27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನ ಶ್ರುತಿ ಮಣಕೀಕರ್ ಅವರಿಗೆ ಪಿ.ಎಚ್.ಡಿ ಪದವಿ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರುತಿ ಮಣಕೀಕರ್ ‘ಯೋಗೇಂದ್ರನಾಥ ಶರ್ಮಾ ಅರುಣ್ ಕೆ ಸತಸಯಿ ಔರ್ ಬಿಹಾರಿ ಸತಸಯಿ ಕಾ ತುಲನಾತ್ಮಕ ಅಧ್ಯಯನಕ್ಕೆ ಚೆನೈನ
ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.

ಸಭಾದ ಪ್ರಭಾರ ಕುಲಸಚಿವರು ಹಾಗು ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಎನ್. ಅಂಬಿಗ್ ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಮಹಾ ಪ್ರಬಂಧಕ್ಕೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಇವರ ಸಂಶೋಧನಾ ವಿಷಯಕ್ಕೆ ಸಂಬಂಧಿತ ಲೇಖನಗಳು ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ್ದಾರೆ. ಇವರ ಯೋಗೇಂದ್ರನಾಥ್ ಶರ್ಮಾ ಅರುಣ್ ಕೆ ಸತಸಯಿ ಔರ್ ಬಿಹಾರಿ ಸತಸಯಿ ಮೆ ಚಿತ್ರಿತ ನೀತಿ ತತ್ವ ಮತ್ತು ಸತಸಯಿ ಮೆ ಚಿತ್ರಿತ ಭಾರತೀಯ ಪರಂಪರಾ ಎಂಬ ಎರಡು ಲೇಖನಗಳು ಯುಜಿಸಿ ಕೇರ್ ಲಿಸ್ಟ್ ಜರ್ನಲ್ ನಲ್ಲಿ ಪ್ರಕಟಗೊಂಡಿರುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರಾಗಿರುವ ಇವರು ಕಳೆದ ಐದು ವರ್ಷಗಳಿಂದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪತಿ ಪ್ರವೀಣ್ ಚಿಪ್ಕರ್ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಯಲ್ಲಿ ಸಾಫ್ಟವೇರ್ ಡೆವಲಪರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಈ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Related posts

ಎನ್.ಎಮ್.ಎಮ್.ಎಸ್ ಪರೀಕ್ಷೆ: ಓಡಿಲ್ನಾಳ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿಗಳಾದ ರಶ್ಮಿ ಹಾಗೂ ಸುಜನ್ ರಿಗೆ ಉತ್ತಮ ಅಂಕ : ರಾಜ್ಯಮಟ್ಟದ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

Suddi Udaya

ಆನ್ಲೈನ್ ರಸಪ್ರಶ್ನೆ ಸ್ಪರ್ಧೆ: ವೇಣೂರು ಸ.ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ: ವಿಶೇಷ ಆಕರ್ಷಣೆ ಮೀನಿಗೆ ಗಾಳ ಹಾಕುವ ಸ್ಪರ್ಧೆ

Suddi Udaya

ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ

Suddi Udaya

ಬೆಳಾಲು ಶಿಲ್ಪಿ ಶಶಿಧರ ಆಚಾರ್ಯರಿಗೆ ಶಿಲ್ಪ ಕಲಾ ಅಕಾಡೆಮಿ ಕಲಾಕೃತಿ ಪ್ರಶಸ್ತಿ ಪ್ರಧಾನ

Suddi Udaya

2 ಲಕ್ಷ ಮೌಲ್ಯ ದ ಚಿನ್ನದ ಬ್ರೇಸ್ ಲೆಟ್ ಮರಳಿಸಿ‌ ಪ್ರಾಮಾಣಿಕತೆ ಮೆರೆದ ಬದ್ಯಾರಿನ ಝೈನುದ್ದೀನ್

Suddi Udaya
error: Content is protected !!