ಸಾಂದರ್ಬಿಕ ಚಿತ್ರ
ಬೆಳ್ತಂಗಡಿ: ಬೆಳ್ತಂಗಡಿ ನಗರಕ್ಕೆ ಬೇಕಾದ ನೀರು ಇದೆ. ಸರಬರಾಜಿಗೆ ಎಲ್ಲಾ ವ್ಯವಸ್ಥೆ ಇದೆ. ಆದರೆ ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ಪಟ್ಟಣ ಪಂಚಾಯತು ವ್ಯಾಪ್ತಿಯ ನಾಗರಿಕರು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಪಂಚಾಯತದ ಹೊರಗುತ್ತಿಗೆ ನೌಕರರು ಬೆಂಗಳೂರಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಗಾಗಿ ಪ್ರತಿಭಟನೆ ನಡೆಸುತ್ತಿರುವುದು.
ರಾಜ್ಯದ ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ, ನೇರಪಾವತಿ ಮಾಡಲು ಆಗ್ರಹಿಸಿ ಸೆ.೨೧ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಮುಖ್ಯ ಮಂತ್ರಿಗಳ ಮನೆಯವರೆಗೆ ಬೃಹತ್ ಮಟ್ಟದ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದರಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಹೊರಗುತ್ತಿಗೆ ನೀರು ಸರಬರಾಜು ಸಹಾಯಕರು ಪಾಲ್ಗೊಳ್ಳುಗೊಂಡಿದ್ದಾರೆ.
ಇದರಿಂದಾಗಿ ಬೆಳ್ತಂಗಡಿ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದೆ. ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುವುದು ಸಹಜ. ಆದರೆ ಪಂಚಾಯತು ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳು ಇದಕ್ಕೆ ಬದಲಿ ವ್ಯವಸ್ಥೆ ಮಾಡದೆ ಇರುವುದೇ ಈ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಬೆಳ್ತಂಗಡಿ ನಗರದಲ್ಲಿ ಹಲವು ಮನೆಯವರು ಪಟ್ಟಣ ಪಂಚಾಯತದಿAದ ಪೂರೈಕೆ ಮಾಡುವ ಕುಡಿಯುವ ನೀರನ್ನೇ ಅವಲಂಭಿಸಿದ್ದಾರೆ. ಈಗ ನೀರಿಲ್ಲದೆ ಜನರು ಅಲೆದಾಟ ನಡೆಸುವ ಸ್ಥಿತಿಯಾಗಿದ್ದು, ಸಂಬAಧಟ್ಟ ಅಧಿಕಾರಿಗಳು ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.











