29.4 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ವಾರ್ಷಿಕ ಮಹಾಸಭೆ : ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರ ಆಯ್ಕೆ

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.20ರಂದು ಗುರುವಾಯನಕೆರೆ ಕುಲಾಲ ಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಯಾದವ ಮೂಲ್ಯ ಮುಂಡೂರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ನಂತರ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಕುಲಾಲ ಸಮಾಜವನ್ನು ಸಂಘಟಿಸಬೇಕಾದ ಅಗತ್ಯವಿದೆ. ನಾವು ಒಗ್ಗಟ್ಟಾಗಬೇಕು. ಸಂಘಟನೆಯಿಂದ ಮಾತ್ರ ಸಮಾಜಕ್ಕೆ ಶಕ್ತಿ ದೊರೆಯಲಿದೆ. ನಮ್ಮ ಸಂಘ ಎಂಬ ಅಭಿಯಾನದಿಂದ ಎಲ್ಲರೂ ಸಂಘದ ಶ್ರೇಯಸ್ಸಿಗೆ ಶ್ರಮಿಸಬೇಕು. ಜೊತೆಗೆ ನೂತನ ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರ ಪರಿಪೂರ್ಣ ಸಹಕಾರ ಬೇಕು ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಸುಧೀರ್ ಕೆ.ಎನ್ 2025-26ನೇ ಸಾಲಿನ ವಾರ್ಷಿಕ ವರದಿ ವಾಚಿಸಿ, ತನಗೆ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಕೋಶಾಧಿಕಾರಿ ದಿನೇಶ್ ಮಾಲಾಡಿ ಲೆಕ್ಕಪತ್ರ ಮಂಡಿಸಿದರು. ಇದನ್ನು ಸರ್ವಾನುತದಿಂದ ಅನುಮೋದಿಸಲಾಯಿತು. ಸಭೆಯಲ್ಲಿ ಸಂಘದ ಜಾಗ ಖರೀದಿಯ ಸಾಲ ರೂ. 44 ಲಕ್ಷವನ್ನು ಮರುಪಾವತಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಾಗೂ ನೂತನ ಸಮುದಾಯ ಭವನ ನಿರ್ಮಾಣದ ಬಗ್ಗೆ ಚರ್ಚೆ ಸದಸ್ಯರು ಸಲಹೆ-ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರಾಗಿ ಸುಜಾತ ಮಚ್ಚಿನ, ವಿಶ್ವನಾಥ ನಡುಬೊಟ್ಟು, ಶಶಿಧರ ಮಡಂತ್ಯಾರು, ಹೊನ್ನಯ್ಯ ಮೂಲ್ಯ ಕುತ್ತಿನ, ದಿನೇಶ್ ಮೂಲ್ಯ ನಡುಬೊಟ್ಟು, ಉದಯ ಬಿ.ಕೆ ಬಂದಾರು, ನಾರಾಯಣ ಮೂಲ್ಯ ಇಡ್ಯ, ಹಿಮಪ್ರಭಾ ಜಿ.ಕೆರೆ, ಲಲಿತಾ, ವಿಶ್ವಾನಾಥ ಬರಾಯ, ಜಯಂತಿ ಮಚ್ಚಿನ ಇವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಹಿರಿಯರಾದ ವಿಶ್ವನಾಥ ಮೂಲ್ಯ ವರಕಬೆ, ಸಂಘದ ಗೌರವಾಧ್ಯಕ್ಷ ಹರೀಶ್ ಕಾರಿಂಜ, ಉಪಾಧ್ಯಕ್ಷ ಲೋಕೇಶ್ ಕುಲಾಲ್, ಯುವ ವೇದಿಕೆ ಅಧ್ಯಕ್ಷ ಅನಿನಾಶ್ ಕುಲಾಲ್ ಮಾಣೂರು, ಮಹಿಳಾ ವೇದಿಕೆ ಅಧ್ಯಕ್ಷೆ ಸುಮಲತಾ, ಸದಸ್ಯರಾದ ಯತೀಶ್ ಸಿರಿಮಜಲು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್‌ಕೆ.ಎನ್ ಅತಿಥಿ-ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಬ್ರಹ್ಮಿ ಎಂ.ಜಿ ಇವರ ಪ್ರಾರ್ಥನೆ ಬಳಿಕ ಸಂಘದ ಗೌರವಾಧ್ಯಕ್ಷ ಹರೀಶ್ ಕಾರಿಂಜ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸಂದೇಶ್ ಕುಮಾರ್ ಧನ್ಯವಾದವಿತ್ತರು.

Related posts

ಗುರುವಾಯನಕೆರೆ: ಶಕ್ತಿನಗರದಲ್ಲಿ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಎರಡು ಕಾರುಗಳ ನಡುವೆ ಅಪಘಾತ

Suddi Udaya

ವೇಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ

Suddi Udaya

ನಿಡ್ಲೆ ಗ್ರಾ.ಪಂ ನ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya

ನ್ಯಾಯಾಲಯದ ಆದೇಶ ಉಲ್ಲಂಘನೆ ; ಯೂಟ್ಯೂಬರ್ ಸಮೀರ್ ಎಂ.ಡಿ. ಗೆ ಬಿಗ್ ಶಾಕ್..!! ಹಾಜರಾತಿಗೆ ನೋಟೀಸ್ ಜಾರಿ, ತಕ್ಷಣ ವಿಡಿಯೋ ಡಿಲೀಟ್ ಮಾಡಲು ಆದೇಶ; ಹತ್ತು ಕೋಟಿ ಮಾನನಷ್ಟ ಮೊಕದ್ದಮೆ ದಾಖಲು

Suddi Udaya

‘ದಸ್ಕತ್’ ತುಳು ಸಿನೆಮಾದ ಮೋಷನ್ ಪೋಸ್ಟರ್ ಗೆ ಫಿದಾ ಆದ ತುಳುನಾಡಿನ ದಿಗ್ಗಜರು

Suddi Udaya

ಜಿಪ್ಸಿ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಬಳಂಜ ಶಾಲಾ ಮುಖ್ಯೋಪಾಧ್ಯಾಯರಿಗೆ ಗಂಭೀರ ಗಾಯ

Suddi Udaya
error: Content is protected !!