32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ಅವರ ಅಧ್ಯಕ್ಷತೆಯಲ್ಲಿ ಸೆ.19ರಂದು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾಭವನದಲ್ಲಿ ಜರುಗಿತು.

ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಭಾಗವಹಿಸಿ ಮಾತನಾಡಿ, ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ಹಾಗೂ ಆಡಳಿತ ಮಂಡಳಿಯವರ ಸಹಕಾರದಲ್ಲಿ ಸಂಘ ಉತ್ತಮ ಸಾಧನೆ ಮಾಡುತ್ತಿದ್ದು, ಸಂಘ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ಅವರು ಮಾತನಾಡಿ, ಸಂಘದಲ್ಲಿ ಒಟ್ಟು 12,628 ಸದಸ್ಯ ಸದಸ್ಯತ್ವವಿದ್ದು, ಇದರಲ್ಲಿ ವರದಿ ಸಾಲಿನಲ್ಲಿ 104 ಎ ತರಗತಿ, 191ಸಿ ತರಗತಿ ಮತ್ತು 3 ಡಿ ತರಗತಿಯ ಸದಸ್ಯತ್ವಕ್ಕೆ ಹೊಸ ಸದಸ್ಯರು ಸೇಪ೯ಡೆಯಾಗಿದ್ದು, ವಷಾ೯ಂತ್ಯಕ್ಕೆ ಒಟ್ಟು 137 ಸದಸ್ಯರ ಸದಸ್ಯತನ ರದ್ದಾಗಿದೆ. ವರದಿ ವರ್ಷದಲ್ಲಿ ರೂ. 28,85,296 ಪಾಲು ಬಂಡವಾಳ ಸಂಗ್ರಹವಾಗಿದ್ದು, ವರ್ಷಾಂತ್ಯಕ್ಕೆ 2,93,00,731 ಆಗಿದೆ. ವರದಿ ಸಾಲಿನಲ್ಲಿ ಠೇವಣಿ ಸಂಗ್ರಹದಲ್ಲಿ ಶೇ 6.81 ಪ್ರಗತಿಯನ್ನು ಸಾಧಿಸಲಾಗಿದೆ. ವರದಿ ವರ್ಷದಲ್ಲಿ ಶೇ 8.94 ಸಾಲ ವಿತರಣೆಯಲ್ಲಿ ಏರಿಕೆಯಾಗಿದ್ದು, ಶೇ 99.67 ಸಾಲ ವಸೂಲಾತಿಯಾಗಿದೆ. ವರದಿ ಸಾಲಿನಲ್ಲಿ ರೂ. 83,43,252 ಲಾಭ ಬಂದಿದೆ ಎಂದು ಹೇಳಿ ಶೇ 13 ಡಿವಿಡೆಂಟ್ ಘೋಷಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸಾದ್ ಎಸ್. ಅವರು ವರದಿ ವಾಚಿಸಿ, ಸಂಘದಲ್ಲಿ ವರ್ಷಾಂತ್ಯಕ್ಕೆ 2687 ಎ ತರಗತಿಯ ಸದಸ್ಯರು, 9880 ಸಿ ತರಗತಿಯ ಹಾಗೂ 61 ಡಿ ತರಗತಿಯ ನಾಮ ಮಾತ್ರ ಸದಸ್ಯರನ್ನು ಹೊಂದಿದೆ. ಸಂಘವು ವರದಿ ಸಾಲಿನಲ್ಲಿ ರೂ. 2,02,38,000 ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಬೆಳೆ ಸಾಲ ಪಡೆದುಕೊಂಡಿದ್ದು, ಯಾವುದೇ ಸುಸ್ತಿರ ಸಾಲವಿಲ್ಲ. ಸದಸ್ಯರ ಸಾಲದ ಬೇಡಿಕೆಗಳನ್ನು ಪೂರೈಸುವಲ್ಲಿ ಸಂಘವು ಗರಿಷ್ಠ ಪ್ರಮಾಣದ ಸೇವೆಯನ್ನು ನೀಡುತ್ತಿದೆ. ಬೆಳೆಸಾಲ ಪಡೆದ ಎಲ್ಲಾ ಅರ್ಹ ಸಾಲಗಾರ ಸದಸ್ಯರುಗಲನ್ನು ಅವರು ಹೊಂದಿರುವ ಸಾಲ ಮಿತಿಯಂತೆ ವೈಯಕ್ತಿಕ ಅಪಘಾತ ವಿಮಾ ಯೋಜನೆಗೆ ಸೇರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ ಪವರ್ ಮ್ಯಾನ್ ಗಳನ್ನು ಗೌರವಿಸಲಾಯಿತು. ಸಂಘದ ಹಿರಿಯ ಸದಸ್ಯರನ್ನು ಅಭಿನಂದಿಸಲಾಯಿತು. 10ನೇ ತರಗತಿಯಲ್ಲಿ ಶೇ 85 ಕ್ಕಿಂತ ಅಧಿಕ ಮತ್ತು ಪಿಯುಸಿಯಲ್ಲಿ ಶೇ 85 ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಸಂಘದ ವತಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಗಣೇಶ್ ಭಂಡಾರಿ, ನಿರ್ದೇಶಕರುಗಳಾದ ಬಿ.ಮುನಿರಾಜ ಅಜ್ರಿ, ಪುರಂದರ, ಶ್ರೀಮತಿ ರಾಧಾ, ನಾರಾಯಣ ಆಚಾರ್ಯ, ಅಶೋಕ್ ರೈ, ಶ್ರೀನಾಥ್ ಕೆ.ಎಂ, ತಿಮ್ಮಯ್ಯ ನಾಯ್ಕ, ರಮೇಶ್ ನಲ್ಕೆ, ಹರಿಯಪ್ಪ ನಾಯ್ಕ್, ಶ್ರೀಮತಿ ಪ್ರೇಮ ಎಂ., ಸುದರ್ಶನ್ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಶ್ರೀನಾಥ್ ಕೆ.ಎಂ ಸ್ವಾಗತಿಸಿದರು. ಸಿಬ್ಬಂದಿ ವಿನೋದ್ ಕುಮಾರ್ ತಿಳುವಳಿಕೆ ಪತ್ರ ಹಾಗೂ ಹರಿಣಿ ಹಿಂದಿನ ಸಭೆಯ ಅಜೆಂಡಾ ವಾಚಿಸಿದರು. ಸಂಘದ ನಿರ್ದೇಶಕ ಪುರಂದರ್ ಧನ್ಯವಾದವಿತ್ತರು.

Related posts

ತೋಟತ್ತಾಡಿ ಪರಿಸರದಲ್ಲಿ ಚಿರತೆ ಓಡಾಟ, ಭಯಭೀತರಾದ ಗ್ರಾಮಸ್ಥರು: ಚಿರತೆ ಸೆರೆಹಿಡಿಯಲು ಸ್ಥಳೀಯರ ಸಹಕಾರದಲ್ಲಿ ಇಲಾಖೆ ವತಿಯಿಂದ ಬೋನು ಅಳವಡಿಕೆ

Suddi Udaya

ಅಥ್ಲೆಟಿಕ್ಸ್ ಕ್ರೀಡಾಕೂಟ: ಮೂಡಬಿದಿರೆ ದಿಗಂಬರ ಜೈನ ಆಂ.ಮಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋಹನ ಪೂಜಾರಿ ಮರೋಡಿ ರವರು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳದಲ್ಲಿ ಎರಡು ಆಟೋ ಹಾಗೂ ಮೂರು ಕಾರುಗಳ ನಡುವೆ ಸರಣಿ ಅಪಘಾತ

Suddi Udaya

ವೇಣೂರು ಪಿಎಸ್ಐ ಅಕ್ಷಯ್ ಡಿ ಅವರಿಗೆ ವೇಣೂರು ಸೊಸೈಟಿಯಿಂದ ಗೌರವ

Suddi Udaya

ಮಚ್ಚಿನ: ಚರಂಡಿಗಳ ಹೂಳೆತ್ತದೆ ರಸ್ತೆಯಲ್ಲೆ ಹರಿಯುತ್ತಿರುವ ಮಳೆ ನೀರು: ಹೂಳು ತೆರವುಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಸುಲ್ಕೇರಿಗೆ ಭೇಟಿ

Suddi Udaya
error: Content is protected !!