27.1 C
ಪುತ್ತೂರು, ಬೆಳ್ತಂಗಡಿ
September 27, 2026
ಆರೋಗ್ಯ

ಬಣಕಲ್‌ ಸಾಯಿಕೃಷ್ಣ ಹೆಲ್ತ್ ಸೆಂಟರ್ ನಲ್ಲಿ ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರ

ಬಣಕಲ್, ಮೂಡಿಗೆರೆ :ಸೆ. 27: ಸಾಯಿ ಕೃಷ್ಣ ಹೆಲ್ತ್ ಸೆಂಟರ್, ಬಣಕಲ್ ಹಾಗೂ ಸಾಯಿ ಕೃಷ್ಣ ದಂತ ಚಿಕಿತ್ಸಾ ಕೇಂದ್ರ,
ಬೆಂದ್ರಾಳ ವೆಂಕಟಕೃಷ್ಣ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ)ಕಕ್ಕಿಂಜೆ,ಶ್ರೀಕೃಷ್ಣ ಆಸ್ಪತ್ರೆ, ಸಹಯೋಗದಲ್ಲಿ ಯೆನೆಪೋಯ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರವು ಸೆಪ್ಟೆಂಬರ್ 27ರಂದು ಸಾಯಿ ಕೃಷ್ಣ ಹೆಲ್ತ್ ಸೆಂಟರ್, ಬಣಕಲ್‌ನಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉಧ್ಘಾಟಿಸಿ ಶ್ರೀ ಕೃಷ್ಣ ಆಸ್ಪತ್ರೆ,ಕಕ್ಕಿಂಜೆಯ ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ ಸ್ವರೂಪ್ ಮಾತನಾಡಿ, ಸಾಯಿಕೃಷ್ಣ ಹೆಲ್ತ್ ಸೆಂಟರ್,ದಂತ ಚಿಕಿತ್ಸಾ ವಿಭಾಗದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ, ಗ್ರಾಮಿಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಲು ಈ ಶಿಬಿರವನ್ನು ಆಯೋಜಿಸಲಾಗಿದೆ,ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು, ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ಶ್ರೀ ಅನೀಶ್ ಕೃಷ್ಣ ಇರ್ವತ್ರಾಯ, ದಂತ ವ್ಯೆದ್ಯಾದಿಕಾರಿ ಮೊಹಮ್ಮದ್ ಮಿಫ್ರಾ,ಸಾಯಿಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಇಲ್ಲಿ ಆಡಳಿತ ನಿರ್ದೆಶಕಿ ಶ್ರೀಮತಿ ಭವ್ಯ,ಮುಖ್ಯ ವ್ಯೆದ್ಯದಿಕಾರಿ ಡಾ. ಚ್ಯೆತನ್ಯ ಸ್ವಾಗತಿಸಿ ಮಾತನಾಡಿ ಆಸ್ಪತ್ರೆಯ ಸೌಲಭ್ಯಗಳನ್ನು ವಿವರಿಸಿದರು,ವ್ಯೆದ್ಯಾದಿಕಾರಿಗಳಾದ ಡಾ.ಸುಮಂತ್, ಡಾ. ಶ್ರೀ ಲಕ್ಷ್ಮಿ, ದಂತ ವ್ಯೆದ್ಯೆ ಡಾ. ಅಸ್ಮಾ, ಯೆನೆಪೋಯ ದಂತಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವ್ಯೆದ್ಯಾಧಿಕಾರಿ ಡಾ. ನೈಮಾ, ಮಾತನಾಡಿ ಶಿಬಿರದ ಪ್ರಯೋಜನಗಳನ್ನು ವಿವರಿಸಿದರು,ಕಾರ್ಯಕ್ರಮದಲ್ಲಿ ಡಾ.ನದಿಮ್, ಶಿಬಿರ ಸಂಯೋಜಕ ಶಿರಾಜ್,ಯೆನೆಪೋಯ ಕಾಲೇಜಿನ ದಂತ ವೈದ್ಯರು ಮೊದಲಾದವರಿದ್ದರು.


ಕಾರ್ಯಕ್ರಮದಲ್ಲಿ ಬಣಕಲ್ ನ ಜೀವರಕ್ಷಕ ಅಂಬುಲೆನ್ಸ್ ಚಾಲಕ ಹಾಗೂ ಆಪದ್ಬಾಂದವ,ಸಮಾಜ ಸೇವಕ ಶ್ರೀ ಮಹಮ್ಮದ್ ಆರೀಫ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು,
ಶಿಬಿರದಲ್ಲಿ ಉಚಿತ ದಂತ ತಪಾಸಣೆ ಹಾಗೂ ದಂತ ವೈದ್ಯರ ಸಲಹೆ, ಅಗತ್ಯವಿರುವ ಹಲ್ಲುಗಳ ಕೀಳುವಿಕೆ, ಹಲ್ಲು ತುಂಬಿಸುವಿಕೆ, ಹಲ್ಲುಗಳ ಶುಚೀಕರಣ ಸೇರಿದಂತೆ ವಿವಿಧ ದಂತ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುವುದು. 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ದಂತಪಂಕ್ತಿ ಅಳವಡಿಕೆ ಹಾಗೂ ಇಂಪ್ಲಾಂಟ್ ಆಧಾರಿತ ದಂತ ಚಿಕಿತ್ಸೆಗೆ ಸಲಹೆ ಮತ್ತು ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ, ಕಲ್ಪಿಸಲಾಗಿತ್ತು,ನೂರಕ್ಕು ಅಧಿಕ ಸಾರ್ವಜನಿಕರು ಪಾಲ್ಗೊಂಡು ಮೊದಲಾದವುಗಳ ಸದುಪಯೋಗ ಪಡೆದುಕೊಂಡರು,ಕಾರ್ಯಕ್ರಮದಲ್ಲಿ ಆರಿಶ್ ನಿರೂಪಿಸಿ, ಡಾ. ಸುಮಂತ್ ಧನ್ಯವಾದವಿತ್ತರು, ಸುದರ್ಶನ್ ಜೈನ್,ಗಣೇಶ್,ಅನಂತಪ್ರಸಾದ್, ಜೈಸನ್ ಸಹಕರಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸತತ 2ನೇ ಬಾರಿಗೆ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಮಾನ್ಯತಾ ಪ್ರಮಾಣಪತ್ರ

Suddi Udaya

ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಾಳೆಯಿಂದ ಉಚಿತ ಡಯಾಲಿಸಿಸ್ ಸೇವೆ

Suddi Udaya

ಲಯನ್ಸ್ ಭವನ ಶಾಖೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ವಿ. ಹಿಂ. ಪ, ಬಜರಂಗದಳ ಪದ್ಮುಂಜ ಘಟಕದಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಆಂದೋಲನ

Suddi Udaya

ವೇಣೂರು ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಕಳಿಯ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya
error: Content is protected !!