30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಕ್ಕಿಂಜೆ ಮಾಂಡೋವಿ ಮೋಟಾರ್ಸ್‌ನಲ್ಲಿ ನ್ಯೂ ಬ್ರೆಝಾ ಕಾರು ಬಿಡುಗಡೆ

ಬೆಳ್ತಂಗಡಿ: ಹಲವು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವ ಮಾಂಡೋವಿ ಮೋಟಾರ್ಸ್ ಸಂಸ್ಥೆಯ ಕಕ್ಕಿಂಜೆ ಶೋರೂಮ್‌ನಲ್ಲಿ ನೂತನ ಬ್ರೆಝಾ ಕಾರನ್ನು ಆ.11ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಕಾರಿನ ಬಿಡುಗಡೆ ಬಳಿಕ ನೂತನ ಬ್ರೆಝಾದಲ್ಲಿ ಅಳವಡಿಸಲಾಗಿರುವ ಆಧುನಿಕ ತಂತ್ರಜ್ಞಾನ, ಸಾಮರ್ಥ್ಯ, ರಸ್ತೆ ಸುರಕ್ಷತಾ ವೈಶಿಷ್ಟ್ಯಗಳು ಸೇರಿದಂತೆ ವಿವಿಧ ವಿಶೇಷತೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾಂಡೋವಿ ಮೋಟಾರ್ಸ್ ಸೇಲ್ಸ್ ವಿಭಾಗದ ಜಿಎಂ ಶಶಿಧರ ಕಾರಂತ್, ಎಸ್‌ಸಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ವಿವೇಕ್ ಜೈನ್, ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್, ವಿ& ವಿ ಸಂಸ್ಥೆಯ ಮುಖ್ಯಸ್ಥರಾದ ಬಾಬುರಾಜ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ರಾಜೇಶ್, ಉಪನ್ಯಾಸಕ ಜೋಸೆಫ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಂಸ್ಥೆಯ ಸೇವೆ ಹಾಗೂ ನೂತನ ಕಾರಿನ ಕುರಿತು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಬ್ರೆಝಾ ಕಾರಿನ ಕೀಲಿಯನ್ನು ಮಹಮ್ಮದ್ ಸಫಾನ್, ಶಾಜಿ ಜೋಸೆಫ್ ಹಾಗೂ ಹಾರಿಸ್ ಅವರಿಗೆ ಹಸ್ತಾಂತರಿಸಲಾಯಿತು.

ಸಹಾಯಕ ಸೇಲ್ಸ್ ಮ್ಯಾನೇಜರ್ ಸುಜಿತ್ ಸ್ವಾಗತಿಸಿದರು. ಟೀಮ್ ಮ್ಯಾನೇಜರ್ ಚರಣ್ ಕುಮಾರ್ ವಂದಿಸಿದರು. ನವೀನ್ ಕುಮಾರ್, ಸಾಬು ಜೋಸೆಫ್, ಡೇಸಿಕ್, ಬಾಷಾ, ಲತೇಶ್ ಬಳಂಜ ಹಾಗೂ ಇನ್ನಿತರರು ಸಹಕರಿಸಿದರು.

Related posts

ಗಾಳಿ ಮಳೆಗೆ ಸವಣಾಲು ಬೇಬಿಯವರ ಮನೆಗೆ ಹಾನಿ

Suddi Udaya

ಡಿ.29,30,31 ಸುಲ್ಕೇರಿ ಬಸದಿ ಧಾಮ ಸಂಪ್ರೋಕ್ಷಣ ಪೂರ್ವಕ ಪ್ರತಿಷ್ಠಾ ಮಹೋತ್ಸವ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ಜೋಶನ್‌ ರಫಾಯೆಲ್‌ ಡಿಸೋಜ ರಿಗೆ ಮಡಂತ್ಯಾರು ಸೇಕ್ರೆಡ್‌ ಹಾಟ್‌೯ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನ

Suddi Udaya

ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅನುಜ್ಞಾ ತೇರ್ಗಡೆ

Suddi Udaya

ಕೂಕ್ರಬೆಟ್ಟು, ಕೊಕ್ರಾಡಿ ಶಾಲೆಗಳ ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಲಾ ₹ 2 ಲಕ್ಷ ಮಂಜೂರು

Suddi Udaya

ಗಡಿ ಪಾರು ಮಾಡಿ ಎನ್ನಲು ರಕ್ಷಿತ್ ಶಿವರಾಂ ಯಾರು..? ಕುಂಬಳಕಾಯಿ ಕಳ್ಳ ಎಂದಾಗ ಹೆಗಲು ಮುಟ್ಟಿ ಅರಚಾಡಿದರೆ ನಾವೇನು ಮಾಡಲು ಸಾಧ್ಯ:ತಾ.ಪಂ ಮಾಜಿ ಸದಸ್ಯ ಮಂಜುನಾಥ್ ಸಾಲ್ಯಾನ್

Suddi Udaya
error: Content is protected !!