November 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಬೆಳ್ತಂಗಡಿವರದಿ

ಕಲ್ಲೇರಿ-ಉಪ್ಪಿನಂಗಡಿ ರಸ್ತೆ ದುರಸ್ತಿಗಾಗಿ ರಾಜ್ಯ ಸರ್ಕಾರಕ್ಕೆ ಗಡವು: ಶಾಸಕ ಹರೀಶ್ ಪೂಂಜ ಏಕಾಂಗಿ ಹೋರಾಟದ ಎಚ್ಚರಿಕೆ

ಬೆಳ್ತಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ಭಾಗವಾಗಿ ಬೆಳ್ತಂಗಡಿ ತಾಲೂಕಿನ ಇಳಂತಿಲ, ತಣ್ಣೀರುಪಂತ, ಬಾರ್ಯ, ತೆಕ್ಕಾರು, ಕಣಿಯೂರು ಪಂಚಾಯತ್ ವ್ಯಾಪ್ತಿಯ ಉಪ್ಪಿನಂಗಡಿ-ಕಲ್ಲೇರಿ ರಸ್ತೆ ದುರಸ್ಥಿಗಾಗಿ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ ಸಭೆ ನ.೧೧ ರಂದು ಕಲ್ಲೇರಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಪಾದಯಾತ್ರೆ ಕರಾಯದಿಂದ ಕಲ್ಲೇರಿ ತನಕ ನೂರಾರು ಮಂದಿ ಹೆಜ್ಜೆ ಹಾಕಿ ರಾಜ್ಯ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆಯ ದುಸ್ಥಿಯ ಬಗ್ಗೆ ಕಳೆದ ಮೂರುವರೆ ವರ್ಷದಿಂದ ನಿರಂತರವಾಗಿ ೯ ಬಾರಿ ಮನವಿ ಮಾಡಿದರೂ ಕುಂಭಕರ್ಣ ನಿದ್ದೆಯಲ್ಲಿ ರಾಜ್ಯ ಸರಕಾರವಿದೆ.

ನವೆಂಬರ್ ತಿಂಗಳ ಅಂತ್ಯದೊಳಗೆ ಈ ರಸ್ತೆಗೆ ಅನುದಾನ ಒದಗಿಸುವ ಆದೇಶ ಮಾಡಬೇಕು. ಒಂದು ವೇಳೆ ಮಾಡದೇ ಇದ್ದಲ್ಲಿ ವಿಧಾನಸೌಧ, ಲೋಕೋಪಯೋಗಿ ಸಚಿವರ ಕಚೇರಿ ಮುಂಭಾಗ ಏಕಾಂಗಿಯಾಗಿ ಹೋರಾಟ ನಡೆಸಲು ತಯಾರಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಸ್ತೆಯ ಅವ್ಯವಸ್ಥೆಯ ಕುರಿತು ವಿವರಿಸಿದ್ದೇನೆ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಪ್ರತೀವಾರ ಬೆಂಗಳೂರಿಗೆ ಹೋದಾಗ ಕಡತದ ಫಾಲೋಪಲ್ ಮಾಡುತ್ತಿದ್ದೇನೆ. ಇದವರೆಗೂ ಕಡತ ಮುಂದುವರಿಕೆ ಕಂಡುಬAದಿಲ್ಲ. ನವೆಂಬರ್ ತಿಂಗಳ ಅಂತ್ಯದೊಳಗೆ ಈ ರಸ್ತೆಗೆ ಅನುದಾನ ಒದಗಿಸುವ ಆದೇಶ ಮಾಡಬೇಕು. ಒಂದು ವೇಳೆ ಮಾಡದೇ ಇದ್ದಲ್ಲಿ ವಿಧಾನಸೌಧ, ಲೋಕೋಪಯೋಗಿ ಸಚಿವರ ಕಚೇರಿ ಮುಂಭಾಗ ಏಕಾಂಗಿಯಾಗಿ ಹೋರಾಟ ನಡೆಸಲು ತಯಾರಿದ್ದೇನೆ. ಈ ರಸ್ತೆಯ ಅಭಿವೃದ್ಧಿಯೊಂದಿಗೆ ಗುರುವಾಯನಕೆರೆ-ಮೂಡಬಿದಿರೆ(ಹೊಸಂಗಡಿ) ರಸ್ತೆಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ರ‍್ವಾರ, ಮಂಗಳೂರು ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ, ಪ್ರಭಾರಿ ಕವಿತಾ ಸನಿಲ್,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ ಟಿ. ಪ್ರಜ್ವಲ್ ಹಾಗೂ ಪ್ರಶಾಂತ್ ಪಾರೆಂಕಿ, ಮನ್ ಕಿ ಬಾತ್ ಪ್ರಮಖ್ ಸೀತಾರಾಮ ಬೆಳಾಲು, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಕಣಿಯೂರು ಮಹಾಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು ಹಾಗೂ ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಉಪಸ್ಥಿತರಿದ್ದರು.

ಕಲ್ಲೇರಿ-ಉಪ್ಪಿನಂಗಡಿ ರಸ್ತೆ ದುರಸ್ತಿಗಾಗಿ ರಾಜ್ಯ ಸರ್ಕಾರಕ್ಕೆ ಗಡವು: ಶಾಸಕ ಹರೀಶ್ ಪೂಂಜ ಏಕಾಂಗಿ ಹೋರಾಟದ ಎಚ್ಚರಿಕೆ

ಬೆಳ್ತಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ಭಾಗವಾಗಿ ಬೆಳ್ತಂಗಡಿ ತಾಲೂಕಿನ ಇಳಂತಿಲ, ತಣ್ಣೀರುಪಂತ, ಬಾರ್ಯ, ತೆಕ್ಕಾರು, ಕಣಿಯೂರು ಪಂಚಾಯತ್ ವ್ಯಾಪ್ತಿಯ ಉಪ್ಪಿನಂಗಡಿ-ಕಲ್ಲೇರಿ ರಸ್ತೆ ದುರಸ್ಥಿಗಾಗಿ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ ಸಭೆ ನ.11 ರಂದು ಕಲ್ಲೇರಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಪಾದಯಾತ್ರೆ ಕರಾಯದಿಂದ ಕಲ್ಲೇರಿ ತನಕ ನೂರಾರು ಮಂದಿ ಹೆಜ್ಜೆ ಹಾಕಿ ರಾಜ್ಯ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆಯ ದುಸ್ಥಿಯ ಬಗ್ಗೆ ಕಳೆದ ಮೂರುವರೆ ವರ್ಷದಿಂದ ನಿರಂತರವಾಗಿ ೯ ಬಾರಿ ಮನವಿ ಮಾಡಿದರೂ ಕುಂಭಕರ್ಣ ನಿದ್ದೆಯಲ್ಲಿ ರಾಜ್ಯ ಸರಕಾರವಿದೆ.
ನವೆಂಬರ್ ತಿಂಗಳ ಅಂತ್ಯದೊಳಗೆ ಈ ರಸ್ತೆಗೆ ಅನುದಾನ ಒದಗಿಸುವ ಆದೇಶ ಮಾಡಬೇಕು. ಒಂದು ವೇಳೆ ಮಾಡದೇ ಇದ್ದಲ್ಲಿ ವಿಧಾನಸೌಧ, ಲೋಕೋಪಯೋಗಿ ಸಚಿವರ ಕಚೇರಿ ಮುಂಭಾಗ ಏಕಾಂಗಿಯಾಗಿ ಹೋರಾಟ ನಡೆಸಲು ತಯಾರಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಸ್ತೆಯ ಅವ್ಯವಸ್ಥೆಯ ಕುರಿತು ವಿವರಿಸಿದ್ದೇನೆ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಪ್ರತೀವಾರ ಬೆಂಗಳೂರಿಗೆ ಹೋದಾಗ ಕಡತದ ಫಾಲೋಪಲ್ ಮಾಡುತ್ತಿದ್ದೇನೆ. ಇದವರೆಗೂ ಕಡತ ಮುಂದುವರಿಕೆ ಕಂಡುಬಂದಿಲ್ಲ. ನವೆಂಬರ್ ತಿಂಗಳ ಅಂತ್ಯದೊಳಗೆ ಈ ರಸ್ತೆಗೆ ಅನುದಾನ ಒದಗಿಸುವ ಆದೇಶ ಮಾಡಬೇಕು. ಒಂದು ವೇಳೆ ಮಾಡದೇ ಇದ್ದಲ್ಲಿ ವಿಧಾನಸೌಧ, ಲೋಕೋಪಯೋಗಿ ಸಚಿವರ ಕಚೇರಿ ಮುಂಭಾಗ ಏಕಾಂಗಿಯಾಗಿ ಹೋರಾಟ ನಡೆಸಲು ತಯಾರಿದ್ದೇನೆ. ಈ ರಸ್ತೆಯ ಅಭಿವೃದ್ಧಿಯೊಂದಿಗೆ ಗುರುವಾಯನಕೆರೆ-ಮೂಡಬಿದಿರೆ(ಹೊಸಂಗಡಿ) ರಸ್ತೆಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ರ‍್ವಾರ, ಮಂಗಳೂರು ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ, ಪ್ರಭಾರಿ ಕವಿತಾ ಸನಿಲ್,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ ಟಿ. ಪ್ರಜ್ವಲ್ ಹಾಗೂ ಪ್ರಶಾಂತ್ ಪಾರೆಂಕಿ, ಮನ್ ಕಿ ಬಾತ್ ಪ್ರಮಖ್ ಸೀತಾರಾಮ ಬೆಳಾಲು, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಕಣಿಯೂರು ಮಹಾಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು ಹಾಗೂ ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಉಪಸ್ಥಿತರಿದ್ದರು.

Related posts

ಲಾಯಿಲ: ಕುಂಟಿನಿ ಮುಹಿಯ್ಯುದ್ಧೀನ್ ಅರಬಿಕ್ ಮದರಸ ನೂತನ ಕಟ್ಟಡ ಉದ್ಘಾಟನೆ

Suddi Udaya

ಮಚ್ಚಿನ ಸಹಕಾರಿ ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸೇವಾ ಟ್ರಸ್ಟ್, ರೋಟರಿ ಬೆಂಗಳೂರು ಇಂದಿರಾ ನಗರ,ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಮದ್ದಡ್ಕ ನಿವಾಸಿ ಬೆಲ್ಚೆರ್ ಕ್ರಾಸ್ತ ಹೃದಯಾಘಾತದಿಂದ ನಿಧನ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.1,979 ಕೋಟಿ ವ್ಯವಹಾರ, ರೂ.5.85 ಕೋಟಿ ಲಾಭ, ಶೇ.15 ಡಿವಿಡೆಂಡ್

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆ ಶಾಲೆಗೆ ಬೆಂಗಳೂರು ಸುಂದರ ಭಾರತ ಪುಸ್ತಕ ಟ್ರಸ್ಟ್ ವತಿಯಿಂದ ನೋಟ್ ಬುಕ್ ವಿತರಣೆ

Suddi Udaya
error: Content is protected !!