27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆಟಿದ ಕಷಾಯ ಮತ್ತು ಮೆತ್ತೆಗಂಜಿ ವಿತರಣೆ

ಬೆಳ್ತಂಗಡಿ : ರಾಜ ಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ರಾಜ ಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 588 ನೇ ಸೇವಾ ಯೋಜನೆ 3ನೇ ವರ್ಷದ ಆಟಿದ ಕಷಾಯ ಮತ್ತು ಮೆತ್ತೆಗಂಜಿ ವಿತರಣಾ ಕಾರ್ಯಕ್ರಮ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ರಾಜ ಕೇಸರಿ ಸೇವಾ ಟ್ರಸ್ಟ್ ಅಧ್ಯಕ್ಷ ಜಗದೀಶ್ ಲಾಯಿಲ ವಹಿಸಿದರು.

ರಾಜ ಕೇಸರಿ ಸೇವಾ ರಿ ಟ್ರಸ್ಟ್ ಜಿಲ್ಲಾಧ್ಯಕ್ಷ ಸಂತೋಷ್ ಕೂಲ್ಯ ಕಾರ್ಯಕ್ರಮ ಉದ್ಘಾಟಿಸಿ ನನಗೆ ಬಹಳ ಖುಷಿಯಾಗಿದೆ ಇಂತಹ ಸಂಘಟನೆಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಇದು ನನಗೆ ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಹಶೀಲ್ದಾರ್ ಎಸ್ ಎನ್ ನರಗುಂದ ಆಗಮಿಸಿ, ನಾನೀಗ ಪ್ರಥಮ ಬಾರಿಗೆ ಕುಡಿಯುತ್ತಾ ಇದ್ದೇನೆ ಬಹಳ ಕಹಿಯಾಗಿದೆ ಆರೋಗ್ಯಕ್ಕೆ ಒಳ್ಳೇದು ಎಂದು ಶ್ಲಾಘಿಸಿ ನಿಮ್ಮ ಕಾರ್ಯಕ್ರಮಕ್ಕೆ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಸುದ್ದಿ ಉದಯ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕ ತುಕಾರಾಮ್ ಬಿ, ವಿಜಯವಾಣಿ ವರದಿಗಾರ ಮನೋಹರ್ ಬಳಂಜ, ಸೀತಾರಾಮ್ ಶೆಟ್ಟಿ ಮಾಲಕರು ವೈಭವ್ ಹಾರ್ಡ್ವೇರ್ ಗುರುವಾಯನಕೆರೆ ಉಪಸ್ಥಿತರಿದ್ದರು.

ಸಾವಿರಾರು ಮಂದಿ ಈ ಕಾರ್ಯಕ್ರಮದ ಸದಪಯೋಗಪಡಿಸಿಕೊಂಡರು. ಖಾಸಗಿ ಬಸ್ ನೌಕರರು, ಗೌರ್ಮೆಂಟ್ ಬಸ್ ಸಿಬ್ಬಂದಿಗಳು, ರಿಕ್ಷಾ ಚಾಲಕರು, ಟೂರಿಸ್ಟ್ ವೆಹಿಕಲ್ಸ್ ಡ್ರೈವರ್ ತುಂಬಾ ಜನ ಖುಷಿ ವ್ಯಕ್ತಪಡಿಸಿದರು. ಸಾರ್ವಜನಿಕರು ಇಂತ ಸೇವೆ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಜ ಕೇಸರಿ ಸೇವಾ ಟ್ರಸ್ಟಿನ ಲೋಕೇಶ್ ಮಂಗಳಾದೇವಿ, ಸಂದೀಪ್ ಸಾಲ್ಯಾನ್, ವರುಣ್ ಕುಮಾರ್ ಬಪ್ಪನಾಡು, ಶರತ್ ಕುಮಾರ್, ಮನೋಜ್ ಬೆಂಜನಪದ, ಸತೀಶ್ ವಾಮಾಂಜೂರು, ಪ್ರಸಾದ್ ಕುಲಾಲ್, ಗೌತಮ್ ಪೂಜಾರಿ,
ವಿನೋದ್ ಲಾಯಿಲ, ಸಂದೀಪ್ ಬೆಳ್ತಂಗಡಿ, ಶರತ್ ಕೆಎಸ್ , ಸಂದೇಶ್, ಶರತ್ ಕರಾಯ, ಪ್ರವೀಣ್ ಆಚಾರ್ಯ, ಸಂತೋಷ್ ಲಾಯಿಲ, ಪುನೀತ್ ಲಾಯಿಲ, ಪ್ರಶಾಂತ್ ಗುರುವಾಯನಕೆರೆ , ದೇವರಾಜ್ ಪೂಜಾರಿ, ಕಿಶನ್ ಚಂದ್ರ, ಜಯಂತ್, ಅಕ್ಷತ್, ವಸಂತ್., ಗಣೇಶ್ , ಸತೀಶ್ ಕಂಗಿತ್ತಲ್, ನಿತೇಶ್, ಪ್ರಜ್ವಲ್ ಉಪಸ್ಥಿತರಿದ್ದರು.

ರಾಜ ಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಶಾಖೆಯ ಮಾಸಿಕ ಸಭೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಜಯೇಶ್ ಭೇಟಿ

Suddi Udaya

ಭಾರಿ ಮಳೆ ನಾಳೆ (ಜೂ.27) ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Suddi Udaya

ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಾರಾವಿ ಸೂರ್ಯನಾರಾಯಣ ದೇವಸ್ಥಾನಕ್ಕೆ ದೇಣಿಗೆ ಹಸ್ತಾಂತರ

Suddi Udaya

ಪುಂಜಾಲಕಟ್ಟೆ ಬಿ. ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್‌ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್

Suddi Udaya
error: Content is protected !!