27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ: ಶಾಲಾ ಮಟ್ಟದ ‘ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ’ ಸಂಪನ್ನ

ಬಳಂಜ: ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹುಟ್ಟುಹಾಕಿ, ಅವರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಮತ್ತು ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಸಹಯೋಗದಲ್ಲಿ ಆಯೋಜಿಸಲಾದ ‘ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ’ದ ಶಾಲಾ ಮಟ್ಟದ ಸ್ಪರ್ಧೆಯು ಆ. 11 ರಂದು ಬಳಂಜದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

ಈ ಮೇಳದಲ್ಲಿ ಹಿರಿಯ ಪ್ರಾಥಮಿಕ ವಿಭಾಗದಿಂದ 15 ವಿಜ್ಞಾನ ಮಾದರಿಗಳೊಂದಿಗೆ ಸುಮಾರು 31 ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿಭಾಗದಿಂದ 16 ಮಾದರಿಗಳೊಂದಿಗೆ 45 ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತೀರ್ಪುಗಾರರಾಗಿ ಶ್ರೀವತ್ಸ, ಕೃಷ್ಣ ಪ್ರಸಾದ್, ಶಿವ ವೈಭವ್ ಕೃಷ್ಣ, ಹೇಮಂತ್ ಹಾಗೂ ಮೇಘಾ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ತಯಾರಿಸಿದ ನವೀನ ಮಾದರಿಗಳನ್ನು ಮೌಲ್ಯಮಾಪನ ಮಾಡಿದರು.

ಬಹುಮಾನ ವಿತರಣೆ ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆ:
ಸ್ಪರ್ಧೆಯಲ್ಲಿ ವಿಜೇತರಾದ ಎರಡೂ ವಿಭಾಗದ ತಲಾ ಐದು ಅತ್ಯುತ್ತಮ ತಂಡಗಳಿಗೆ ಪ್ರಶಸ್ತಿಪತ್ರ ಸಹಿತ ಪುರಸ್ಕಾರ ನೀಡಲಾಯಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. 1000, ದ್ವಿತೀಯ ಸ್ಥಾನಕ್ಕೆ ರೂ. 750 ಹಾಗೂ ತೃತೀಯ ಸ್ಥಾನಕ್ಕೆ ರೂ. 500ನಗದು ಬಹುಮಾನ, ಮೆಡಲ್ ಬಹುಮಾನ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳಿಗೆ ಸಮಾಧಾನಕರ ಬಹುಮಾನ, ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ತಂಡಗಳು ಮುಂಬರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.

ವಿಜೇತರ ವಿವರ:
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ”Hydropower plant” ಮಾದರಿ ತಯಾರಿಸಿದ ಮಾನ್ಯ ಮತ್ತು ಗೌತಮಿ ಪ್ರಥಮ ಸ್ಥಾನ ಪಡೆದರೆ, ‘ಮಾಲಿನ್ಯ ನಿಯಂತ್ರಣ’ ಕುರಿತ ಮಾದರಿ ರಚಿಸಿದ ಸುಹಾನ್ ಮತ್ತು ಸಂಯಕ್ ದ್ವಿತೀಯ ಸ್ಥಾನ ಹಾಗೂ ”Day & Night” ಮಾದರಿ ರಚಿಸಿದ ಪ್ರತಿಜ್ಞಾ ಮತ್ತು ದೀಕ್ಷಾ ತೃತೀಯ ಸ್ಥಾನ ಪಡೆದರು.

ಪ್ರೌಢಶಾಲಾ ವಿಭಾಗದಲ್ಲಿ ”Water dispenser’ ಮಾದರಿ ತಯಾರಿಸಿದ ಯಶ್ಮಿತಾ, ರಾಶಿ ಮತ್ತು ತಂಡ ಪ್ರಥಮ ಸ್ಥಾನ, ”Earthquake experiment’ ಮಾದರಿ ಪ್ರದರ್ಶಿಸಿದ ಉಮೇಶ್, ಲಿಖಿತ್ ಮತ್ತು ಪವನ್ ದ್ವಿತೀಯ ಸ್ಥಾನ ಹಾಗೂ ”Lava lamp” ಮಾದರಿ ರಚಿಸಿದ ವಿಜೇಶ್, ಆಕಾಶ್ ಮತ್ತು ಪುನೀತ್ ತೃತೀಯ ಸ್ಥಾನ ಮುಡಿಗೇರಿಸಿಕೊಂಡರು.

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿಯನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಮೇಳದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಭಾಗವಹಿಸುವಿಕೆಯ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

Related posts

ವಾಣಿ ಶಿಕ್ಷಣ ಸಂಸ್ಥೆಗೆ ಅಮೇರಿಕದ ಡಾ. ರಾಮಯ್ಯ ಗೌಡ, ಶ್ರೀಮತಿ ಕೋನಿ ದಂಪತಿ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ 4 ನೇ ವರ್ಷದ ವರಮಹಾಲಕ್ಷ್ಮೀ ವ್ರತ ಪೂಜೆ

Suddi Udaya

ಕಲ್ಮಂಜ : ವೇದಮೂರ್ತಿ ಕೇಶವ ಭಟ್ ಚಿಪ್ಳೂಣ್ಕರ್ ನಿಧನ

Suddi Udaya

ಕುವೆಟ್ಟು ಸ.ಉ. ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಗುರುವಾಯನಕೆರೆ ಶಕ್ತಿನಗರದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರ ಸಾವು

Suddi Udaya

ಶಿರ್ಲಾಲು ಶ್ರೀರಾಮ್ ಫ್ರೆಂಡ್ಸ್ ಅಧ್ಯಕ್ಷರಾಗಿ ಜಿತೇಶ್, ಕಾರ್ಯದರ್ಶಿಯಾಗಿ ಸಂತೋಷ್

Suddi Udaya
error: Content is protected !!