November 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕಾಮನಬಿಲ್ಲಿನ ವರ್ಣ ವೈಭವದಲ್ಲಿ ಪುಟಾಣಿಗಳ ಕಲರವ: ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ‘RAINBOW RADIANCE’ ಸಂಭ್ರಮ

ಗುರುವಾಯನಕೆರೆ: ಮಕ್ಕಳಲ್ಲಿ ಬಣ್ಣಗಳ ಕುರಿತ ಅರಿವು, ಸೃಜನಶೀಲತೆ ಹಾಗೂ ಪ್ರಕೃತಿಯ ವೈವಿಧ್ಯತೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಎಕ್ಸೆಲ್ ಟೆಕ್ನೋ ಶಾಲೆ, ಗುರುವಾಯನಕೆರೆಯಲ್ಲಿ ನ.5ರಂದು ಕಿಂಡರ್‌ಗಾರ್ಟನ್ ವಿಭಾಗದ ಪುಟಾಣಿಗಳಿಗಾಗಿ ‘RAINBOW RADIANCE – ಕಾಮನಬಿಲ್ಲಿನ ವರ್ಣ ವೈಭವ’ ಎಂಬ ವಿನೂತನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಯಿತು.

ಕಾಮನಬಿಲ್ಲಿನ ಏಳು ಸುಂದರ ಬಣ್ಣಗಳನ್ನು ಪ್ರತಿಬಿಂಬಿಸುವ ವರ್ಣರಂಜಿತ ಉಡುಪುಗಳಲ್ಲಿ ಮಿಂಚಿದ ಪುಟಾಣಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಬಣ್ಣಗಳ ಲೋಕದಲ್ಲಿ ಮಕ್ಕಳ ಸಂಭ್ರಮ, ಉತ್ಸಾಹ ಹಾಗೂ ಉಲ್ಲಾಸ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದ ಸಂಯೋಜಕಿ ಲೀನಾ ಪಿಂಟೋ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕಾಮನಬಿಲ್ಲಿನ ಏಳು ಬಣ್ಣಗಳಿಗೆ ಅನುಗುಣವಾಗಿ ವಿವಿಧ ಹಣ್ಣುಗಳು, ಆಹಾರ ಪದಾರ್ಥಗಳು ಹಾಗೂ ತಾಜಾ ಹಣ್ಣಿನ ರಸಗಳನ್ನು ಪ್ರದರ್ಶಿಸಲಾಯಿತು. ಈ ಮೂಲಕ ಮಕ್ಕಳಿಗೆ ಬಣ್ಣಗಳ ವೈವಿಧ್ಯತೆ, ಹಣ್ಣುಗಳ ಪೌಷ್ಟಿಕಾಂಶ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಮಹತ್ವವನ್ನು ಚಟುವಟಿಕೆಗಳ ಮೂಲಕ ಪರಿಚಯಿಸಲಾಯಿತು. ಬಣ್ಣಗಳನ್ನು ಕೇವಲ ಗುರುತಿಸುವುದಷ್ಟೇ ಅಲ್ಲದೆ, ಅವುಗಳನ್ನು ದೈನಂದಿನ ಜೀವನ ಹಾಗೂ ಪ್ರಕೃತಿಯೊಂದಿಗೆ ಬೆಸೆಯುವ ಅನುಭವವನ್ನು ಮಕ್ಕಳಿಗೆ ನೀಡಲಾಯಿತು.

ಶಿಕ್ಷಕಿಯರಾದ ಗೀತಾ, ಜೋಸ್ಲಿಟಾ ಲೋಬೊ, ಲವೀನಾ ಫೆರ್ನಾಂಡಿಸ್, ಪೂರ್ಣಿಮಾ ಆಚಾರ್ಯ, ಪ್ರೇಮ, ವಿಲ್ಮಾ, ಅಲಿಷಾ ಹಾಗೂ ಚೇತನಾ ಅವರು ಶ್ರಮಿಸಿದರು. ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.

ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಪ್ರಕೃತಿಯ ಬಣ್ಣಗಳ ಸೌಂದರ್ಯ, ಆಹಾರದ ಪೌಷ್ಟಿಕತೆ ಹಾಗೂ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆಯಾದ ಈ ಕಾರ್ಯಕ್ರಮವು ಪುಟಾಣಿಗಳಿಗೆ ಸಂತಸದಾಯಕ ಮತ್ತು ಅರ್ಥಪೂರ್ಣ ಕಲಿಕಾ ಅನುಭವವನ್ನು ನೀಡಿತು.

Related posts

ಎಸ್‌ಡಿಎಂ ಆರೋಹಂ-2026 ಸಮಾರೋಪ ಸಮಾರಂಭ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ಮಾಹಿತಿ ಕಾರ್ಯಾಗಾರ

Suddi Udaya

ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಶ್ರಮದಾನ

Suddi Udaya

ಸಿ.ಎ. ಇಂಟರ್ ಮೀಡಿಯೆಟ್ ತರಬೇತಿ: ದೇಶಕ್ಕೆ 10ನೇ ರ್‍ಯಾಂಕ್ ಗಳಿಸಿದ ಬಜಿರೆಯ ದೀಪಕ್ ಹೆಗ್ಡೆ

Suddi Udaya

ಉಜಿರೆ: ಶಾರದಾ ಕುಟುಂಬ ವಿಕಸನ ಮಂಡಳಿ ವತಿಯಿಂದ ‘ವಿದ್ಯಾರ್ಥಿ ಸಬಲೀಕರಣ ಮತ್ತು ರಕ್ಷಾನಿಧಿ’ ಕಾರ್ಯಯಾನ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ಯಶ್ ದಂಪತಿ ಭೇಟಿ: ದೇವರಿಗೆ ವಿಶೇಷ ಪೂಜೆ

Suddi Udaya
error: Content is protected !!