September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ ವತಿಯಿಂದ ತಾಳಮದ್ದಳೆ ಮತ್ತು ಕಲಾವಿದರಿಗೆ ನುಡಿ ನಮನ

ಬೆಳ್ತಂಗಡಿ: ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ ಉಪ್ಪಿನಂಗಡಿ ಸುವರ್ಣ ಮಾಹೋತ್ಸವದ ಶ್ರೀ ಮಹಾಭಾರತ ಸರಣಿಯಲ್ಲಿ 111ನೇ ತಾಳಮದ್ದಳೆಯಾಗಿ ಘಟೋತ್ಕಚ ವಿವಾಹ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳಂತಿಲ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ. ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ನೇರೆಂಕಿ( ಮೌರ್ವಿ) ಶ್ರೀಧರ ಎಸ್ ಪಿ ಕೃಷ್ಣಾಪುರ (ಘಟೋತ್ಕಚ),ಶ್ರುತಿ ವಿಸ್ಮಿತ್ (ಸೂರ್ಯವರ್ಚ) ಪ್ರದೀಪ ಹೆಬ್ಬಾರ್ ಚಾರ(ಭಗದತ್ತ ಮತ್ತು ವಿಷ್ಣು) ಕೆ.ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ( ವಸುಂಧರೆ) ದಿವಾಕರ ಆಚಾರ್ಯ ಗೇರುಕಟ್ಟೆ (ಬ್ರಹ್ಮ) ಭಾಗವಹಿಸಿದ್ದರು.

ಕಲಾವಿದರಿಗೆ ನುಡಿ ನಮನ: ಇತ್ತೀಚೆಗೆ ನಿಧನರಾದ ಕಲಾವಿದ ಸೂರಿಕುಮೇರಿ ಡಾ. ಕೆ ಗೋವಿಂದ ಭಟ್ ಮತ್ತು ಸಂಘದ ಹಿರಿಯ ಸದಸ್ಯ ಇಳಂತಿಲ ಗ್ರಾಮದ ಕೆ. ಕುಶಾಲಪ್ಪ ಗೌಡ ಇವರ ಬಗ್ಗೆ ಬಿ .ಸುಬ್ರಹ್ಮಣ್ಯ ರಾವ್ ಬನ್ನೆಂಗಳ ಮತ್ತು, ಪೆರಿಯಡ್ಕ ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕರಾದ ಮಹಾಲಿಂಗೇಶ್ವರ ಭಟ್ ನುಡಿ ನಮನ ಸಲ್ಲಿಸಿದರು.

ಕಾಳಿಕಾಂಬಾ ಯಕ್ಷಗಾನ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸುವರ್ಣ ವರ್ಷದ ಕಾರ್ಯಕ್ರಮಗಳ ಪ್ರಗತಿಯ ಮಾಹಿತಿ ನೀಡಿ ಅಂತಿಮ ಸಮಾರಂಭವನ್ನು ಜುಲೈಯಲ್ಲಿ ನಡೆಸುವುದಾಗಿ ತಿಳಿಸಿದರು.

ಹಿರಿಯ ಸದಸ್ಯ ಗೋಪಾಲ ಶೆಟ್ಟಿ ಕಳೆಂಜ, ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ , ಪ್ರದೀಪ ಚಾರ , ಧಾರ್ಮಿಕ ದತ್ತಿ ಇಲಾಖೆಯ ಶ್ರೀಧರ ಎಸ್. ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಟ್ರಸ್ಟ್ ಖಜಾಂಜಿ ಶೃತಿ ವಿಸ್ಮಿತ್ ಸ್ವಾಗತಿಸಿ ಸಹ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಮಗನಿಂದ ತಂದೆಯ ಕೊಲೆ ಯತ್ನ ಆರೋಪಿ ಮಗನನ್ನು ಬಂಧಿಸಿದ ಪೊಲೀಸರು

Suddi Udaya

ಕೇರಳ ವಿಧಾನಸಭಾ ಚುನಾವಣೆ: ಪೀರಮೇಡು ಬ್ಲಾಕ್‌ ವೀಕ್ಷಕರಾಗಿ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಎಂ,ಹೆಚ್ ಮೊಹಮ್ಮದ್ ಕಲಂದರ್ ಶಾ

Suddi Udaya

ಪ್ರಸಿದ್ಧ ಗುಜರಾತ್ ಉದ್ಯಮಿ ಶಶಿಧ‌ರ್ ಶೆಟ್ಟಿ ನವಶಕ್ತಿ ಯವರಿಗೆ ಮಾತೃ ವಿಯೋಗ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅ.ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ರಾವ್ ರವರಿಗೆ ಬೀಳ್ಕೂಡುಗೆ ಸಮಾರಂಭ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಗುರುರಾಜ್ ಗುರಿಪಳ್ಳ, ಕಾರ್ಯದರ್ಶಿಯಾಗಿ ಮಧುರ ರಾಘವ ಆಯ್ಕೆ

Suddi Udaya

ಪ್ರತಿಭಾ ಕಾರಂಜಿ: ಸ್ಟಾರ್‌ಲೈನ್ ಆಂ.ಮಾ. ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

Suddi Udaya
error: Content is protected !!