27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸರಿಯಲ್ಲ: ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್

ಬೆಳ್ತಂಗಡಿ: ದಕ್ಷಿಣ ಕನ್ನಡ ಅಥವಾ ಕರಾವಳಿ ಜಿಲ್ಲೆಯ ಜನತೆಗೆ ಪ್ರಕೃತಿಯೇ ಮಾತೆ, ಪ್ರಕೃತಿ ದೇವರಿಗೆ ಸಮಾನ. ಇಲ್ಲಿನ ಜನತೆಯ ಆಚಾರ, ವಿಚಾರಗಳು, ಕೃಷಿ, ಸಂಸ್ಕೃತಿ, ಆರಾಧನೆ ಪ್ರಕೃತಿಯೊಂದಿಗೆ ಬೆರೆತು ಹೋಗಿವೆ. ಅದರಲ್ಲೂ ಬೆಳ್ತಂಗಡಿಯ ಜನತೆ ತಲೆ ತಲಾಂತರದಿಂದ ಕಾಡಂಚಿನಲ್ಲಿ ದುಡಿದು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಕುಗ್ರಾಮದ ಪಟ್ಟಿಯಲ್ಲಿ ತಾಲೂಕಿನ ಕೆಲ ಗ್ರಾಮಗಳೂ ಇದ್ದದ್ದು ಇದಕ್ಕೆ ಸಾಕ್ಷಿ. ಇದೀಗ ಕೇಂದ್ರ ಸರಕಾರ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಆತಂಕದ ವಿಚಾರ. ಇದು ಜಾರಿಯಾದಲ್ಲಿ ಬೆಳ್ತಂಗಡಿಯ ಚಾರ್ಮಾಡಿ, ಕಳೆಂಜ, ಕೂತ್ಲೂರು, ಮಲವಂತಿಗೆ, ನಡ, ನಾಲ್ಕೂರು, ನಾವೂರು, ನೆರಿಯ, ಪುದುವೆಟ್ಟು, ರೆಖ್ಯಾ, ಸವಣಾಲು, ನಾರಾವಿ, ಶಿಬಾಜೆ, ಶಿಶಿಲ, ಶಿರ್ಲಾಲು, ಸುಲ್ಕೇರಿ ಹಾಗೂ ಸುಲ್ಕೇರಿಮೊಗ್ರು ಸೇರಿದಂತೆ ಹಲವು ಗ್ರಾಮಗಳ ಜನತೆ ತೊಂದರೆ ಅನುಭವಿಸಲಿದ್ದಾರೆ.

ಈ ಪ್ರದೇಶಗಳಲ್ಲಿ ಪರಿಶಿಷ್ಟ ವರ್ಗಗಳ ಜನತೆಯೂ ವಾಸಿಸುತ್ತಿದ್ಧಾರೆ ಎಂಬುದು ಉಲ್ಲೇಖನೀಯ ಅಂಶ. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ದೇಶದ ವಿವಿಧ ಭಾಗಗಳಾದ ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಘಢ, ಓಡಿಸ್ಸಾ, ನಾಗಾಲ್ಯಾಂಡ್, ಮೆಘಾಲಯ, ಅರುಣಾಚಲ ಪ್ರದೇಶ ಮೊದಲಾದ ರಾಜ್ಯಗಳಲ್ಲೂ ಅರಣ್ಯ ಪ್ರದೇಶಗಳಲ್ಲಿ ಜನತೆ ತಮ್ಮ ಸಂಸ್ಕೃತಿ ಆಚರಣೆಗಳ ಜೊತೆಗೆ ಕೃಷಿ ಮಾಡಿಕೊಂಡು ಬದುಕುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಅವಕಾಶ ನೀಡಬೇಕಿದೆ. ಕೇಂದ್ರ ಸರ್ಕಾರ ಕೂಡಲೇ ಕರಡು ಅಧಿಸೂಚನೆಯನ್ನು ಮರುಪರಿಶೀಲನೆ ನಡೆಸಬೇಕು. ರಾಜ್ಯ ಸರ್ಕಾರದೊಂದಿಗೆ ಸಮಗ್ರ ಚರ್ಚೆ ನಡೆಸಬೇಕು. ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಣೆ ಮಾಡಿ, ಜನರ ಆತಂಕಗಳಿಗೆ ಸ್ಪಷ್ಟ ಉತ್ತರ ನೀಡಬೇಕಿದೆ ಎಂದು ಜಿಲ್ಲಾ ಕೆ.ಡಿ.ಪಿ. ಸದಸ್ಯ ಸಂತೋಷ್ ಕುಮಾರ್ ಲಾಯಿಲ ಒತ್ತಾಯಿಸಿದ್ದಾರೆ.

Related posts

ಮೇ. 25ರಿಂದ ಮೆಟ್ರಿಕ್ ನಂತರ ಹಾಗೂ ಪೂರ್ವದ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಕೆ

Suddi Udaya

ಕೊಕ್ಕಡ ಸಮೀಪ ಸರ್ಕಾರಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿ

Suddi Udaya

ಉಜಿರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಎಮ್. ಗೋಪಾಲಕೃಷ್ಣ ಶೆಟ್ಟಿ (ಎಂ.ಜಿ ಶೆಟ್ಟಿ ) ನಿಧನ

Suddi Udaya

ಲೋಕಸಭಾ ಚುನಾವಣೆ, ಶಾಸಕ ಹರೀಶ್ ಪೂಂಜರವರು ತಾಲೂಕಿನ ಹಲವಾರು ಮತಗಟ್ಟೆಗಳಿಗೆ ಭೇಟಿ

Suddi Udaya

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಬೆಳಾಲು: ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ 11ನೇ ವರ್ಷದ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!