27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹೆಚ್‌ಡಿಎಫ್‌ಸಿ ಬ್ಯಾಂಕ್ ಬೆಳ್ತಂಗಡಿ ಶಾಖೆಯಲ್ಲಿ ಸಿಡಿಎಂ ಸೌಲಭ್ಯ ಆರಂಭ

ಬೆಳ್ತಂಗಡಿ: ಗ್ರಾಹಕರ ಬೇಡಿಕೆಯ ಮೇರೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಬೆಳ್ತಂಗಡಿ ಶಾಖೆಯಲ್ಲಿ CDM – Cash Deposit Machine ಸೌಲಭ್ಯವನ್ನು ಆರಂಭಿಸಲಾಗಿದೆ.

ಇನ್ನು ಮುಂದೆ ಹೆಚ್‌ಡಿಎಫ್‌ಸಿ ಬ್ಯಾಂಕಿನ ಗ್ರಾಹಕರು ಯಾವುದೇ ಸಮಯದಲ್ಲಿ ನಗದು ಠೇವಣಿ ಮಾಡಿಕೊಳ್ಳಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಈ ಹೊಸ ಸೇವೆಯು ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ನೀಡಲಿದೆ.

ಈ ಚಾಲನೆಯನ್ನು ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲೀಕರಾದ ಪ್ರಮೋದ್ ಆರ್. ನಾಯಕ್ ಹಾಗೂ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕರಾದ ಸಂತೋಷ್ ಮೂಲ್ಯ ಅವರು ಜಂಟಿಯಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಖೆಯ ಸಿಬ್ಬಂದಿಗಳಾದ ವಿನಾಯಕ್ ಎನ್.ಜೆ, ಪ್ರದೀಪ್ ಶೆಟ್ಟಿ ಎಸ್, ಅಕ್ಷತಾ ಪಿ ಹಾಗೂ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.

ವ್ಯವಸ್ಥಾಪಕರಾದ ಸಂತೋಷ್ ಮೂಲ್ಯ ಅವರು ಸಿಡಿಎಂನ ಪ್ರಯೋಜನಗಳು ಹಾಗೂ ಅದನ್ನು ಬಳಸುವ ವಿಧಾನದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು.

Related posts

ಕರೆಮಾಡಿದ ತಕ್ಷಣ ರೈತರ ಮನೆಬಾಗಿಲಿಗೆ ಬರಲಿದೆ ಪಶು ಸಂಜೀವಿನಿ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ

Suddi Udaya

ಉಜಿರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya

ಪದ್ಮುಂಜದಲ್ಲಿ ವಿದ್ಯುತ್ ಶಾಕ್‌ಗೆ ಕಾರ್ಮಿಕ ಬಲಿ

Suddi Udaya

ಎ.3ರಿಂದ ಎ.7: ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Suddi Udaya
error: Content is protected !!