30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ 13: ಮುಳಿಯ ಪ್ರತಿಷ್ಠಾನದಿಂದ ‘ಧನಾತ್ಮಕ ಪೋಷಕತ್ವ’ ಆನ್‌ಲೈನ್ ಕಾರ್ಯಕ್ರಮ

ಬೆಳ್ತಂಗಡಿ: ಮುಳಿಯ ಫೌಂಡೇಶನ್ ಹಾಗೂ ಮುಳಿಯ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಬೆಂಗಳೂರಿನ 81ಕ್ಕೂ ಹೆಚ್ಚು ಶಾಲೆಗಳಲ್ಲಿ ಆಯೋಜಿಸಲಾಗುತ್ತಿರುವ ‘ಧನಾತ್ಮಕ ಪೋಷಕತ್ವ’ ವಿಚಾರ ಸಂಕಿರಣ ಸರಣಿಯ ಉದ್ಘಾಟನಾ ಕಾರ್ಯಕ್ರಮವು ಆನ್‌ಲೈನ್ ಮೂಲಕ ಆ 13ರಂದು ಸಂಜೆ 6.15 7:30 ರವರೆಗೆ ನಡೆಯಲಿದೆ ಎಂದು ಮುಳಿಯ ಸಂಸ್ಥೆಯ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೋಷಕರು ಮತ್ತು ಮಕ್ಕಳನ್ನು ತಲುಪುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ನಟ, ಚಿಂತಕ ಹಾಗೂ ಪ್ರೇರಣಾದಾಯಕ ಮಾತುಗಾರ ರಮೇಶ್ ಅರವಿಂದ್ ಅವರು ಭಾಗವಹಿಸಿ, ಮಕ್ಕಳ ಬೆಳವಣಿಗೆ, ಪೋಷಕರ ಜವಾಬ್ದಾರಿ ಹಾಗೂ ಮಕ್ಕಳೊಂದಿಗೆ ಸಕಾರಾತ್ಮಕ ಸಂಬಂಧ ಬೆಳೆಸುವ ಕುರಿತು ಉಪಯುಕ್ತ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗಾಗಿ ಕೆಳಗಿನ Zoom ಲಿಂಕ್ ಬಳಸಬಹುದು:
https://us06web.zoom.us/meeting/register/9zA1g1FaT2mZ_JB1DzfCgg

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ತಮ್ಮ ಹೆಸರು ಹಾಗೂ ಇತರ ಅಗತ್ಯ ಮಾಹಿತಿಯೊಂದಿಗೆ 8123643916 ಸಂಖ್ಯೆಗೆ WhatsApp ಮೂಲಕ ಕಳುಹಿಸಬಹುದು.

ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಮುಳಿಯ ಜ್ಯುವೆಲ್ಸ್‌ನ ಅಧಿಕೃತ YouTube ಚಾನೆಲ್‌ನಲ್ಲಿಯೂ ಅವಕಾಶ ಕಲ್ಪಿಸಲಾಗಿದೆ: YouTube:
https://www.youtube.com/@muliyajewels/streams

Related posts

ಬಂದಾರು: ಪಾಣೆಕಲ್ಲು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ: ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಭಾಗಿ

Suddi Udaya

ಜೆಸಿಐ ಉಜಿರೆ ಸಿಟಿ ವತಿಯಿಂದ ಪರಿಸರ ದಿನಾಚರಣೆ- ಗೋ ಗ್ರೀನ್ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ

Suddi Udaya

ತಾಲೂಕು ಮಟ್ಟದ ಕಂಠಪಾಠ ಸ್ಪರ್ಧೆ: ಕುಕ್ಕೇಡಿ ಬುಳೆಕ್ಕರ ಶಾಲೆಯ ವಿದ್ಯಾರ್ಥಿ ಪ್ರಥ್ವಿ ವಿ ಎಸ್ ಪ್ರಥಮ ಸ್ಥಾನ

Suddi Udaya

ಪುಂಜಾಲಕಟ್ಟೆ: ಅರಫಾ ಸ್ಟಾರ್ ವತಿಯಿಂದ ಎಮ್.ಪಿ.ಎಲ್ ಲೀಗ್ ಪಂದ್ಯಾಟ

Suddi Udaya

ಧರ್ಮಸ್ಥಳದಲ್ಲಿ ಬಿವೋಕ್‌ ವಿದ್ಯಾರ್ಥಿಗಳಿಗೆ ಸ್ಟಾಪ್‌ ಮೋಶನ್‌ ಅನಿಮೇಶನ್‌ ಕಾರ್ಯಾಗಾರ

Suddi Udaya

ಶಿಬಾಜೆ: ನಾಪತ್ತೆಯಾಗಿದ್ದ ಐಂಗುಡ ನಿವಾಸಿ ವಾಸು ರಾಣ್ಯ ಪತ್ತೆ

Suddi Udaya
error: Content is protected !!