26.9 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ‘ಹೊಸಬೆಳಕು’ ಒಕ್ಕೂಟದ ಉದ್ಘಾಟನೆ

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್‌ನ ವಾರ್ಷಿಕ ಹಬ್ಬದ ಅಂಗವಾಗಿ “ಹೊಸಬೆಳಕು ಒಕ್ಕೂಟ”ದ ಉದ್ಘಾಟನಾ ಸಮಾರಂಭವು ಆ.6ರಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ನೆರವೇರಿತು.

ಪವಿತ್ರ ಬಲಿಪೂಜೆಯ ಬಳಿಕ ಧರ್ಮಗುರುಗಳಾದ ವಂದನೀಯ ಫಾ. ವಾಲ್ಟರ್ ಡಿಮೆಲ್ಲೊ ಅವರ ಅಧ್ಯಕ್ಷತೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಒಕ್ಕೂಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಫಾ. ವಾಲ್ಟರ್ ಡಿಮೆಲ್ಲೊ ಅವರು, “ಹೊಸಬೆಳಕು ಒಕ್ಕೂಟವು ಕ್ರೈಸ್ತ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಮಾಜಸೇವೆ, ಕುಟುಂಬಗಳ ಸಬಲೀಕರಣ, ಯುವಜನರ ನಾಯಕತ್ವ ವಿಕಾಸ ಹಾಗೂ ಪರಸ್ಪರ ಸಹಕಾರದ ಮನೋಭಾವವನ್ನು ಬೆಳೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಲಿ” ಎಂದು ಶುಭ ಹಾರೈಸಿದರು.

ಆಗಸ್ಟ್ 6ರಂದು ಹೋಲಿ ರಿಡೀಮರ್ ಚರ್ಚ್‌ನ ವಾರ್ಷಿಕ ಹಬ್ಬದ ದಿನದಂದು ಉದ್ಘಾಟನೆಗೊಂಡ ಈ ಒಕ್ಕೂಟವು ಚರ್ಚ್ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾದ ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ.


ಈ ಸಂದರ್ಭದಲ್ಲಿ ಹೊಸಬೆಳಕು ಒಕ್ಕೂಟದ ಗೌರವಾಧ್ಯಕ್ಷರಾಗಿ ವಂದನೀಯ ಫಾ. ವಾಲ್ಟರ್ ಡಿಮೆಲ್ಲೊ, ಅಧ್ಯಕ್ಷರಾಗಿ ವಿನ್ಸೆಂಟ್ ಲೋಬೊ, ಉಪಾಧ್ಯಕ್ಷರಾಗಿ ರೊನಾಲ್ಡ್ ಡಿಸೋಜ, ಕಾರ್ಯದರ್ಶಿಯಾಗಿ ಪೌಲಿನ್ ರೇಗೊ, ಉಪಕಾರ್ಯದರ್ಶಿಯಾಗಿ ಫ್ಲೇವಿ ಪಾವ್ಲ್, ಕೋಶಾಧಿಕಾರಿಯಾಗಿ ರೊನಾಲ್ಡ್ ಲೋಬೊ, ಉಪಕೋಶಾಧಿಕಾರಿಯಾಗಿ ಗ್ರೇಸ್ ಲೋಬೊ ಆಯ್ಕೆಯಾದರು.

Related posts

17 ವರ್ಷಗಳಿಂದ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ಸಂತೆಕಟ್ಟೆ ಬಳಿ ಬಂಧನ

Suddi Udaya

ಡಿ.17: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಕೋರಿ ಜಾತ್ರೆ’

Suddi Udaya

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

Suddi Udaya

ನೆಲ್ಯಾಡಿ ಅಮ್ಮ ಕ್ಯಾಂಟೀನ್ ಮಾಲಕ ಮಡಂತ್ಯಾರು ನಿವಾಸಿ ಗಿರೀಶ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಜನಸ್ನೇಹಿ ಅಧಿಕಾರಿ ಜುಬಿನ್ ಮೊಹಾಪಾತ್ರ ದಿಢೀರ್ ವಗಾವಣೆ

Suddi Udaya

ಬಳಂಜ, ನಿಟ್ಟಡ್ಕ ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya
error: Content is protected !!