್ ಮತ್ತು ಸಿವಿಲ್ ಜಾಗೃತಿ ಫೋರಮ್, ಡಿಬೆಟ್ ಫೋರಮ್, ಟ್ರೂ ಎಜುಕೇಷನ್ ಫೋರಮ್, ಇವೆಂಟ್ ಮ್ಯಾನೇಜ್ಮೆಂಟ್ ಫೋರಮ್, ರೀಡರ್ಸ್ ಫೋರಮ್ , ರೈಟರ್ಸ್ ಫೋರಮ್, ಕಾರ್ಟೂನ್ ಡ್ರಾಯಿಂಗ್ ಮತ್ತು ಪೈಂಟಿಂಗ್ ಫೋರಮ್ ,ಡ್ರಾಮಾ , ಯಕ್ಷಗಾನ ಮತ್ತು ನೃತ್ಯಗಳ ಕಲ್ಚರಲ್ ಫೋರಮ್ ಸೇರಿದಂತೆ ಒಟ್ಟು 12 ವಿವಿಧ ವಿದ್ಯಾರ್ಥಿ ಸಂಘಗಳಿಗ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ.

ಈ ಎಲ್ಲಾ ಮಾಹಿತಿಯನ್ನು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ವಿಶ್ವನಾಥ್ ಪಿ ಹಾಗು ಕಾಲೇಜಿನ ವಿದ್ಯಾರ್ಥಿ ಕ್ಷೇಮಾ ಪಾಲನಾ ಸಮಿತಿ ಸಂಯೋಜಕ ಶ್ರೇಯಸ್ ಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅರಸಿನಮಕ್ಕಿ: ನೆಕ್ಕರಡ್ಕ ಶ್ರೀ ವಿಠೋಬಾ ರಕುಮಾಯಿ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜರಿಂದ 5 ಲಕ್ಷ ರೂ. ಮಂಜೂರು

Suddi Udaya

ಚಾರ್ಮಾಡಿ: ಅನ್ನಾರು ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾಡಾನೆ ಸಾವು

Suddi Udaya

ಧರ್ಮಸ್ಥಳ‌ ಭಜನಾ ಕಮ್ಮಟದ‌ ತರಬೇತುದಾರರಿಂದ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಶ್ರೀ ಬೈಲಾಂಜನೇಯ ಕುಣಿತ‌ ಭಜನಾ ಮಂಡಳಿ ಉದ್ಘಾಟನೆ

Suddi Udaya

ಜಿಲ್ಲಾಧಿಕಾರಿ ಸಭೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮಲೆಕುಡಿಯ ಸಮುದಾಯದ ಮುಖಂಡರ ಒತ್ತಾಯ

Suddi Udaya

ಬೆಳ್ತಂಗಡಿ ತಾಲೂಕು ಕುಣಿತ ಭಜನಾ ತರಬೇತಿಗಾರರ ಸಂಘದ ಅಧ್ಯಕ್ಷರಾಗಿ ಸಂದೇಶ್, ಕಾರ್ಯದರ್ಶಿಯಾಗಿ ವಿ ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಆಯ್ಕೆ

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ಹಿರಿಯ ನ್ಯಾಯಾಧೀಶ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!