26.9 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪರಿಸರ ಸೂಕ್ಷ್ಮ ಪ್ರದೇಶವನ್ನು ನಿಗದಿಪಡಿಸಿ ಕರಡು ಅಧಿಸೂಚನೆ : ರಾಜ್ಯ ಸರ್ಕಾರವು ಭೌತಿಕ ಸಮೀಕ್ಷೆ ನಡೆಸಿ ಜನವಸತಿ ಪ್ರದೇಶ ವಿರಹಿತಗೊಳಿಸಿ ಜನರ ಆತಂಕವನ್ನು ನಿವಾರಿಸಬೇಕು : ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಆಗ್ರಹ

ಬೆಳ್ತಂಗಡಿ: ಕೇಂದ್ರ ಸರ್ಕಾರವು ಪರಿಸರ ಸೂಕ್ಷ್ಮ ವಲಯವನ್ನು ನಿಗದಿಪಡಿಸಿ ಏಳನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸಿದ್ದು ಪಶ್ಚಿಮಘಟ್ಟದ ಗ್ರಾಮಗಳ ರೈತರು, ಬುಡಕಟ್ಟು ಜನಾಂಗಗಳು, ಸಾರ್ವಜನಿಕರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣ ಆಗಿದೆ.

ಈ ಹಿಂದೆ 2024ರಲ್ಲಿ ಪ್ರಕಟ ಆಗಿದ್ದ ಕರಡು ಅಧಿಸೂಚನೆಯಲ್ಲಿ ಬಹುತೇಕ ಅಂಶಗಳೇ ಈ ಬಾರಿಯ ಕರಡಿನಲ್ಲೂ ಇವೆ. ಆದುದರಿಂದ ರಾಜ್ಯ ಸರ್ಕಾರವು ಜನರ ಆತಂಕ ನಿವಾರಿಸುವ ಉದ್ದೇಶದಿಂದ ಭೌತಿಕ ಸರ್ವೇಯನ್ನು ನಡೆಸಿ ಜನವಸತಿ ಪ್ರದೇಶಗಳನ್ನು ವಿರಹಿತಗೊಳಿಸಿ ಕೃಷಿ, ತೋಟಗಾರಿಕೆ ಚಟುವಟಿಕೆಗಳು, ಜೀವನೋಪಾಯ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಬೇಕು.

ಕರಡು ಅಧಿಸೂಚನೆ ನಿಗದಿಪಡಿಸಿದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಕೂಡಲೇ ಆಕ್ಷೇಪಣೆ ಸಲ್ಲಿಸಲು ಗ್ರಾಮಸ್ಥರಿಗೆ ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಒತ್ತಾಯಿಸಿದ್ದಾರೆ.

Related posts

ಇಂದಬೆಟ್ಟು ಗ್ರಾ.ಪಂ. ಸಿಬ್ಬಂದಿ ಗೋಪಾಲ. ಕೆ ನಿಧನ

Suddi Udaya

ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್ : ಇತಿಹಾಸ ಸೃಷ್ಟಿಸಿದ ಭಾರತ

Suddi Udaya

ನಡ ಸರಕಾರಿ ಪ್ರೌಢಶಾಲೆ ಶಾಲಾ ಪ್ರಾರಂಭೋತ್ಸವ

Suddi Udaya

ಭಾರತ್ ಸ್ಕೌಟ್ ಗೈಡ್ ರಾಜ್ಯ ಸಂಸ್ಥೆಯಿಂದ ಸನ್ಮಾನಿತಗೊಂಡ ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಪಡ್ಪು ಶಾಖಾ ಕಟ್ಟಡ ಶುಭಾರಂಭ

Suddi Udaya

ಉಜಿರೆ: ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯ ಆಚರಣೆ

Suddi Udaya
error: Content is protected !!