30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಮಸ್ತ ಬೆಳ್ತಂಗಡಿ ಸಂಯುಕ್ತ ಜಮಾಅತ್ ಖಾಝಿಯಾಗಿ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್: ಕನ್ನಡಿಕಟ್ಟೆ ಮಸ್ಜಿದ್ ನಲ್ಲಿ ಕಾರ್ಯಕ್ರಮ ಸಂಪನ್ನ

ಬೆಳ್ತಂಗಡಿ : ಸಮಸ್ತ ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಅಧೀನದಲ್ಲಿ ಬೆಳ್ತಂಗಡಿ ತಾಲೂಕಿನ ಹಲವು ಮಹಲ್ಲಿನ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತುಲ್‌ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳನ್ನು ಖಾಝಿಯಾಗಿ ಸ್ವೀಕರಿಸಲಾಯಿತು.

ಕನ್ನಡಿಕಟ್ಟೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.

ಸಯ್ಯಿದ್ ಪೂಕುಂಞಿ ತಂಙಳ್ ಮುಂಡೂರು ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅರ್ಶದ್ ಫೈಝಿ ಕನ್ನಡಿಕಟ್ಟೆ ಕಿರಾಅತ್ ಪಠಿಸಿದರು. ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಇದರ ಸದಸ್ಯ ಶೈಖುನಾ ಎಂ.ಟಿ ಉಸ್ತಾದ್ ಉದ್ಘಾಟಿಸಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯರುಗಳಾದ ಶೈಖುನಾ ಬಂಬ್ರಾಣ ಉಸ್ತಾದ್, ಶೈಖುನಾ ಅಬ್ದುಲ್ಲಾ ಫೈಝಿ ಕೊಡಗು, ಶೈಖುನಾ ಆಲಂಪಾಡಿ ಉಸ್ತಾದ್, ಶೈಖುನಾ ತೋಡಾರ್ ಉಸ್ತಾದ್ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಕಕ್ಕಿಂಜೆ, ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತ್ತಡ್ಕ, ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಕನ್ನಡಿಕಟ್ಟೆ, ಬದ್ರಿಯಾ ಜುಮ್ಮಾ ಮಸ್ಜಿದ್ ಬಂಗೇರಕಟ್ಟೆ, ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಪಣಕಜೆ, ಅಜ್ಮೀರ್ ಖ್ವಾಜಾ ಜುಮ್ಮಾ ಮಸ್ಜಿದ್ ಪೆರ್ದಾಡಿ, ಬದ್ರಿಯಾ ಜುಮ್ಮಾ ಮಸ್ಜಿದ್ ಮುಂಡೂರು, ಅಲ್ ಅಮೀನ್ ಜುಮ್ಮಾ ಮಸ್ಜಿದ್ ಕುದ್ರಡ್ಕ ಮೊದಲಾದ ಮಹಲ್ಲುಗಳು ಸಯ್ಯಿದುಲ್‌ ಉಲಮಾ ಜಿಫ್ರಿ ತಂಙಳರನ್ನು ಖಾಝಿಯಾಗಿ ಬೈಅತ್ ಮಾಡಿದರು.

ಈ‌ ಸಂದರ್ಭದಲ್ಲಿ ಸಯ್ಯಿದ್ ಜಿಫ್ರಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ, ಅಬೂಬಕ್ಕರ್ ಸಿದ್ದೀಕ್ ಜಲಾಲಿ‌ ಕಕ್ಕಿಂಜೆ ಮತ್ತು ವಿವಿಧ ಜಮಾಅತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಡಿ.ಡಿ ಅಬ್ದುಲ್ ರಝಾಕ್ ಹಾಜಿ ವಹಿಸಿದ್ದರು. ಉಸ್ತಾದ್ ಮೂಸಾ ದಾರಿಮಿ ಕಕ್ಕಿಂಜೆ ಸ್ವಾಗತಿಸಿ, ಇಬ್ರಾಹಿಂ ಚಿಬಿದ್ರೆ ಧನ್ಯವಾದ ಸಲ್ಲಿಸಿದರು. ನಿಝಾಮ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳಿಂದ ತಪ್ತಮುದ್ರಾಧಾರಣೆ

Suddi Udaya

ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ: ಶಿಬಾಜೆಯ ಸಂಪ್ರೀತಾ ಎಸ್. ಶೆಟ್ಟಿಗಾರ್‌ ರವರ “ಅಂತರಾಳದ ಧ್ವನಿ” ಕವನ ಸಂಕಲನ ಬಿಡುಗಡೆ

Suddi Udaya

ಶಿಶಿಲ ಸ.ಉ.ಹಿ.ಪ್ರಾ.ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ ಡೆಲ್ಲಿ ಯಲ್ಲಿ ಮಾಸ್ಟರ್ ಆಫ್ ಡಿಸೈನ್ ಪದವಿ ಪಡೆದ ತೆಂಕಕಾರಂದೂರುವಿನ ಅಜಿತ್ ಕುಮಾರ್

Suddi Udaya

ಬಲಿಪ ಪ್ರಸಾದ ಸಂಸ್ಮರಣೆ ಸರಣಿ ಕಾರ್ಯಕ್ರಮ : ಕಾನರ್ಪ ಉಮೇಶ ಆಚಾರ್ಯರಿಗೆ ಸನ್ಮಾನ

Suddi Udaya

ಸಾಮಾಜಿಕ ಕ್ಷೇತ್ರದ ಧುರೀಣ ಈಶ್ವರ ಭಟ್ ಕಾಂತಾಜೆ ನಿಧನ

Suddi Udaya
error: Content is protected !!